For Quick Alerts
  ALLOW NOTIFICATIONS  
  For Daily Alerts

  'ಎಂಗೇಜ್' ಎಂಬ ಪದದ ಅರ್ಥವೇ ಗೊತ್ತಿರ್ಲಿಲ್ವಂತೆ ಬುಲೆಟ್ ಪ್ರಕಾಶ್ ಗೆ.!

  By Harshitha
  |

  ''ನಟ ಬುಲೆಟ್ ಪ್ರಕಾಶ್ ಗೆ 'ಎಂಗೇಜ್' ಎಂಬ ಪದದ ಅರ್ಥವೇ ಗೊತ್ತಿರ್ಲಿಲ್ವಂತೆ'' ಎಂದು ಹೇಳಿದಾಗ 'ಹೀಗೂ ಉಂಟೇ.!' ಅಂತ ನೀವು ಬಾಯಿ ಮೇಲೆ ಬೆರಳಿಟ್ಟುಕೊಳ್ಳಬಹುದು. ಆದ್ರೆ, ಇದು ಖಂಡಿತ ಸತ್ಯ ಸ್ವಾಮಿ.

  ಎಂಗೇಜ್ ಎಂದರೆ ಎಂಗೇಜ್ಮೆಂಟ್, ಹುಡುಗ-ಹುಡುಗಿ ನಡುವಿನ ಕಮಿಟೆಡ್ ರಿಲೇಶನ್ ಶಿಪ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ, ಈ ಅರ್ಥ ಬುಲೆಟ್ ಪ್ರಕಾಶ್ ಗೆ ಗೊತ್ತಿರಲಿಲ್ಲ.

  ಅಂದು ಠುಸ್ ಆಗಿದ್ದ ಬುಲೆಟ್ ಪ್ರಕಾಶ್ ಬಾಂಬ್, ಅಕುಲ್ ಮುಂದೆ ಸಿಡಿಯುತ್ತಾ.?

  ಎಂಗೇಜ್ ಅಂದ್ರೆ ಬುಲೆಟ್ ಪ್ರಕಾಶ್ ಪ್ರಕಾರ 'ಆಟೋ ಎಂಗೇಜ್'. ಅದಾಗಲೇ ಆಟೋವನ್ನ ಬಾಡಿಗೆ ಪಡೆದಿರುವ ಪ್ರಯಾಣಿಕರಿಗಾಗಿ, ಆಟೋ ಡ್ರೈವರ್ ಕಾಯುತ್ತಿರುತ್ತಾರಲ್ಲ 'ಆ ಎಂಗೇಜ್' ಮಾತ್ರ ಬುಲೆಟ್ ಪ್ರಕಾಶ್ ಗೆ ಗೊತ್ತಿತ್ತು. ಅದು ಬಿಟ್ಟು ನಿಜವಾದ 'ಎಂಗೇಜ್' ಅರ್ಥ ಅವರಿಗೆ ಜ್ಞಾನೋದಯ ಆಗಿದ್ದು ಒಂದು ಹುಡುಗಿಗೆ ಪ್ರಪೋಸ್ ಮಾಡಿದ್ಮೇಲೆ.!

  ಕಾಲೇಜ್ ನಲ್ಲಿ ಓದುವಾಗ ಒಂದು ಹುಡುಗಿಯನ್ನ ಬುಲೆಟ್ ಪ್ರಕಾಶ್ ಇಷ್ಟ ಪಟ್ಟಿದ್ದರಂತೆ. ಅವರನ್ನೇ ಮದುವೆ ಆಗಬೇಕು ಎಂದು ಬುಲೆಟ್ ಪ್ರಕಾಶ್ ಪ್ರಪೋಸ್ ಮಾಡಿದಾಗ, 'ಐ ಆಮ್ ಎಂಗೇಜ್ಡ್' ಎಂದುಬಿಟ್ಟರಂತೆ ಆ ಹುಡುಗಿ.

  ಆ ಹುಡುಗಿ ಪ್ರತಿದಿನ ಆಟೋದಲ್ಲಿ ಕಾಲೇಜ್ ಗೆ ಬರುತ್ತಿದ್ದರಂತೆ. ಹೀಗಾಗಿ ಆಟೋ ಕಾಯುತ್ತಿರಬೇಕು ಎಂಬರ್ಥದಲ್ಲಿ ಹೇಳಿರಬೇಕು ಎಂಬ ಭಾವನೆ ಬುಲೆಟ್ ಪ್ರಕಾಶ್ ಗಿತ್ತು. ಕೊನೆಗೆ 'ನಾನು ಪ್ರಪೋಸ್ ಮಾಡಿದಾಗ, ನನ್ನ ಹುಡುಗಿ ಹೀಗೆ ಹೇಳಿದಳು' ಎಂದು ಗೆಳೆಯನೊಂದಿಗೆ ಹೇಳಿಕೊಂಡಾಗ 'ಎಂಗೇಜ್' ಎಂಬ ಪದದ ಅರ್ಥ ಬುಲೆಟ್ ಪ್ರಕಾಶ್ ಗೆ ಗೊತ್ತಾಗಿದೆ.

  ಇಂತಹ ಮಜವಾದ ಸಂಗತಿಯನ್ನ ಸ್ವತಃ ಬುಲೆಟ್ ಪ್ರಕಾಶ್ ರವರೇ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

  English summary
  Kannada Actor Bullet Prakash revealed that he din't know the exact meaning of 'Engage' during his college days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X