For Quick Alerts
  ALLOW NOTIFICATIONS  
  For Daily Alerts

  ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?!

  By Harshitha
  |

  ಗಣೇಶ್ 'ಗೋಲ್ಡನ್ ಸ್ಟಾರ್' ಆಗುವ ಮೊದಲು ಜನಜನಿತವಾಗಿದ್ದು 'ಕಾಮಿಡಿ ಟೈಮ್' ಗಣೇಶ್ ಅಂತ.!

  ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಕಾಮಿಡಿ ಟೈಮ್' ಕಾರ್ಯಕ್ರಮದಲ್ಲಿ ಪತ್ರ ಬರೆದವರಿಗೆ ಫೋನ್ ಮಾಡಿ, ಅವರ ಕಾಲೆಳೆದು, ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿದ್ದ ಗಣೇಶ್ ನಂತರ ಹೀರೋ ಆಗಿ.. 'ಗೋಲ್ಡನ್ ಸ್ಟಾರ್' ಆಗಿ ಬೆಳೆದ ರೀತಿಯೇ ಅದ್ಭುತ.

  ಅಷ್ಟಕ್ಕೂ, 'ಕಾಮಿಡಿ ಟೈಮ್' ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಮೊದಲು ಸಿಕ್ಕಿದ್ದು ರವಿಶಂಕರ್ ರವರಿಗೆ.! ಆದ್ರೆ, ಧಾರಾವಾಹಿಗಳಲ್ಲಿ ರವಿಶಂಕರ್ ಬಿಜಿ ಇದ್ದ ಕಾರಣ, 'ಕಾಮಿಡಿ ಟೈಮ್' ಪ್ರೋಗ್ರಾಂಗೆ ಗಣೇಶ್ ಹೆಸರನ್ನ ಸೂಚಿಸಿದ್ರಂತೆ ರವಿಶಂಕರ್ ಗೌಡ.

  ಇಷ್ಟವಿಲ್ಲದೇ, 'ಕಾಮಿಡಿ ಟೈಮ್' ಪ್ರೋಗ್ರಾಂ ಒಪ್ಪಿಕೊಂಡ ಗಣೇಶ್ ಗೆ ನಂತರ ಸಿಕ್ಕಿದ್ದು ಜನಪ್ರಿಯತೆ ಎಂಬ ವರದಾನ. ತಮ್ಮ 'ಕಾಮಿಡಿ ಟೈಮ್' ದಿನಗಳ ಬಗ್ಗೆ ನಟ ಗಣೇಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿದಿಷ್ಟು....

  ಆಫರ್ ಸಿಕ್ಕಿದ್ದು ರವಿಶಂಕರ್ ಗೆ.!

  ಆಫರ್ ಸಿಕ್ಕಿದ್ದು ರವಿಶಂಕರ್ ಗೆ.!

  ''ಕಾಮಿಡಿ ಟೈಮ್' ಕಾರ್ಯಕ್ರಮ ಬಂದಿದ್ದು ನನಗಲ್ಲ. ರವಿಶಂಕರ್ ಗೌಡ ರವರಿಗೆ 'ಕಾಮಿಡಿ ಟೈಮ್' ಮಾಡುವ ಆಫರ್ ಸಿಕ್ಕಿತ್ತು. ಆದರೆ ಅವರು ಆಗ ಬಿಜಿ ಇದ್ದರು. ಹೀಗಾಗಿ, ರವಿಶಂಕರ್ ಗೌಡ, ನನ್ನನ್ನ 'ಕಾಮಿಡಿ ಟೈಮ್'ಗೆ ರೆಫರ್ ಮಾಡಿದರು'' - ಗಣೇಶ್, ನಟ

  ಆದಿ 'ಪ್ರಕಾಶ', ಅಂತ್ಯ 'ಗಣೇಶ': 'WWR-3'ಗೆ ಶುಭಂ

  ಇಷ್ಟ ಇರಲಿಲ್ಲ

  ಇಷ್ಟ ಇರಲಿಲ್ಲ

  ''ರವಿಶಂಕರ್ ಗೌಡ ನನಗೆ ಫೋನ್ ಮಾಡಿದಾಗಲೂ, ''ನಾನು ಕಾಮಿಡಿ ಟೈಮ್ ಮಾಡಲ್ಲ. ಏನಿದ್ದರೂ ಸಿನಿಮಾ ಮಾಡುವೆ'' ಅಂತ ಹೇಳಿದ್ದೆ'' - ಗಣೇಶ್, ನಟ

  ತಾಯಿ ಕಂಡಂತೆ ಗೋಲ್ಡನ್ ಸ್ಟಾರ್ ಗಣೇಶ್ ಅಂದು ಹೇಗಿದ್ದರು?

  ಯಾವುದಕ್ಕೂ ಇರಲಿ ಅಂತ...

  ಯಾವುದಕ್ಕೂ ಇರಲಿ ಅಂತ...

  ''ಆಗ ಕಡಿಮೆ ಚಾನೆಲ್ ಗಳು ಇದ್ವು. ಯಾವುದಕ್ಕೂ ಇರಲಿ ಅಂತ ಸ್ಕ್ರೀನ್ ಟೆಸ್ಟ್ ಗೆ ಹೋದೆ. ಕಾಲೇಜು ದಿನಗಳಿಂದಲೂ ಪ್ರಾಂಕ್ ಕಾಲ್ ಗಳನ್ನ ಮಾಡಿ ನನಗೆ ಅಭ್ಯಾಸ ಇತ್ತು. ನಾನು ಮತ್ತು ಸುಜಾತಾ ಪ್ರಾಂಕ್ ಕಾಲ್ ತರಹ ಮಾತನಾಡಿದಾಗ ಚಾನೆಲ್ ನವರು ತುಂಬಾ ಇಷ್ಟಪಟ್ಟು ನನಗೆ ಅವಕಾಶ ಕೊಟ್ಟರು'' - ಗಣೇಶ್, ನಟ

  ಗಣೇಶ್ ಇಟ್ಟ ಬೇಡಿಕೆ...

  ಗಣೇಶ್ ಇಟ್ಟ ಬೇಡಿಕೆ...

  ''ಶೂಟಿಂಗ್ ಗೆ ಬನ್ನಿ ಅಂತ ಕರೆದರೂ, ನನಗೆ ಇಂಟ್ರೆಸ್ಟ್ ಇಲ್ಲ ಅಂತ ಹೇಳಿದ್ದೆ. ಕಡೆಗೆ ಪ್ರತಿ ಸಂಚಿಕೆಗೆ ಎರಡು ಸಾವಿರ ಕೊಟ್ಟರೆ ಬರ್ತೀನಿ ಅಂತ ಹೇಳ್ದೆ. ಆಗೆಲ್ಲ ಹೆಚ್ಚು ಅಂದ್ರೆ, ಪ್ರತಿ ಸಂಚಿಕೆಗೆ 350 ರೂಪಾಯಿ ಕೊಡುತ್ತಿದ್ದರು. ಹೀಗಾಗಿ, 'ನಾನು ಪ್ರಾಂಕ್ ಮಾಡಬೇಕು, ವಾಯ್ಸ್ ಬದಲಾಯಿಸಬೇಕು, ತುಂಬ ಕೆಲಸ ಇದೆ' ಅಂತ ಹೇಳಿದ್ಮೇಲೆ, ಎಪಿಸೋಡ್ ಗೆ ಸಾವಿರ ರೂಪಾಯಿ ಕೊಡುವೆ ಅಂತ ಹೇಳಿದರು'' - ಗಣೇಶ್, ನಟ

  ಸಾವಿರ ಎಪಿಸೋಡ್

  ಸಾವಿರ ಎಪಿಸೋಡ್

  ''ಎಪಿಸೋಡ್ ಗೆ ಸಾವಿರ ಅಂದ್ರೆ, ತಿಂಗಳಿಗೆ ಇಪ್ಪತ್ತೈದು ಎಪಿಸೋಡ್... ಇಪ್ಪತ್ತೈದು ಸಾವಿರ ಅಂತ ಲೆಕ್ಕ ಮಾಡುತ್ತಿರುವಾಗಲೇ, 1250 ಫೈನಲ್ ಅಂತ ಹೇಳಿಬಿಟ್ಟರು. ನಾನು ಮತ್ತು ಸುಜಾತ ಒಟ್ಟಿಗೆ ಸಾವಿರ ಎಪಿಸೋಡ್ ಮಾಡಿದ್ವಿ. ಮೂರ್ನಾಲ್ಕು ಎಪಿಸೋಡ್ ಪ್ರಸಾರ ಆಗುತ್ತಿದ್ದಂತೆಯೇ ಜನ ನಮ್ಮನ್ನ ಗುರುತಿಸಲು ಶುರು ಮಾಡಿದರು'' - ಗಣೇಶ್, ನಟ

  ಅಪ್ಪಿ-ತಪ್ಪಿ ಗಣೇಶ್ ಒಪ್ಪಿಕೊಳ್ಳದೇ ಇದ್ದಿದ್ರೆ...

  ಅಪ್ಪಿ-ತಪ್ಪಿ ಗಣೇಶ್ ಒಪ್ಪಿಕೊಳ್ಳದೇ ಇದ್ದಿದ್ರೆ...

  ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳಲು ಒದ್ದಾಡುತ್ತಿದ್ದ ಗಣೇಶ್ ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದು 'ಕಾಮಿಡಿ ಟೈಮ್' ಕಾರ್ಯಕ್ರಮ. ಒಂದ್ವೇಳೆ, ಆ ಕಾರ್ಯಕ್ರಮವನ್ನ ಗಣೇಶ್ ಒಪ್ಪಿಕೊಳ್ಳದೇ ಇದ್ದಿದ್ದರೆ..?! ಅದೃಷ್ಟ ಅನ್ನೋದು ಇದಕ್ಕೆ ಅಲ್ವೇ.? ಅದೃಷ್ಟದ ಜೊತೆ ಗಣೇಶ್ ಪಟ್ಟಿರುವ ಶ್ರಮ ಇಂದು ಅವರನ್ನ 'ಗೋಲ್ಡನ್ ಸ್ಟಾರ್' ಆಗಿ ಮಾಡಿದೆ.

  English summary
  Kannada Actor Ganesh speaks about his 'Comedy Time' days in Zee Kannada Channel's popular show 'Weekend With Ramesh-3'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X