»   » ಜೀ ಕನ್ನಡದಲ್ಲಿ ಅರುಣ್ ಸಾಗರ್ ಹೊಸ ರಿಯಾಲಿಟಿ ಶೋ

ಜೀ ಕನ್ನಡದಲ್ಲಿ ಅರುಣ್ ಸಾಗರ್ ಹೊಸ ರಿಯಾಲಿಟಿ ಶೋ

Posted By:
Subscribe to Filmibeat Kannada

ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಜೀ ಕನ್ನಡ ವಾಹಿನಿ ಇದೀಗ ಹೊಚ್ಚ ಹೊಸ ರಿಯಾಲಿಟಿ ಶೋ ಗೆ ಚಾಲನೆ ನೀಡುತ್ತಿದೆ.

'ವೀಕೆಂಡ್ ವಿಥ್ ರಮೇಶ್', 'ಡಿವೈಡೆಡ್' ಮತ್ತು 'ಲೈಫ್ ಸೂಪರ್ ಗುರೂ' ಸೇರಿದಂತೆ ಅನೇಕ ಹೊಸ ಪ್ರಯತ್ನಗಳಿಗೆ ಮುನ್ನುಡಿ ಬರೆದಿರುವ ಜೀ ಕನ್ನಡ ವಾಹಿನಿಯಲ್ಲಿ ಇದೇ 4 ರಿಂದ 'ಸಿಂಪಲ್ಲಾಗೊಂದು ಸಿಂಗಿಂಗ್ ‍ಶೋ' ಪ್ರಾರಂಭವಾಗಲಿದೆ. [ಹೊಸ ಇತಿಹಾಸ ಸೃಷ್ಟಿಸಿದ ಜೀ ಕನ್ನಡ 'ರಾಧಾ ಕಲ್ಯಾಣ']

'ಬಿಗ್ ಬಾಸ್' ಖ್ಯಾತಿಯ ಅರುಣ್ ಸಾಗರ್ 'ಸಿಂಪಲ್ಲಾಗೊಂದು ಸಿಂಗಿಂಗ್ ಶೋ' ಕಾರ್ಯಕ್ರಮಕ್ಕೆ ನಿರೂಪಕರಾಗಿರುವುದು ವಿಶೇಷ. ಮುಂದೆ ಓದಿ.....

ಮಜವಾದ ಕಾರ್ಯಕ್ರಮ 'ಸಿಂಪಲ್ಲಾಗೊಂದು ಸಿಂಗಿಂಗ್ ಶೋ'

ಸಿಂಗಿಂಗ್ ಶೋ ಅಂದಕೂಡಲೆ ಇದು ಗಾಯಕರಿಗೆ ಮಾತ್ರ ಅಥವಾ ಪ್ರತಿಭಾನ್ವೇಷಣೆ ಕಾರ್ಯಕ್ರಮ ಅಂತಲೇ ಎಲ್ಲರೂ ಭಾವಿಸುತ್ತಾರೆ. ಆದ್ರೆ, 'ಸಿಂಪಲ್ಲಾಗೊಂದು ಸಿಂಗಿಂಗ್ ಶೋ' ವಿಶಿಷ್ಟ ಕಾರ್ಯಕ್ರಮ. ಮನರಂಜನೆಯೇ ಇಲ್ಲಿ ರಸದೌತಣ. ಅದ್ರಲ್ಲೂ ಅರುಣ್ ಸಾಗರ್ ನಿರೂಪಕ ಅಂದ್ರೆ ಕೇಳ್ಬೇಕಾ.!? [ಬಹುಮುಖಿ ಪ್ರತಿಭೆ ಅರುಣ್ ಸಾಗರ್ ಡಬಲ್ ಧಮಾಕಾ]

ಹೊಸ 'ಗಾನಬಜಾನಾ...'

ಮೊದಲನೇ ಸುತ್ತಿನ ಹೆಸರು 'ಗಾನಾಬಜಾನಾ'. ಇದರಲ್ಲಿ ಸ್ಪರ್ಧಿಯು ವಿದೇಶಿಯೊಬ್ಬರು ಹಾಡುವ ಕನ್ನಡ ಹಾಡನ್ನ ಕೇಳಿಸಿಕೊಂಡು ಸರಿಯಾದ ಸಾಹಿತ್ಯದೊಂದಿಗೆ ಹಾಡಬೇಕಾಗುತ್ತದೆ. ಇದರಲ್ಲಿ ಒಟ್ಟು ಆರು ಸುತ್ತುಗಳಿದ್ದು ಪ್ರತಿ ಸುತ್ತಿಗೂ 2500 ರೂಪಾಯಿಗಳ ಬಹುಮಾನ ಇದೆ.

ಚಿತ್ರಗೀತೆ ಸ್ಪರ್ಧೆ

ಎರಡನೇ ಸುತ್ತಿನಲ್ಲಿ ಯಾವುದಾದರೊಂದು ಹಾಡಿಗೆ ಸಂಬಂಧಿಸಿದಂತೆ ಒಂದಷ್ಟು ಫೋಟೋಗಳನ್ನು ತೋರಿಸಲಾಗುತ್ತೆ. ಅದನ್ನ ನೋಡಿ ಸ್ಪರ್ಧಿ ಆ ಹಾಡನ್ನು ಹಾಡಬೇಕಾಗುತ್ತೆ. ಇಲ್ಲೂ ಕೂಡ ನಾಲ್ಕು ಸುತ್ತುಗಳಿದ್ದು, ಪ್ರತಿ ಸುತ್ತಿಗೂ 5000 ರೂಪಾಯಿಗಳ ಬಹುಮಾನವಿದೆ.

ಮಿಸ್ಸಿಂಗ್ ಲಿರಿಕ್

ಇಲ್ಲಿ ಒಂದು ಹಾಡನ್ನು ಪ್ಲೇ ಮಾಡಿ ಮಧ್ಯದಲ್ಲಿ ಅದರ ಒಂದು ಪದವನ್ನು ಮ್ಯೂಟ್ ಮಾಡಲಾಗುತ್ತದೆ. ಸ್ಪರ್ಧಿಗಳು ಹಾಗೆ ಮ್ಯೂಟ್ ಆಗಿರುವ ಪದವನ್ನ ಗ್ರಹಿಸಿ ಹಾಡಬೇಕು. ಇದು ಎರಡು ಸುತ್ತಿನ ಸ್ಪರ್ಧೆಯಾಗಿದ್ದು, ಪ್ರತಿ ಸುತ್ತಿಗೂ ರೂ.10,000 ಬಹುಮಾನವಿರುತ್ತದೆ.

ಹಾಡು....ನಿಮ್ಮ ಪಾಡು....

ಕೊನೆಯ ಸುತ್ತಲ್ಲಿ ಸ್ಪರ್ಧಿಗೆ ಹಾಡನ್ನ ಹಾಡಲು ಕೊಡಲಾಗುತ್ತದೆ. ಹಾಗೆ ಹಾಡುವಾಗ, ಇನ್ನೊಬ್ಬ ವ್ಯಕ್ತಿ ಅವರು ಹಾಡದಂತೆ ಅಡ್ಡಿಪಡಿಸುತ್ತಾನೆ. ಈ ಅಡಚಣೆಯ ನಡುವೆಯೂ ಸ್ಪರ್ಧಿ ಹಾಡನ್ನು ಹಾಡಬೇಕು. ಈ ಸುತ್ತಿನ ವಿಜೇತರನ್ನು ಆಯ್ಕೆ ಮಾಡುವ ಅವಕಾಶವಿರುವುದು ವೀಕ್ಷಕರಿಗೆ..! ಈ ಸುತ್ತಲ್ಲಿ 25,000 ರೂಪಾಯಿ ಬಹುಮಾನವಿದೆ. ನಾಲ್ಕು ಸುತ್ತಿನ ಒಟ್ಟು ಬಹುಮಾನದ ಮೊತ್ತ 1,00,000 ರೂಪಾಯಿ.

ಶನಿವಾರ ಮತ್ತು ಭಾನುವಾರ ನಿಮ್ಮ ಮುಂದೆ

ಏಂಜಲ್ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಸಂಸ್ಥೆ 'ಸಿಂಪಲ್ಲಾಗೊಂದು ಸಿಂಗಿಂಗ್ ಶೋ'ನ ನಿರ್ಮಾಣ ಮಾಡುತ್ತಿದೆ. ಏಪ್ರಿಲ್ 4 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10 ರವರೆಗೆ ಈ ಶೋ ಪ್ರಸಾರವಾಗಲಿದೆ.

English summary
Kannada Actor Arun Sagar of 'Bigg Boss' fame is all set to host a new show in Zee Kannada Channel called 'Simpallagondu Singing Show'. The program is to aired from April 4th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada