»   » ಡಲ್ ಡಲ್ ಬಿಗ್ ಬಾಸ್ ನಿಂದ ಕಾಮ್ಯಾ ಹೊರಕ್ಕೆ

ಡಲ್ ಡಲ್ ಬಿಗ್ ಬಾಸ್ ನಿಂದ ಕಾಮ್ಯಾ ಹೊರಕ್ಕೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ವೀಕೇಂಡ್ ಕಾ ವಾವ್ ನಲ್ಲಿ ಎಂದಿನ ಟ್ವಿಸ್ಟ್ ಜತೆಗೆ ಒಬ್ಬರನ್ನು ಮನೆಯಿಂದ ಹೊರಕ್ಕೆ ಬರುವಂತೆ ನಿರೂಪಕ ಸಲ್ಮಾನ್ ಸೂಚಿಸಿದ. ಬಹುತೇಕ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರಿಂದ ಸ್ವಲ್ಪಮಟ್ಟಿನ ಕುತೂಹಲ ಗರಿಗೆದರಿತ್ತು. ಮೊದಲಿಗೆ ತನೀಶಾರನ್ನು ಕರೆದ ಸಲ್ಮಾನ್ ನಂತರ ಕಾಮ್ಯಾ ಪಂಜಾಬಿ ಅವರಿಗೆ ಮನೆಯಿಂದ ಹೊರಬೀಳುವಂತೆ ಸಲ್ಲೂ ಹೇಳಿಬಿಟ್ಟ.

ಕುಶಾಲ್ ಥಂಡನ್- ಗೌಹರ್ ಪ್ರೇಮ್ ಕಹಾನಿ ಜತೆಗೆ ಅರ್ಮಾನ್ ಹಾಗೂ ತನೀಶಾ ಕಹಾನಿ ಬಿಟ್ಟರೆ ರಸಮಯ ಸನ್ನಿವೇಶಗಳಿಲ್ಲದೆ ಕೊನೆ ಗಳಿಗೆಯಲ್ಲಿ ಬಿಗ್ ಬಾಸ್ ಪ್ರೇಕ್ಷಕರನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವುದಂತೂ ನಿಜ.

ಈ ನಡುವೆ ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬ್ರಿಟಿಷ್ ರೂಪದರ್ಶಿ ಕಮ್ ಗಾಯಕಿ ನುಡಿದಂತೆ ನಡೆದಿದ್ದಾಳೆ. ಉಗ್ರ ಪ್ರತಾಪಿ ಕೊಹ್ಲಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಇದಕ್ಕೆ ಪ್ರತಿಯಾಗಿ ಕೊಹ್ಲಿ ಸೀನಿಯರ್ 'ನಾಗಿನ್' ಚಿತ್ರ ಖ್ಯಾತಿಯ ರಾಜಕುಮಾರ್ ಕೊಹ್ಲಿ ಅವರು ಸೋಫಿಯಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈಗ ಕಲರ್ಸ್ ವಾಹಿನಿ ವಿರುದ್ಧ ಕಾನೂನು ಸಮರಕ್ಕೆ ಸೋಫಿಯಾ ಮುಂದಾಗಿದ್ದಾಳಂತೆ. ಇದೆಲ್ಲ ಮನೆ ಹೊರಗೆ ನಡೆಯುತ್ತಿರುವ ಕಥೆ.[ಸೋಫಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ]

Kamya Punjabi Gets Eliminated By Salman Khan From Bigg Boss 7

ಮನೆಯೊಳಗಿನ ಕಥೆಗೆ ಬಂದರೆ ಪ್ರಬಲ ಸ್ಪರ್ಧಿಯಾಗಿದ್ದ ಕಾಮ್ಯಾ ಪಂಜಾಬಿ ಇತ್ತೀಚೆಗೆ ತಟಸ್ಥ ನೀತಿ ಅನುಸರಿಸಿದ್ದು ಆಕೆಗೆ ಮುಳುವಾಗಿದೆ. ಅತ್ತ ಗೌಹರ್, ಕುಶಾಲ್ ಪಂಗಡಕ್ಕೂ ಸೇರದೆ, ಇತ್ತ ಅರ್ಮಾನ್, ತನೀಶಾರನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳದೆ ಇದ್ದ ಕಾಮ್ಯಾಳನ್ನು ಪ್ರೇಕ್ಷಕರು ವೋಟ್ ಔಟ್ ಮಾಡಿದ್ದಾರೆ.

ನಾಮಿನೇಷನ್ ಬಗ್ಗೆ ಏಜಾಜ್, ಕುಶಾಲ್ ಹಾಗೂ ಗೌಹರ್ ಚರ್ಚೆ ಮಾಡಿದ ಪರಿಣಾಮ ಈ ವಾರ ಎಲ್ಲರೂ ಮನೆಯಿಂದ ಹೊರ ಬೀಳುವ ಭೀತಿ ಎದುರಿಸಿದ್ದರು. ಕ್ಯಾಪ್ಟನ್ ಆಂಡಿ ಮಾತ್ರ ಸೇಫ್ ಆಗಿದ್ದ. ಅರ್ಮಾನ್ ಕೊಹ್ಲಿ, ತನೀಶಾ ಮುಖರ್ಜಿ, ಗೌಹರ್ ಖಾನ್, ಕುಶಾಲ್ ಥಂಡನ್, ಏಜಾಜ್ ಖಾನ್, ಸಂಗ್ರಾಮ್ ಸಿಂಗ್ ಹಾಗೂ ಕಾಮ್ಯಾ ಪಂಜಾಬಿ ಪೈಕಿ ಕಾಮ್ಯಾ ಹೊರಕ್ಕೆ ಬಿದ್ದಿದ್ದಾಳೆ.

ಮನೆಯಲ್ಲಿ ಮೊದಲಿನಿಂದಲೂ ಪ್ರಬಲ ಸ್ಪರ್ಧಿ ಎನಿಸಿದ್ದ ಕಾಮ್ಯಾ, ಪ್ರತ್ಯೂಷಾ ಜತೆ ಉತ್ತಮ ಸಂಬಂಧ ಹೊಂದಿದ್ದಳು. ಕಳೆದ ವಾರ ಬಾಕ್ಸ್ ನಲ್ಲಿ ಇರಬೇಕಾದ ಸ್ಪರ್ಧೆಯಲ್ಲೂ ಕಾಮ್ಯಾ ಹಾಗೂ ಸಂಗ್ರಾಮ್ ಉತ್ತಮ ಪ್ರದರ್ಶನ ನೀಡಿದ್ದರು. ಈಗಿನ ಪ್ರೇಕ್ಷಕರ ನಾಡಿ ಮಿಡಿತ ನೋಡಿದರೆ ಮನೆಯಿಂದ ಹೊರ ಬೀಳುವ ಮುಂದಿನ ಸ್ಪರ್ಧಿ ಸಂಗ್ರಾಮ್ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

English summary
Bigg Boss 7's December 14th Weekend Ka Wow has Kamya Punjabi getting eliminated. Salman Khan, who has always spoken to her with respect, calls her name asking her to join him on Bigg Boss stage.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada