For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ತಮಿಳು ಪ್ರೋಮೋ ಔಟ್: ಮತ್ತೆ ಕಿರುತೆರೆ ಬಂದ ಕಮಲ್ ಹಾಸನ್

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್ ಬಾಸ್ ತೆಲುಗು ಸೀಸನ್-5 ಪ್ರಾರಂಭಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ತೆಲುಗು ಬಿಗ್ ಬಾಸ್ ಅನ್ನು ಖ್ಯಾತ ನಟ ನಾಗಾರ್ಜುನ್ ನಡೆಸಿಕೊಡುತ್ತಿದ್ದು, ಈಗಾಗಲೇ ಪ್ರೋಮೋ ಬಿಡುಗಡೆಯಾಗಿದೆ. ತೆಲುಗು ಬಿಗ್ ಬಾಸ್ ಗ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ, ಏನೆಲ್ಲ ವಿಶೇಷತೆ ಇರಲಿದೆ ಎಂದು ಲೆಕ್ಕಾಚಾರ ಹಾಕುವಾಗಲೇ ತಮಿಳು ಬಿಗ್ ಬಾಸ್ ಕೂಡ ಪ್ರಾರಂಭವಾಗುತ್ತಿದೆ.

  ತಮಿಳು ಬಿಗ್ ಬಾಸ್ ಸೀಸನ್-5ಕ್ಕೆ ತಯಾರಿ ನಡೆಯುತ್ತಿದ್ದು, ಈಗಾಗಲೇ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಕೊರೊನಾ, ಚುನಾವಣೆ ನಡುವೆಯೂ ಬಿಗ್ ಬಾಸ್ ಸೀಸನ್ 4ಅನ್ನು ಯಶಸ್ವಿಯಾಗಿ ಮುಗಿಸಿರುವ ನಟ ಕಮಲ್ ಹಾಸನ್ ಈಗ ಬಿಗ್ ಬಾಸ್ 5ಕ್ಕೆ ಸಜ್ಜಾಗಿದ್ದು, ಇದೀಗ ಪ್ರೋಮೋ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ಕ್ವಾರಂಟೈನ್ ನಲ್ಲಿದ್ದ 'ಬಿಗ್ ಬಾಸ್' ಸ್ಪರ್ಧಿಗೆ ಕೊರೊನಾ ಪಾಸಿಟಿವ್? ಕ್ವಾರಂಟೈನ್ ನಲ್ಲಿದ್ದ 'ಬಿಗ್ ಬಾಸ್' ಸ್ಪರ್ಧಿಗೆ ಕೊರೊನಾ ಪಾಸಿಟಿವ್?

  ಮತ್ತೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಕಮಲ್ ತಯಾರಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ ತಮಿಳು ಬಿಗ್ ಬಾಸ್ ಸೀಸನ್ 5 ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಮಲ್ ಹಾಸನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಕಮಲ್ ನಾವು ಮತ್ತೆ ಪ್ರಾರಂಭ ಮಾಡಬಹುದೇ ಎಂದು ಕೇಳಿದ್ದಾರೆ. ಬಳಿಕ ಬಿಗ್ ಬಾಸ್ ತಮಿಳು ಸೀಸನ್ 5 ಲೋಗೋ ಅನಾವರಣವಾಗಿದೆ.

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಬಿಗ್ ಬಾಸ್ ತಮಿಳು ಸೀಸನ್ 5 ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದು ಮಾಹಿತಿ ಬಹಿರಂಗ ಪಡಿಸಿಲ್ಲ. ಕೊರೊನಾ ಕಾರಣದಿಂದ ಭಾರಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗ್ ಬಾಸ್ ಪ್ರಾರಂಭ ಮಾಡಲು ತಯಾರಕರು ಮುಂದಾಗಿದ್ದಾರೆ. ಈಗಾಗಲೇ ಸುರಕ್ಷತಾ ಪ್ರೋಟೋಕಾಲ್ ಗಳನ್ನು ಅನುಸರಿಸಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

  ಬಿಗ್ ಬಾಸ್ ತಮಿಳು ಸೀಸನ್ 5ರಲ್ಲಿ ಒಟ್ಟು 16 ಮಂದಿ ಸ್ಪರ್ಧಿಗಳಿರಲಿದ್ದಾರೆ. 100 ದಿನಗಳ ಕಾಲ ನಡೆಯುವ ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನು ಈ ಬಾರಿಯ ಸೀಸನ್ ನಲ್ಲಿ ಏನೆಲ್ಲ ಬದಲಾವಣೆ ಇರಲಿದೆ, ಏನೆಲ್ಲ ವಿಶೇಷತೆ ಇರಲಿದೆ ಎನ್ನುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

  ಕಮಲ್ ಹಾಸನ್ ಸದ್ಯ ಬಿಗ್ ಬಾಸ್ ಜೊತೆಗೆ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ಖ್ಯಾತ ನಟರಾದ ವಿಜಯ್ ಸೇತುಪತಿ ಮತ್ತು ಮಲಯಾಳಂನ ಖ್ಯಾತ ನಟ ಫಹಾದ್ ಕೂಡ ನಟಿಸುತ್ತಿದ್ದಾರೆ. ಮೂವರು ಖ್ಯಾತ ನಟರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಇಂಡಿಯನ್-2 ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇಂಡಿಯನ್-2 ಸಿನಿಮಾ ಅರ್ಧಕ್ಕೆ ನಿಂತಿದ್ದು, ಮತ್ತೆ ಸದ್ಯದಲ್ಲೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

  ಇನ್ನು ಮತ್ತೊಂದೆಡೆ ತೆಲುಗು ಬಿಗ್ ಬಾಸ್ 5 ಪ್ರಾರಂಭವಾಗುತ್ತಿದೆ. ಸೆಪ್ಟಂಬರ್ 3 ರಿಂದ ಪ್ರಾರಂಭವಾಗಲಿದೆ. ಮಾ ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ಸಂಭಾವ್ಯ ಪಟ್ಟಿ ವೈರಲ್ ಆಗಿದೆ. ಆದರೆ ಅಧಿಕೃತವಾಗಿ ಯಾರೆಲ್ಲ ಬಿಗ್ ಮನೆ ಸೇರಲಿದ್ದಾರೆ ಎನ್ನುವುದು ಸೆಪ್ಟಂಬರ್ 3ಕ್ಕೆ ಗೊತ್ತಾಗಲಿದೆ.

  English summary
  Actor Kamal Haasan hosted Bigg Boss season 5 Tamil promo release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X