»   » 'ಕಾಫಿ ವಿತ್ ಕರಣ್' ಶೋದಲ್ಲಿ ಗಾಯಕ ಜಸ್ಟಿನ್ ಬೀಬರ್ ಮಾತುಕತೆ?

'ಕಾಫಿ ವಿತ್ ಕರಣ್' ಶೋದಲ್ಲಿ ಗಾಯಕ ಜಸ್ಟಿನ್ ಬೀಬರ್ ಮಾತುಕತೆ?

Posted By:
Subscribe to Filmibeat Kannada

ಪ್ರೀತಿ, ಮದುವೆ ಕುರಿತ ಇತ್ಯಾದಿ ಗಾಸಿಪ್ ವಿಷಯಗಳನ್ನು ಕೆದಕುತ್ತಾ ಸೆಲೆಬ್ರಿಟಿಗಳ ಕಾಲು ಎಳೆಯುವ ಕರಣ್ ಜೋಹರ್ ರವರ ಮೋಸ್ಟ್ ಪಾಪ್ಯುಲರ್ ಶೋ 'ಕಾಫಿ ವಿತ್ ಕರಣ್' ಆರನೇ ಆವೃತ್ತಿ ಸದ್ಯದಲ್ಲೇ ಶುರುವಾಗಲಿದೆ.

ಅಂದಹಾಗೆ ಸ್ಟಾರ್ ವರ್ಲ್ಡ್ ಇಂಡಿಯಾ ಮತ್ತು ಸ್ಟಾರ್ ಪ್ಲಸ್, ಸ್ಟಾರ್ ಒನ್ ವಾಹಿನಿಗಳಲ್ಲಿ ಪ್ರಸಾರವಾಗುವ ಈ ಫೇಮಸ್ ಟಾಕ್ ಶೋ'ದ ಪ್ರತಿ ಎಪಿಸೋಡ್ ಬಗ್ಗೆಯೂ ವೀಕ್ಷಕರಿಗೆ ಯಾವ ಸೆಲೆಬ್ರಿಟಿಗಳು ಟಾಕ್ ಶೋ ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿರುತ್ತದೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಈಗ ಸದ್ಯದಲ್ಲೇ ಶುರುವಾಗಲಿರುವ 'ಕಾಫಿ ವಿತ್ ಕರಣ್' ಸೀಸನ್ 6 ರ ಬಗ್ಗೆ ತಮ್ಮ ಹಿಂದಿನ ಸೀಸನ್ ಗಳಿಗಿಂತ ಅತ್ಯಧಿಕವಾದ ಕ್ರೇಜ್ ಹೆಚ್ಚಿಸಿದ್ದಾರೆ. ಕಾರಣ 'ಕಾಫಿ ವಿತ್ ಕರಣ್' ಆರನೇ ಸೀಸನ್ ಮೊದಲ ಸಂಚಿಕೆಯಲ್ಲಿ ಅತಿಥಿಯಾಗಿ ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಕಾಫಿ ವಿತ್ ಕರಣ್' ಅತಿಥಿ ಜಸ್ಟಿನ್ ಬೀಬರ್

ಹೌದು, ಬಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ರವರ 'ಕಾಫಿ ವಿತ್ ಕರಣ್' ಆರನೇ ಸೀಸನ್ ನ ಮೊದಲ ಎಪಿಸೋಡ್ ಗೆ ಗ್ರ್ಯಾಮ್ಮಿ ಪ್ರಶಸ್ತಿ ವಿಜೇತ ಗಾಯಕ ಜಸ್ಟಿನ್ ಬೀಬರ್ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಮೊದಲ ಬಾರಿಗೆ ಭಾರತಕ್ಕೆ ಜಸ್ಟಿನ್ ಬೀಬರ್ ಭೇಟಿ

ವಿಶೇಷ ಅಂದ್ರೆ ವಿಶ್ವ ವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದೇ ಮೊಟ್ಟ ಮೊದಲ ಬಾರಿಗೆ 'ಜಿಯೋ ಜಸ್ಟಿನ್ ಬೀಬರ್' ಪ್ರವಾಸದ ಹಿನ್ನೆಲೆಯಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಕರಣ್ ಜೋಹರ್ ಸಹ ತಮ್ಮ ಟಾಕ್ ಶೋ 'ಕಾಫಿ ವಿತ್ ಕರಣ್' ದಲ್ಲಿ ಸಂದರ್ಶನ ಕಾರ್ಯಕ್ರಮ ನಡೆಸಲಿದ್ದಾರಂತೆ.

ಜಸ್ಟಿನ್ ಬೀಬರ್ 'ಕಾಫಿ ವಿತ್ ಕರಣ್' ಶೋ ಯಾವಾಗ?

ಎಲ್ಲವೂ ಪ್ಲಾನ್ ಪ್ರಕಾರ ನಡೆದಲ್ಲಿ 'ಕಾಫಿ ವಿತ್ ಕರಣ್' ಟಾಕ್ ಶೋದಲ್ಲಿಯ ಜಸ್ಟಿನ್ ಬೀಬರ್ ಸಂದರ್ಶನ ಕಾರ್ಯಕ್ರಮ ಇಂಟರ್ ನ್ಯಾಷನಲ್ ಸೆಲೆಬ್ರಿಟಿಯೊಬ್ಬರ ಭಾರತದ ಮೊದಲ ಚಾಟ್ ಶೋ ಫಾರ್ಮ್ಯಾಟ್ ಆಗಲಿದೆ. ಆದರೆ ಜಸ್ಟಿನ್ ಬೀಬರ್ ಅವರೊಂದಿಗಿನ 'ಕಾಫಿ ವಿತ್ ಕರಣ್' ಟಾಕ್ ಶೋ ಯಾವಾಗ ನಡೆಯಲಿದೆ, ಪ್ರಸಾರ ಯಾವಾಗ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ.

ಅಂತರಾಷ್ಟ್ರೀಯ ಸೆಲೆಬ್ರಿಟಿಗಳ ಜೊತೆ ಕರಣ್ ಜೋಹರ್ ಚಾಟ್ ಶೋ

ಈ ಹಿಂದೆ ಕರಣ್ ಜೋಹರ್ ಅಂತರಾಷ್ಟ್ರೀಯ ಸೆಲೆಬ್ರಿಟಿಗಳಾದ ರಿಚರ್ಡ್ ಗೆರೆ, ಮಾರಿಯಾ ಶರ್ಪೋವಾ, Hugh Jackman, Christian Louboutin, ಮೆರಿಲ್ ಸ್ಟೀಪ್, ರಾಬರ್ಟ್ ದೆ ನಿರೊ, ಜಾರ್ಜ್ ಕ್ಲೂನೀ ಅವರೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಸಮಾರಂಭಗಳಲ್ಲಿ ಚಾಟ್ ಶೋ ನಡೆಸಿದ್ದಾರೆ.

ಜಸ್ಟಿನ್ ಬೀಬರ್ ಸಂಗೀತ ಮೇಳ

ಜಸ್ಟಿನ್ ಬೀಬರ್ ರವರು ಮೇ 10 ರಂದು ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ 50000 ಕ್ಕೂ ಹೆಚ್ಚು ಜಸ್ಟಿನ್ ಬೀಬರ್ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.[ಮೇ 10 ಕ್ಕೆ ಭಾರತದಲ್ಲಿ ಪಾಪ್ ಗಾಯಕ ಜಸ್ಟಿನ್ ಬೀಬರ್ ಸಂಗೀತ ಮೇಳ]

Read more about: justin bieber, music, hollywood
English summary
Grammy Award winning singer Justin Bieber will be in conversation with celebrated filmmaker Karan Johar on his show Koffee With Karan, says a source.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada