»   » ಕಿರುತೆರೆಗೆ ಹಿರಿಯ ನಟ ರಾಜೇಶ್ ರೀ ಎಂಟ್ರಿ

ಕಿರುತೆರೆಗೆ ಹಿರಿಯ ನಟ ರಾಜೇಶ್ ರೀ ಎಂಟ್ರಿ

Posted By:
Subscribe to Filmibeat Kannada
Kala Tapaswi
ಈಗಾಗಲೆ ಹಲವು ಹಿರಿಯ ತಾರೆಗಳು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಅವರಲ್ಲಿ ಪ್ರಮುಖವಾಗಿ ಜಯಂತಿ, ಪ್ರಣಯರಾಜ ಶ್ರೀನಾಥ್, ಅನಂತನಾಗ್, ಭಾರತಿ ವಿಷ್ಣುವರ್ಧನ್, ಅಶೋಕ್, ಪವಿತ್ರಾ ಲೋಕೇಶ್ ಹೀಗೆ ಹಲವಾರು ತಾರೆಗಳನ್ನು ಹೆಸರಿಸಬಹುದು. ಈಗ ಕಲಾ ತಪಸ್ವಿ, ಹಿರಿಯ ನಟ ರಾಜೇಶ್ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ದೂರದರ್ಶನ ಚಂದನ ವಾಹಿನಿಯಲ್ಲಿ ಮೂಡಿಬರುತ್ತಿರುವ ಸುಮಂಗಲಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಅವರು ಗೌತಮಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.

ಇದೀಗ ಸುಮಂಗಲಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಪೋಷಿಸಿದ್ದಾರೆ. ಧಾರಾವಾಹಿ ನಾಯಕಿ ಮಂಗಳಾ ತಂದೆಯ ಸ್ನೇಹಿತನಾಗಿ ಪುರುಷೋತ್ತಮ ರಾಯರ ಪಾತ್ರದಲ್ಲಿ ರಾಜೇಶ್ ನಟಿಸಿದ್ದಾರೆ.

ಸ್ನೇಹಿತ ತೀರಿಹೋದ ನಂತರ ಮಂಗಳಾದ ಜವಾಬ್ದಾರಿಯನ್ನು ಹೊತ್ತ ಸ್ನೇಹಿತನಾಗಿ ಅವರದು ವಿಭಿನ್ನ ಪಾತ್ರ. ಮಂಗಳಾ ಮದುವೆ ಮಾಡಿಸುತ್ತಾರೆ. ಎಲ್ಲವೂ ಸರಿಹೋಯಿದು ಎಂದುಕೊಳ್ಳುವಷ್ಟರಲ್ಲಿ ಆಕೆಯ ಬಾಳಿನಲ್ಲಿ ಮತ್ತೊಬ್ಬ ವ್ಯಕ್ತಿಯ ಪ್ರವೇಶವಾಗುತ್ತದೆ.

ಪುರುಷೋತ್ತಮ ರಾಯರು ಮಂಗಳಾ ಸಮಸ್ಯೆಗಳನ್ನು ಹೇಗೆ ನಿವಾರಿಸುತ್ತಾರೆ. ಆಕೆಗೆ ಆಸರೆಯಾಗಿ ತಂದೆಯ ಸ್ಥಾನದಲ್ಲಿ ನಿಂತೇನು ಮಾಡುತ್ತಾರೆ ಎಂಬುದನ್ನು ನೋಡಬೇಕಾದರೆ ಸುಮಂಗಲಿ ಧಾರಾವಾಹಿ ವೀಕ್ಷಿಸಬಹುದು. ಸಮಯ ಮಧ್ಯಾಹ್ನ 3 ರಿಂದ 3.30. (ಒನ್ಇಂಡಿಯಾ ಕನ್ನಡ)

English summary
Kala Tapaswi re enters into Kannada small screen. He plays a prominent role in DD Chandana tele serial Sumangali. He plays a role of Mangala father's friend Purushottama Rao.
Please Wait while comments are loading...