For Quick Alerts
  ALLOW NOTIFICATIONS  
  For Daily Alerts

  ಕೆಲವೇ ದಿನಗಳಲ್ಲಿ ಪ್ರೇಕ್ಷಕರ ನೆಚ್ಚಿನ 'ಕಮಲಿ' ಧಾರಾವಾಹಿ ಅಂತ್ಯ?

  By ಪ್ರಿಯಾ ದೊರೆ
  |

  ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಬಹುತೇಕ ಧಾರಾವಾಹಿಗಳು ಸೂಪರ್ ಹಿಟ್ ಆಗಿವೆ. ಎಲ್ಲವೂ ಧಾರಾವಾಹಿಗಳು ಒಂದಕ್ಕೊಂದು ವಿಭಿನ್ನ ಕಥಾಹಂದರವುಳ್ಳ ಧಾರಾವಾಹಿಗಳು. 'ಪುಟ್ಟಕ್ಕನ ಮಕ್ಕಳು', 'ಪಾರು', 'ಹಿಟ್ಲರ್ ಕಲ್ಯಾಣ', 'ಜೊತೆ ಜೊತೆಯಲಿ', 'ಗಟ್ಟಿಮೇಳ', 'ಸತ್ಯ' ಎಲ್ಲಾ ಧಾರಾವಾಹಿಗಳು ಚೆನ್ನಾಗಿ ಮೂಡಿ ಬರುತ್ತಿವೆ.

  ಎಲ್ಲವೂ ಫ್ಯಾಮಿಲಿ ಕಥೆಯಾಗಿದ್ದು, ಎಲ್ಲಾ ಕತೆಗಳು ವಿಭಿನ್ನವಾಗಿವೆ. ಬಹಳ ಅದ್ಧೂರಿ ವೆಚ್ಚದಲ್ಲಿ ಕಣ್ಣಿಗೆ ಹಬ್ಬ ಎನ್ನುವಂತೆ ಕಥೆಗಳನ್ನು ಕಟ್ಟಿಕೊಡುತ್ತಿದ್ದಾರೆ. ಧಾರಾವಾಹಿ ಪ್ರೇಮಿಗಳು ಕೂಡ ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಕೆಲ ಧಾರಾವಾಹಿಗಳು ಅಂತ್ಯ ಕಾಣುವ ಸಮಯ ಬಂದಿದೆ.

  ಡುಪ್ಲಿಕೇಟ್ ವೈದೇಹಿ ಮನೆಗೆ ಎಂಟ್ರಿ ಕೊಟ್ಟಾಯ್ತು: ಒರಿಜಿನಲ್ ವೈದೇಹಿ ಕಿಕ್ ಔಟ್ ಆಗುತ್ತಾಳಾ..?ಡುಪ್ಲಿಕೇಟ್ ವೈದೇಹಿ ಮನೆಗೆ ಎಂಟ್ರಿ ಕೊಟ್ಟಾಯ್ತು: ಒರಿಜಿನಲ್ ವೈದೇಹಿ ಕಿಕ್ ಔಟ್ ಆಗುತ್ತಾಳಾ..?

  'ಶ್ರೀರಸ್ತು ಶುಭಮಸ್ತು' ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ವಾಹಿನಿ ಮುಂದಾಗಿದೆ. ಆದರೆ, ಈ ಧಾರಾವಾಹಿ ಪ್ರಸಾರಕ್ಕೆ ಸ್ಲಾಟ್ ಇಲ್ಲದಂತಾಗಿದೆ. ಇನ್ನು ಕಮಲಿಯಾಗಿ ನಟಿಸಿರುವ ಅಮೂಲ್ಯ ಗೌಡ ಬಿಗ್‌ಬಾಸ್ ಮನೆ ಸೇರಿದ್ದಾರೆ. ಹಾಗಾಗಿ ಕೆಲ ಹಳೆಯ ಧಾರಾವಾಹಿಗಳನ್ನು ಅಂತ್ಯಗೊಳಿಸಲು ವಾಹಿನಿ ತೀರ್ಮಾನಿಸಿದೆ.

   ಕಮಲಿಯಾಗಿ ಅಮೂಲ್ಯ ಓಂಕಾರ್

  ಕಮಲಿಯಾಗಿ ಅಮೂಲ್ಯ ಓಂಕಾರ್

  ಜೀ ಕನ್ನಡದಲ್ಲಿ ಪ್ರಸಾರವಾಗುವ 'ಕಮಲಿ' ಧಾರಾವಾಹಿ ತುಂಬಾ ಜನಪ್ರಿಯತೆ ಪಡೆದಿದೆ. ಈ ಧಾರಾವಾಹಿ ಶುರುವಾಗಿ ನಾಲ್ಕು ವರ್ಷಗಳೇ ಉರುಳಿವೆ. 2018ರ ಮೇ ತಿಂಗಳಲ್ಲಿ ಈ ಧಾರಾವಾಹಿ ಮೊದಲು ಆರಂಭವಾಗಿತ್ತು. ಈ ಧಾರಾವಾಹಿಯಲ್ಲಿ ಕಮಲಿ ಪಾತ್ರವನ್ನು ನಿರ್ವಹಿಸುತ್ತಿರುವವರು ಅಮೂಲ್ಯಾ ಒಂಕಾರ್ ಗೌಡ. ಈ ಹಿಂದೆ ಅವರು 'ಅರಮನೆ' ಎಂಬ ಧಾರಾವಾಹಿಯಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆದರೆ 'ಕಮಲಿ' ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. 'ಕಮಲಿ' ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಸುತ್ತ ಹೆಣೆದಿರುವ ಕಥೆ.

  ತನ್ನ ಮನೆಗೆ ವಾಪಸ್ ಬಂದ ಆರ್ಯನಿಗೆ ಎಲ್ಲಾ ನೆನಪಾಗುತ್ತಾ..?ತನ್ನ ಮನೆಗೆ ವಾಪಸ್ ಬಂದ ಆರ್ಯನಿಗೆ ಎಲ್ಲಾ ನೆನಪಾಗುತ್ತಾ..?

   ಪದೇ ಪದೇ ಪ್ರಸಾರದ ಸಮಯ ಬದಲು

  ಪದೇ ಪದೇ ಪ್ರಸಾರದ ಸಮಯ ಬದಲು

  ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಈ ಧಾರಾವಾಹಿಯ ಸಾರಥಿ ಆಗಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಕೂಡ ಅವರೇ ಮಾಡಿದ್ದಾರೆ. ಪದ್ಮವಾಸಂತಿ, ಯಮುನಾ ಶ್ರೀನಿಧಿ, ನಿರಂಜನ್ ಬಿ ಎಸ್, ಗ್ಯಾಬ್ರಿಯೆಲಾ ಸ್ಮಿತ್, ಸುಹಾಸ್, ಅಂಕಿತಾ, ಮೈಕೋ ಮಂಜು ಸೇರಿದಂತೆ ಅನೇಕ ಪ್ರತಿಭಾನ್ವಿತ ಕಲಾವಿದರಿದ್ದಾರೆ. ಈ ಧಾರಾವಾಹಿ ಶುರುವಾದಾಗ ಟಾಪ್ ಲಿಸ್ಟ್‌ನಲ್ಲಿತ್ತು. ಬರಬರುತ್ತಾ ಟಿಆರ್‌ಪಿ ರೇಟಿಂಗ್ ಕಡಿಮೆಯಾಗ ತೊಡಗಿತು. ಅದರ ಜೊತೆಗೆ 'ಕಮಲಿ' ಧಾರಾವಾಹಿ ಪ್ರಸಾರದ ಸಮಯವೂ ಬದಲಾಗುತ್ತಾ ಹೋಯ್ತು. ಈಗ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿದೆ.

   ದ್ವೇಷ ಕಾರುತ್ತಿರುವ ಅನಿಕಾ

  ದ್ವೇಷ ಕಾರುತ್ತಿರುವ ಅನಿಕಾ

  ಇನ್ನು ಸದ್ಯ ಕಮಲಿ ತನ್ನ ಪ್ರೀತಿಯ ಮೇಷ್ಟ್ರು ರಿಷಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಆದರೆ ಸುಖ ಸಂಸಾರ ನಡೆಸಲು ಅನಿಕಾ ಬಿಡುತ್ತಿಲ್ಲ. ಪದೇ ಪದೇ ಒಂದಲ್ಲ ಒಂದು ಸಮಸ್ಯೆಗಳನ್ನು ರಿಷಿ ಮತ್ತು ಕಮಲಿ ಜೋಡಿ ಎದುರಿಸುತ್ತಿದೆ. ಎಷ್ಟು ಸಲ ಬುದ್ಧಿ ಹೇಳಿದರೂ ಕೇಳದ ಅನಿಕಾ, ಪದೇ ಪದೇ ಕಮಲಿ ಹಾಗೂ ರಿಷಿಗೆ ತೊಂದರೆ ಕೊಡುತ್ತಿದ್ದಾಳೆ. ಒಂದು ಕಡೆ ಕಮಲಿ ತಾನು ಇಷ್ಟಪಟ್ಟ ರಿಷಿಯನ್ನು ಮದುವೆಯಾಗಿದ್ದಾಳೆ. ಮತ್ತೊಂದು ಕಡೆ ತನ್ನ ಮಲತಾಯಿಯ ಮಗಳು ಕಮಲಿ. ಹೀಗಾಗಿ ಅನಿಕಾ ಸದಾ ಕಮಲಿ ಮೇಲೆ ದ್ವೇಷ ಕಾರುತ್ತಿರುತ್ತಾಳೆ.

  Bigg Boss: ಅಮೂಲ್ಯಗೆ ಪ್ರಥಮ್‌ ಮೇಲೆ ಸಿಟ್ಟು: ಅಂಥಹದ್ದೇನು ಮಾಡಿದ್ರು ಪ್ರಥಮ್Bigg Boss: ಅಮೂಲ್ಯಗೆ ಪ್ರಥಮ್‌ ಮೇಲೆ ಸಿಟ್ಟು: ಅಂಥಹದ್ದೇನು ಮಾಡಿದ್ರು ಪ್ರಥಮ್

   ಕಮಲಿ ಧಾರಾವಾಹಿಯೂ ಅಂತ್ಯವಾಗುತ್ತಾ..?

  ಕಮಲಿ ಧಾರಾವಾಹಿಯೂ ಅಂತ್ಯವಾಗುತ್ತಾ..?

  ಇನ್ನು ಈ ಧಾರಾವಾಹಿಯನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಒಂದು ಸಮಯ ಬದಲಾವಣೆ ಕಾರಣವಾದರೆ, ಮತ್ತೊಂದು ಕಥೆ ಎಳೆದಂತೆ ಭಾವಿಸುತ್ತಿದೆ. ಹೀಗಾಗಿ ಪ್ರೇಕ್ಷಕರು 'ಕಮಲಿ' ಧಾರಾವಾಹಿಯನ್ನು ನೋಡುವುದನ್ನು ಕಡಿಮೆ ಮಾಡಿದ್ದಾರೆ. ಈಗ ಜೀ ಕನ್ನಡದಲ್ಲಿ ಹಲವು ಹೊಸ ಧಾರಾವಾಹಿಗಳು ಬರಲು ಕಾಯುತ್ತಿವೆ. ಹಾಗಾಗಿ 'ನಾಗಿಣಿ-2' ಧಾರಾವಾಹಿಯನ್ನು ಅಂತ್ಯ ಮಾಡಲು ಸಿದ್ಧತೆ ನಡೆದಿವೆ. ಅದರ ಜೊತೆಗೆ ಈಗ 'ಕಮಲಿ' ಧಾರಾವಾಹಿಯ ಕೊನೆಯ ಎಪಿಸೋಡ್ ಕೂಡ ಶೂಟ್ ಆಗಿದೆಯಂತೆ. ಹಾಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಈ ಧಾರಾವಾಹಿಯು ಅಂತ್ಯವಾಗುತ್ತಿದೆ ಎನ್ನಲಾಗಿದೆ.

  English summary
  kamali serial is going to end soon. New serials are yet to start so channel planned to finish kamali serial.
  Monday, September 26, 2022, 18:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X