»   » 'ಗೋಲ್ಡನ್ ಸ್ಟಾರ್' ಗಣೇಶ್ ಬಗ್ಗೆ ದುನಿಯಾ ವಿಜಯ್ ಏನಂದರು.?

'ಗೋಲ್ಡನ್ ಸ್ಟಾರ್' ಗಣೇಶ್ ಬಗ್ಗೆ ದುನಿಯಾ ವಿಜಯ್ ಏನಂದರು.?

Posted By:
Subscribe to Filmibeat Kannada

2006-07.... ನಟ ಗಣೇಶ್ ಹಾಗೂ ದುನಿಯಾ ವಿಜಯ್ ರವರ ನಸೀಬು ಬದಲಿಸಿದ ವರ್ಷಗಳು.

2006ರಲ್ಲಿ ಬಿಡುಗಡೆ ಆದ 'ಮುಂಗಾರು ಮಳೆ' ಸಿನಿಮಾ ಗಣೇಶ್ ಗೆ ಲಕ್ ತಂದುಕೊಟ್ಟರೆ, 2007ರಲ್ಲಿ ರಿಲೀಸ್ ಆದ 'ದುನಿಯಾ' ಸಿನಿಮಾದಿಂದಾಗಿ ವಿಜಿ ಬದುಕಿನ ಭಾಗ್ಯದ ಬಾಗಿಲು ತೆರೆಯಿತು.

ಅಸಲಿಗೆ, ಸಿನಿಮಾಗಳಲ್ಲಿ 'ಹೀರೋ' ಆಗಿ ಗುರುತಿಸಿಕೊಳ್ಳುವುದಕ್ಕೂ ಮುಂಚಿನಿಂದಲೂ ಗಣೇಶ್ ಹಾಗೂ ದುನಿಯಾ ವಿಜಯ್ ಪಕ್ಕಾ ದೋಸ್ತಿಗಳು. ಇವತ್ತು ಇಬ್ಬರೂ 'ಸ್ಟಾರ್' ನಟರು. ಆದರೂ, ಇಬ್ಬರ ದೋಸ್ತಿಯಲ್ಲಿ ಕೊಂಚ ಕೂಡ ವ್ಯತ್ಯಾಸ ಆಗಿಲ್ಲ. ಅದಕ್ಕೆ ಸಾಕ್ಷಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಆಡಿದ ಮಾತುಗಳು.

Kannada Actor Duniya Vijay speaks about Ganesh in Weekend with Ramesh

ಗಣೇಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರು ಕನ್ನಡ ಚಿತ್ರರಂಗದ ನಾಯಕಿಯರು.!

ಗಣೇಶ್ ಮಾಡಿರುವ ಸಾಧನೆ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ''ಹ್ಯಾಟ್ ಆಫ್'' ಹೇಳಿದರು.

'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?

''ತಾಳ್ಮೆ ತುಂಬಾ ಇಟ್ಟುಕೊಂಡಿದ್ದರೆ, ದೊಡ್ಡ ಮಟ್ಟಕ್ಕೆ ಹೋಗಬಹುದು ಎನ್ನುವುದಕ್ಕೆ ಉದಾಹರಣೆಯೇ ನಮ್ಮ ಗಣೇಶ್. ನಿನ್ನ ಸಾಧನೆಗೆ ನಿಜವಾಗಲೂ ಹ್ಯಾಟ್ಸ್ ಆಫ್. ಅವತ್ತು ಬಾಡಿಗೆ ಕಟ್ಟಲು ಗಣೇಶ್ ಒದ್ದಾಡುತ್ತಿದ್ದ. ಈಗ ಅರಮನೆಯಲ್ಲಿ ಇದ್ದಾನೆ. ನನಗೆ ಅದು ತುಂಬಾ ಖುಷಿ'' ಎಂದರು ನಟ ದುನಿಯಾ ವಿಜಯ್.

English summary
Kannada Actor Duniya Vijay speaks about Ganesh in Zee Kannada Channel's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada