For Quick Alerts
  ALLOW NOTIFICATIONS  
  For Daily Alerts

  ಫ್ಯಾಷನ್ ಜಗತ್ತಿಗೆ ಬರಬೇಕೆನ್ನುವ ಸ್ತ್ರೀಯರಿಗೆ ಇಲ್ಲೊಂದು ವೇದಿಕೆ

  |

  'ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್' ಇದು ಮಹಿಳೆಯರಿಗಾಗಿ ನಡೆಸುತ್ತಿರುವ ಕಾರ್ಯಕ್ರಮ. ಎಲೆಮರೆಯ ಕಾಯಂತೆ ಇರುವ ಟ್ಯಾಲೆಂಟ್ ‍ಗಳನ್ನು ಹೊರತರುವ ಪ್ರಯತ್ನ ಈ ವೇದಿಕೆಯದಾಗಿದೆ. ಫ್ಯಾಷನ್ ಜಗತ್ತಿಗೆ ಪ್ರವೇಶ ಪಡೆಯಬೇಕೆನ್ನುವ ಸ್ತ್ರೀಯರಿಗೆ ಇದು ಒಂದೆಡೆ ವೇದಿಕೆಯಾದರೆ. ಇನ್ನೊಂದೆಡೆ ಬೆಂಗಳೂರಿನಲ್ಲಿರುವ ಸಾಕಷ್ಟು ಯುವ ಡಿಸೈನ್‍ರ್ ‍ಗಳಿಗೂ ಅವಕಾಶ ನೀಡುವ ಉದ್ದೇಶ ಇದರದಾಗಿದೆ.

  ಇಲ್ಲಿ ರೆಟ್ರೋ ಕಾಲದಲ್ಲಿ ಮಿಂಚಿದ ಕಲಾವಿದರುಗಳಿರುತ್ತಾರೆ. ಟ್ರೆಂಡಿಂಗ್ ತಾರೆಯರು ಇರುತ್ತಾರೆ. ಕಾಲೇಜು ಹುಡುಗಿಯರೂ ಇರುತ್ತಾರೆ, ವರ್ಕಿಂಗ್ ಪ್ರೊಫೆಷನಲ್ಸ್ ಹಾಗೂ ಗೃಹಿಣಿಯರೂ ಇರುತ್ತಾರೆ. ಇಂತವರಿಗಾಗಿಯೇ ಈಗೊಂದು ಅವಕಾಶ ಸಿಕ್ಕಿದೆ.

  "ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್" ಕಾರ್ಯಕ್ರಮದ ಪ್ರತಿಭಾನ್ವೇಷಣೆ ನಡೆಸಲು ಶುಕ್ರವಾರ ಪತ್ರಿಕಾ ಗೋಷ್ಠಿಯ ಮೂಲಕ ಚಾಲನೆ ನೀಡಲಾಯಿತು. ನಗರದ ಶ್ಯಾಂಘ್ರಿಲಾ ಹೋಟೆಲ್‍ನಲ್ಲಿ "ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್"ನ ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಲಾಯಿತು. ಇದಕ್ಕೆ ಚಲನಚಿತ್ರ ತಾರೆಯರಾದ ಸಿಂಧೂ ಲೋಕನಾಥ್, ಪ್ರಿಯಾಂಕಾ ಉಪೇಂದ್ರ ಮತ್ತು ನಗರದ ಮಾಡೆಲ್‍ಗಳು ಅತಿಥಿಗಳಾಗಿ ಆಗಮಿಸಿದ್ದರು.

  'ಫ್ಯಾಷನ್ ಜಗತ್ತು ಈಗ ಅತಿ ವೇಗದಲ್ಲಿ ಸಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಣುತ್ತಿರುವ ಬೆಳವಣಿಗೆಯನ್ನು ನಮ್ಮ ನಗರಕ್ಕೂ ಬೆಂಗಳೂರಿಗರಿಗೂ ತಲುಪಿಸಬೇಕು, ಪ್ರತಿಯೊಬ್ಬ ಸ್ತ್ರೀಯಲ್ಲೂ ಹುದುಗಿರುವ ಪ್ರತಿಭೆಯನ್ನು ಹೊರತರಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಈ "ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್" ಕಾರ್ಯಕ್ಕೆ ಮುಂದಾಗಿದ್ದೇವೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ ದೊರೆಯುವುದು ಎಂಬ ಭರವಸೆ ನಮ್ಮದು" ಎಂದು ಫ್ಯಾಷನ್ ಟಿ.ವಿ.ಯ ಭಾರತದ ಮಾಲೀಕ ಕಮಾರ್ ತಿಳಿಸಿದರು.

  ಎಫ್ ಟಿವಿ ಬಗ್ಗೆ:

  1997ರಲ್ಲಿ ಪ್ರಾರಂಭವಾದಾಗಿನಿಂದಲೂ ಎಫ್ ಟಿ ವಿ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಗಳಲ್ಲಿ ಅತ್ತುತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಅದನ್ನು ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡ ಹೆಗ್ಗಳಿಕೆಯನ್ನು ಸೃಷ್ಟಿಸಿದೆ. ಬೇರೆ ಯಾವ ಜಾಲತಾಣಗಳಲ್ಲೂ ದೊರೆಯದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಠವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಫ್ಯಾಷನ್ ಜಗತ್ತಿನ ಅತ್ಯದ್ಭುತ ಚಿತ್ರಗಳು ಮತ್ತು ಅದರ ಕುರಿತ ಪ್ರತ್ಯೇಕ ಮಾಹಿತಿಗಳೊಂದಿಗೆ ತಿಳುವಳಿಕೆ ಮೂಡಿಸಿ ವಿಶ್ವಮಟ್ಟದ ಬ್ರಾಂಡ್ಗಜಳನ್ನು ತನ್ನತ್ತ ಸೆಳೆಯುತ್ತಿರುವ ವಾಹಿನಿ ಎಫ್.ಟಿ.ವಿ. ಆಗಿದೆ.

  Read more about: model ಮಾಡೆಲ್
  English summary
  Kamar Film Factory Hunting for new telents with stage of womens Day out with Fashion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X