For Quick Alerts
  ALLOW NOTIFICATIONS  
  For Daily Alerts

  ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.!

  By Harshitha
  |

  ''ದೇವರಲ್ಲಿ ನನಗೆ ಅಪಾರ ನಂಬಿಕೆ. ಆದ್ರೆ ನನಗಿಂತ ಚಿಕ್ಕವನು ನನ್ನ ತಮ್ಮ ಶಂಕರ್ ಗೆ ಮರಣ ಬಂದಾಗ...ಯಾವ ದೇವರನ್ನ ಪೂಜಿಸ್ತಿದ್ನೋ ನಾನು ಸಿಟ್ಟಾದೆ. ಇವತ್ತಿನವರೆಗೂ ನಾನು ದೇವರನ್ನ ಕ್ಷಮಿಸಿಲ್ಲ.''

  - ಹೀಗಂತ ಹೇಳಿದವರು ಅನಂತ್ ನಾಗ್. ಅಪಘಾತದಿಂದ ಚಿಕ್ಕವಯಸ್ಸಿಗೆ ಇಹಲೋಕ ತ್ಯಜಿಸಿದ 'ಕರಾಟೆ ಕಿಂಗ್' ಶಂಕರ್ ನಾಗ್ ರನ್ನ ನೆನೆದು ಅನಂತ್ ನಾಗ್ ನಿನ್ನೆ 'ಬಿಗ್ ಬಾಸ್' ವೇದಿಕೆಯಲ್ಲಿ ಮಾತನಾಡಿದ್ದು ಹೀಗೆ. ['ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು]

  ಇಷ್ಟೆ ಅಲ್ಲ, ಶಂಕರ್ ನಾಗ್ ಬಗ್ಗೆ ಮತ್ತು 'ಮಾಲ್ಗುಡಿ ಡೇಸ್' ಮೇಕಿಂಗ್ ಬಗ್ಗೆ ಅನಂತ್ ನಾಗ್ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳನ್ನ ಕಿಚ್ಚ ಸುದೀಪ್ ನಿರೂಪಣೆಯ 'Super Sunday with Sudeep' ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಅದೆಲ್ಲವನ್ನ ಅನಂತ್ ನಾಗ್ ಮಾತುಗಳಲ್ಲೇ ಓದಿ....ಕೆಳಗಿರುವ ಸ್ಲೈಡ್ ಗಳಲ್ಲಿ.....

  ಅನಂತ್ ನಾಗ್ ಗದ್ಗದಿತರಾಗಿದ್ದ ಕ್ಷಣ....

  ಅನಂತ್ ನಾಗ್ ಗದ್ಗದಿತರಾಗಿದ್ದ ಕ್ಷಣ....

  ''ಒಂದು ಚಿತ್ರೀಕರಣಕ್ಕೆ ಅಂತ ಹೈದರಾಬಾದ್ ಗೆ ಹೋಗಿದ್ದೆ. ಅಲ್ಲಿ ಒಂದ್ ರಾತ್ರಿ ಸಡನ್ ಆಗಿ 'ನನ್ನ ತಮ್ಮ ಇಲ್ಲ' ಅಂತ ಅನಿಸ್ತು. ನನ್ನ ಹೆಂಡತಿಗೆ ಫೋನ್ ಮಾಡಿ ಮಲಗುತ್ತೇನೆ ಅಂತ ಹೇಳಿದ್ದೆ. ಆಗ ನಾನು ತಬ್ಬಿಬ್ಬಾಗಿದ್ದೆ. ಮತ್ತೆ ಅವಳು ಫೋನ್ ಮಾಡಿ ನೀವು ಮಲಗಿಲ್ಲ. ನಿಮ್ಮ ವಾಯ್ಸ್ ಸರಿ ಇಲ್ಲ ಅನಿಸ್ತು ಅದಕ್ಕೆ ಫೋನ್ ಮಾಡ್ದೆ ಅಷ್ಟೆ ಅಂದ್ಲು. ಅಲ್ಲಿವರೆಗೂ ತಡೆದುಕೊಂಡಿದ್ದ ನಾನು ಅಳೋಕೆ ಶುರುಮಾಡ್ದೆ. ರಾತ್ರಿ 12 ಗಂಟೆಯಿಂದ 3 ಗಂಟೆವರೆಗೂ ಮಾತನಾಡ್ದೆ. ನನಗೆ ಧೈರ್ಯ ತುಂಬಿದಳು ಗಾಯತ್ರಿ.'' - ಅನಂತ್ ನಾಗ್ [ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?]

  ದೇವರನ್ನ ಕ್ಷಮಿಸಿಲ್ಲ.!

  ದೇವರನ್ನ ಕ್ಷಮಿಸಿಲ್ಲ.!

  ''ದೇವರಲ್ಲಿ ನನಗೆ ಅಪಾರ ನಂಬಿಕೆ. ಅಂತದ್ರಲ್ಲಿ ನನಗಿಂತ ಚಿಕ್ಕವನು ನನ್ನ ತಮ್ಮನಿಗೆ ಮರಣ ಬಂದಾಗ...ಯಾವ ದೇವರನ್ನ ಪೂಜಿಸ್ತೀನೋ ನಾನು ಸಿಟ್ಟಾದೆ. ಇವತ್ತಿನ ವರೆಗೂ ನಾನು ಕ್ಷಮಿಸಿಲ್ಲ. ಅವನು ಹೋದ ಒಂದೆರಡು ತಿಂಗಳು ನಾನು ಅಲಿಪ್ತತೆ ತೋರಿಸುತ್ತಿದ್ದೆ.'' - ಅನಂತ್ ನಾಗ್ [ಶಂಕರನಾಗ್ ನಮ್ಮೊಂದಿಗಿಲ್ಲದ 25ನೇ ಹುಟ್ಟುಹಬ್ಬ: ವಿ ಮಿಸ್ ಯು ಶಂಕ್ರಣ್ಣ]

  ಶಂಕರ್ ನಾಗ್ ಗೆ ಶ್ರೇಯ ಸಲ್ಲಬೇಕು

  ಶಂಕರ್ ನಾಗ್ ಗೆ ಶ್ರೇಯ ಸಲ್ಲಬೇಕು

  ''ಮಾಲ್ಗುಡಿ ಅಂದ ತಕ್ಷಣ ದಕ್ಷಿಣ ಭಾರತ ಕಣ್ಮುಂದೆ ಬರುತ್ತೆ. ಮಾಲ್ಗುಡಿ ಡೇಸ್ ನ ದೃಶ್ಯ ರೂಪಕ್ಕೆ ತಂದ ಶ್ರೇಯ ಶಂಕರ್ ನಾಗ್ ಗೆ ಸೇರ್ಬೇಕು. ಅವನಿಗೆ ನಿರ್ದೇಶನದ ಹುಚ್ಚು. ಬೇರೆಯವರ ಪ್ರೊಡಕ್ಷನ್ ನಲ್ಲಿ ನಾನು ಅವನು ಒಟ್ಟಾಗಿ ನಟಿಸಿದ ಚಿತ್ರಗಳು ಹಿಟ್ ಆಗ್ತಿತ್ತು. ನಾವೇ ಪ್ರೊಡಕ್ಷನ್ ಮಾಡಿದಾಗ ಲಾಸ್ ಆಗ್ತಿತ್ತು.'' - ಅನಂತ್ ನಾಗ್ [ಯೂಟ್ಯೂಬಲ್ಲಿ ನೋಡಿ ಆನಂದಿಸಿ 'ಮಾಲ್ಗುಡಿ ಡೇಸ್']

  ಶಂಕರ್ ಹಾಕಿದ ಕಂಡೀಷನ್

  ಶಂಕರ್ ಹಾಕಿದ ಕಂಡೀಷನ್

  ''ನರಸಿಂಹನ್ ಅವರು ಮಾಲ್ಗುಡಿ ಡೇಸ್ ಮಾಡ್ಬೇಕು ಅಂತಿದ್ದೀನಿ. ಶಂಕರ್ ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ಅವನಿಗೆ ಹೇಳಿ ಅಂತ ನನಗೆ ಹೇಳಿದ್ರು. ನೀನು ನಟಿಸುತ್ತೇನೆ ಅಂದ್ರೆ ನಾನು ಮಾಡ್ತೀನಿ ಅಂದ. ಆಮೇಲೆ 'ಮಾಲ್ಗುಡಿ ಡೇಸ್' ಮಾಡಿದ್ದು.'' - ಅನಂತ್ ನಾಗ್

  ಆಗುಂಬೆಯಲ್ಲಿ ಶೂಟಿಂಗ್

  ಆಗುಂಬೆಯಲ್ಲಿ ಶೂಟಿಂಗ್

  ''ಆಗುಂಬೆಯಲ್ಲಿ ಶೂಟಿಂಗ್ ಮಾಡಿದ್ದು. ಆರ್.ಕೆ.ನಾರಾಯಣ್ ಎಷ್ಟು ಕಲ್ಪನೆ ಮಾಡಿಕೊಂಡು ಬರೆದಿದ್ದಾರೆ. ಅಷ್ಟೇ ಶ್ರೇಯ ಶಂಕರ್ ಗೂ ಹೋಗ್ಬೇಕು. ಆಗುಂಬೆಯಲ್ಲಿ ಮಾಲ್ಗುಡಿ ಮಾಡಬಹುದು ಅಂತ ನಾನು ಅವನಿಗೆ ಹೇಳಿದ್ದೆ. ಹಾಗಾಗಿ ಅಲ್ಲಿ ಶೂಟಿಂಗ್ ಆಗಿದ್ದು. ಶಂಕರ್ ಬಹಳ ಹಾರ್ಡ್ ವರ್ಕ್ ಮಾಡಿದ ಅದನ್ನ ಸ್ಕ್ರೀನ್ ಗೆ ಟ್ರ್ಯಾನ್ಸ್ ಫರ್ ಮಾಡುವುದಕ್ಕೆ.'' - ಅನಂತ್ ನಾಗ್

  ಅನಂತ್ ನಾಗ್ ಆರೋಗ್ಯದ ಗುಟ್ಟು

  ಅನಂತ್ ನಾಗ್ ಆರೋಗ್ಯದ ಗುಟ್ಟು

  ''ನಾನು ಶಿಸ್ತಿನ ಸಿಪಾಯಿ. ಬೆಳ್ಳಗೆ ಸಂಜೆ ವ್ಯಾಯಾಮ ಮಾಡ್ತೀನಿ. ಅದಕ್ಕೆ ಹೀಗೆ ಇದ್ದೀನಿ'' - ಅನಂತ್ ನಾಗ್

  ನನಗೆ ಡ್ಯಾನ್ಸ್-ಫೈಟ್ ಎಲ್ಲಾ ಆಗಲ್ಲ

  ನನಗೆ ಡ್ಯಾನ್ಸ್-ಫೈಟ್ ಎಲ್ಲಾ ಆಗಲ್ಲ

  ''ನನಗೆ ಪ್ರೆಶರ್ ಬರ್ತಿತ್ತು. ಡ್ಯಾನ್ಸ್ ಮಾಡಿ ಫೈಟ್ ಮಾಡಿ ಅಂದ್ರೆ ನನ್ನ ಕೈಲಿ ಆಗೋದಿಲ್ಲ. ಯಾವುದೋ ಒಂದು ಚಿತ್ರದಲ್ಲಿ ನಾನು ಇನ್ಸ್ ಪೆಕ್ಟರ್ ಕ್ಯಾರೆಕ್ಟರ್ ಮಾಡಿದ್ದೆ. ಗನ್ ಇದೆ. ಗೂಂಡಾಗಳು ಬಂದಾಗ ಫೈಟ್ ಮಾಡ್ಬೇಕು. ಮೊದಲನೇ ದಿನ ಮಾಡ್ದೆ. ಎರಡನೇ ದಿನ, ಮೂರನೇ ದಿನ ಅದನ್ನೇ ಮಾಡಿ ಅಂದ್ರು. ಸೊಂಟದಲ್ಲಿ ಗನ್ ಇಟ್ಕೊಂಡು ಯಾಕೆ ಫೈಟ್ ಮಾಡ್ಬೇಕು. ನಾನ್ ಮಾಡಲ್ಲ. ಡ್ಯೂಪ್ ಇಟ್ಟು ಮಾಡಿ ಅಂತ ಜಾರಿಕೊಂಡೆ ನಾನು'' - ಅನಂತ್ ನಾಗ್

  ಜನ ನನ್ನ ತಡ್ಕೊಂಡಿದ್ದಾರಲ್ಲ

  ಜನ ನನ್ನ ತಡ್ಕೊಂಡಿದ್ದಾರಲ್ಲ

  ''ಒಂದು ದಿನ ಟಿವಿ ಹಾಕ್ದೆ. 15 ಹಾಡುಗಳನ್ನ ನೋಡ್ದೆ. ಅಯ್ಯೋ ಎಲ್ಲಾ ಹಾಡುಗಳಲ್ಲೂ ನಡೆದಿದ್ದೇನೆ, ನಟನೆ ಮಾಡಿದ್ದೇನೆ, ಕೈ ಎತ್ತಿದ್ದೇನೆ, ಅಷ್ಟು ಬಿಟ್ರೆ, ಡ್ಯಾನ್ಸ್ ಇಲ್ಲ. ಬರೀ ಹೀರೋಯಿನ್ ಸಪೋರ್ಟ್ ತಗೊಂಡೆ ಮಾಡಿದ್ದೇನೆ. ಹೀಗಿದ್ದರೂ ಕನ್ನಡಿಗರು ಇಷ್ಟು ವರ್ಷ ನನ್ನ ತಡ್ಕೊಂಡಿದ್ದಾರಲ್ಲ'' - ಅನಂತ್ ನಾಗ್

  ಕಾಂಪಿಟೇಷನ್ ನಲ್ಲಿ ನಂಬಿಕೆ ಇಲ್ಲ.!

  ಕಾಂಪಿಟೇಷನ್ ನಲ್ಲಿ ನಂಬಿಕೆ ಇಲ್ಲ.!

  ''ಇಲ್ಲಿ ಎಲ್ಲರಿಗೂ ಸ್ಥಳವಿದೆ. ಸಾವಿರ ಜನಕ್ಕೂ ಸ್ಥಳ ಇದೆ. ಅವರವರ ಪ್ರತಿಭೆ ತೋರಿಸುವುದಕ್ಕೆ. ಈ ಪಾತ್ರವನ್ನ ಅನಂತ್ ಮಾಡಬಲ್ಲ ಅಂತ ಪ್ರೊಡ್ಯೂಸರ್, ಡೈರೆಕ್ಟರ್ ನಮ್ಮ ಹತ್ತಿರ ಬಂದಾಗ ಅವರಿಗೆ ನಾನು ಋಣಿ.'' - ಅನಂತ್ ನಾಗ್

  English summary
  Kannada Actor Anant Nag spoke about his brother Shankar Nag and Malgudi Days in 'Super Sunday with Sudeep' show. Read the article to know what Anant Nag spoke about his brother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X