'ಮಜಾಭಾರತ'ಕ್ಕೆ ಬಂದ ಜೂನಿಯರ್ ದರ್ಶನ್: ಬುಲ್ ಬುಲ್ ಫುಲ್ ಶಾಕ್.!
Recommended Video

ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಹೀಗೆ ಕೆಲವು ಸಿನಿಮಾ ನಟರನ್ನ ನೋಡದ ಜನರು ಅವರಂತೆ ಕಾಣುವ ಜೂನಿಯರ್ ಸ್ಟಾರ್ ಗಳನ್ನ ನೋಡಿ ಖುಷಿಪಡ್ತಾರೆ. ಜೂನಿಯರ್ ಅಣ್ಣಾವ್ರು, ಜೂನಿಯರ್ ವಿಷ್ಣುದಾದಾ, ಜೂನಿಯರ್ ಶಂಕರ್ ನಾಗ್ ಹೀಗೆ ಬಹುತೇಕ ಎಲ್ಲ ಸಿನಿಮಾ ನಟರಿಗೂ ಜೂನಿಯರ್ ಇರ್ತಾರೆ.
ಅವರಂತೆ ಸ್ಟೈಲ್, ಅವರಂತೆ ಲುಕ್, ಅವರಂತೆ ನಡೆ ಎಲ್ಲವನ್ನ ಅಭ್ಯಾಸ ಮಾಡಿರ್ತಾರೆ. ಅದಕ್ಕೆ ಅವರನ್ನ ಜೂನಿಯರ್ ಎಂದೇ ಕರೆಯುತ್ತಾರೆ.
ಇದೀಗ, ಕಲರ್ಸ್ ಸೂಪರ್ ಕಾರ್ಯಕ್ರಮದಲ್ಲೊಂದು ವಿಶೇಷ ಘಟನೆ ನಡೆದಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಮಜಾಭಾರತ ಶೋಗೆ ಜೂನಿಯರ್ ದರ್ಶನ್ ಬಂದಿದ್ದಾರೆ. ಇವರನ್ನ ನೋಡ್ತಿದ್ರೆ ಸ್ವತಃ ದರ್ಶನ್ ಅವರೇನಾ ಎಂಬ ಫೀಲ್ ಬರುತ್ತೆ. ಇವರನ್ನ ನೋಡಿ ರಚಿತಾ ಕೂಡ ಫುಲ್ ಶಾಕ್ ಆಗ್ಬಿಟ್ಟಿದ್ದಾರೆ. ಯಾರವರು? ಮುಂದೆ ಓದಿ.....

ಆಟೋ ಡ್ರೈವರ್ ಅವಿನಾಶ್
ಕಾಮಿಡಿ ಕಾರ್ಯಕ್ರಮ ಮಜಾಭಾರತ ಶೋಗೆ ಜೂನಿಯರ್ ದರ್ಶನ್ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾಗಿರುವ ಇವರು ವೃತ್ತಿಯಲ್ಲಿ ಆಟೋ ಡ್ರೈವರ್. ಫೇಸ್ ಬುಕ್ ನಲ್ಲಿ ವಿಡಿಯೋ ನೋಡಿದ ಕಲರ್ಸ್ ಸೂಪರ್ ವಾಹಿನಿಯವರು ಇವರನ್ನ ಶೋಗೆ ಆಯ್ಕೆ ಮಾಡಿಕೊಂಡಿದೆ.

ರಚಿತಾ ಫುಲ್ ಶಾಕ್
ಜೂನಿಯರ್ ದರ್ಶನ್ ಅವರನ್ನ ನೋಡಿದ ನಟಿ ರಚಿತಾ ರಾಮ್ ಒಂದು ಕ್ಷಣ ಎದ್ದು ನಿಂತು ಅಚ್ಚರಿಯಾದರು. ಅವಿನಾಶ್ ಅವರ ಲುಕ್, ಸ್ಟೈಲ್ ನೋಡಿ ಇದು ಡ್ಯೂಪ್ಲಿಕೇಟ್ ಅಥವಾ ನಿಜನಾ ಎಂದು ಖಚಿತಪಡಿಸಿಕೊಂಡರು. ಅವಿನಾಶ್ ಅವರನ್ನ ನೋಡಿ ಬುಲ್ ಬುಲ್ ಅಂತೂ ಫುಲ್ ಶಾಕ್ ಆಗಿದ್ದಾರೆ.

ಪ್ರತಿನಿತ್ಯನೂ ಇರ್ತಾರೆ ಜೂನಿಯರ್ ಬಾಸ್
ಮಜಾಭಾರತ ಸೀಸನ್ 3 ಸ್ಪರ್ಧಿಯಾಗಿರುವ ಅವಿನಾಶ್ (ಜೂನಿಯರ್ ದರ್ಶನ್) ಇನ್ಮುಂದೆ ಪ್ರತಿನಿತ್ಯನೂ ಇರ್ತಾರೆ. ವಾರದಲ್ಲಿ ಐದು ದಿನ ಮಜಾಭಾರತ ಕಾರ್ಯಕ್ರಮ ನಡೆಯಲಿದ್ದು, ಸ್ಕಿಟ್ ಗಳಲ್ಲಿ ಅಭಿನಯಿಸಲಿದ್ದಾರೆ.

ಫುಲ್ ಥ್ರಿಲ್ ರಚಿತಾ-ಗುರುಕಿರಣ್
ಮಜಾಭಾರತದ ತೀರ್ಪುಗಾರರಲ್ಲಿ ಒಬ್ಬರಾದ ರಚಿತಾ ರಾಮ್, ಅವಿನಾಶ್ (ಜೂನಿಯರ್ ದರ್ಶನ್) ಅವರನ್ನ ನೋಡಿ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ರಚಿತಾ ಮಾತ್ರವಲ್ಲ, ಇನ್ನೊಬ್ಬ ತೀರ್ಪುಗಾರ ಗುರುಕಿರಣ್ ಹಾಗೂ ನಿರೂಪಕಿ ಅನುಪಮಾ ಗೌಡ ಕೂಡ ಶಾಕ್ ಆಗಿದ್ದಾರೆ.


Click it and Unblock the Notifications











