»   » 'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?

'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?

Posted By:
Subscribe to Filmibeat Kannada

''ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?'' - ಹೀಗಂತ, ಅನೇಕ ಜನ 'ಚೆಲ್ಲಾಟ' ಸಿನಿಮಾ ಮಾಡಲು ಮುಂದಾಗಿದ್ದ ನಿರ್ಮಾಪಕರನ್ನ ಕೇಳಿದ್ದರಂತೆ.

ಅಲ್ಲಿಯವರೆಗೂ, ಕನ್ನಡ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಪೋಷಿಸುತ್ತಾ ಬಂದಿದ್ದ ಗಣೇಶ್, 'ಕಾಮಿಡಿ ಟೈಮ್' ಪ್ರೋಗ್ರಾಂನಲ್ಲಿ ಪ್ರಾಂಕ್ ಕಾಲ್ ಗಳನ್ನು ಮಾಡಿ ಜನರನ್ನು ರಂಜಿಸುತ್ತಿದ್ದರು.

ಇಂತಿಪ್ಪ ಗಣೇಶ್ ರವರನ್ನ ಹೀರೋ ಮಾಡಬೇಕು ಎಂದು ನಿರ್ಮಾಪಕರೊಬ್ಬರು ಮುಂದೆ ಬಂದಾಗ, ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾಗಿ ಕೇಳಿಬಂದಿದ್ದವು.

ಈ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅಂಜಿಕೆ-ಅಳುಕು ಇಲ್ಲದೆ ಗಣೇಶ್ ಮಾತನಾಡಿದರು. ಅದನ್ನೆಲ್ಲ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ....

ನೀವ್ಯಾಕೆ ಹೀರೋ ಆಗಬಾರದು.?

''ಮಂಗಳೂರಿನಲ್ಲಿ ಒಂದು ಫಂಕ್ಷನ್ ಇತ್ತು. ಅಲ್ಲಿ ಜಗದೀಶ್ ಪರಿಚಯ ಆದರು. ಸ್ನೇಹಿತರಾದ್ವಿ. ''ನೀವ್ಯಾಕೆ ಹೀರೋ ಆಗಬಾರದು'' ಅಂತ ಜಗದೀಶ್ ಕೇಳಿದರು. ಆಗ ಕಿವಿಯಲ್ಲಾ ಬಿಸಿ ಆಗಿ, ''ಮಾಡಬೇಕು ಸರ್. ನನ್ನನ್ನ ಹೀರೋ ಆಗಿ ಯಾರು ಮಾಡುತ್ತಾರೆ ಸರ್'' ಅಂತ ಹೇಳಿದೆ. ''ಎಷ್ಟು ಆಗಬಹುದು ಖರ್ಚು'' ಅಂತ ಕೇಳಿದರು. ''ಎರಡು ಕೋಟಿ ಆಗಬಹುದು'' ಅಂದೆ. ಆಗ ಅವರು ''ನೋಡಿ, ನಾನು ಮಾಡುತ್ತೇನೆ'' ಎಂದುಬಿಟ್ಟರು'' - ಗಣೇಶ್, ನಟ

ಅತ್ತ ಭಾವುಕರಾದ ತಮ್ಮ ಮಹೇಶ್, ಇತ್ತ ಕಣ್ಣೀರಿಟ್ಟ ಅಣ್ಣ ಗಣೇಶ್

ಎಂ.ಡಿ.ಶ್ರೀಧರ್ ಕ್ಲೋಸ್ ಆಗಿದ್ದರು

''ನನಗೆ ಆಗ ಎಂ.ಡಿ.ಶ್ರೀಧರ್ ತುಂಬಾ ಕ್ಲೋಸ್ ಆಗಿದ್ದರು. ಸಿನಿಮಾ ಮಾಡಬೇಕು ಎಂದಾಗ ಮೀಟ್ ಮಾಡೋಣ ಅಂತ ಹೇಳಿದರು. ಆಮೇಲೆ ನಾನೇ ಹೀರೋ ಅಂತ ಗೊತ್ತಾದ್ಮೇಲೆ ಸ್ಕ್ರಿಪ್ಟಿಂಗ್ ಶುರು ಆಯ್ತು'' - ಗಣೇಶ್, ನಟ

'ಫ್ರೆಂಡ್ಸ್ ಗ್ಯಾಂಗ್' ಪ್ರಭಾವ: ಗಣೇಶ್ ರನ್ನ ಗುರುತು ಹಿಡಿಯೋರೇ ಇರಲಿಲ್ಲ.!

ಫೋನ್ ಕಾಲ್ ಇರುವಂಥ ಸ್ಕ್ರಿಪ್ಟ್

''ಚೆಲ್ಲಾಟ' ಸಿನಿಮಾದ ಸ್ಕ್ರಿಪ್ಟ್ ಫೈನಲ್ ಮಾಡ್ವಿ. ಯಾಕಂದ್ರೆ, ಅದರಲ್ಲಿ ಫೋನ್ ಕಾಲ್ ಇತ್ತು. ಜನರಿಗೆ ನಾನು ಚೆನ್ನಾಗಿ ಕನೆಕ್ಟ್ ಆಗಬಹುದು, ಒಳ್ಳೆಯ ಲಾಂಚ್ ಆಗುತ್ತದೆ ಎಂಬ ನಂಬಿಕೆ ಇತ್ತು'' - ಗಣೇಶ್, ನಟ

ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?!

ತಲೆ ಕೆಟ್ಟಿದ್ಯಾ ನಿಮಗೆ.?

''ಕಾಮಿಡಿ ಟೈಮ್ ಗಣೇಶ್ ಈಗ ನಾಯಕ ನಟ'' ಅಂತ ಅನೌನ್ಸ್ ಆಯ್ತು. ಆಗ ಎಂ.ಡಿ.ಶ್ರೀಧರ್ ಹಾಗೂ ಜಗದೀಶ್ ರವರಿಗೆ ಫೋನ್ ಕಾಲ್ ಬರಲು ಆರಂಭ ಆಯ್ತು. ''ಆ ಕಾಮಿಡಿ ಟೈಮ್ ಗಣೇಶ್ ನ ಹೀರೋ ಮಾಡ್ತಿದ್ದೀರಾ.? ತಲೆ ಕೆಟ್ಟಿದ್ಯಾ ನಿಮಗೆ.? ಯಾರ್ರೀ ನೋಡುತ್ತಾರೆ.?'' ಎಂಬ ಕಾಮೆಂಟ್ಸ್ ಬರಲು ಸ್ಟಾರ್ಟ್ ಆಯ್ತು. ಅವರಿಬ್ಬರ ಮೇಲೆ ಪ್ರೆಶರ್ ಶುರು ಆಯ್ತು'' - ಗಣೇಶ್, ನಟ

ಮುಹೂರ್ತ ಒಂದು ಆಗ್ಹೋಗಲಿ..

''ನೆಗೆಟಿವಿಟಿ ಜಾಸ್ತಿ ಆಗೋಯ್ತು. ನಾಳೆ ಏನಾದರೂ ಹೆಚ್ಚು ಕಮ್ಮಿ ಆದರೆ ಏನು ಮಾಡುವುದು.? ಅನ್ನೋದು ನನ್ನ ತಲೆಗೆ ಬಂತು. ಕೊನೆಗೆ ಮುಹೂರ್ತ ಒಂದು ಮುಗಿದು ಹೋಗಲಿ, ಆಮೇಲೆ ಸಿನಿಮಾ ನಿಂತು ಹೋದರೂ ಪರ್ವಾಗಿಲ್ಲ ಅಂತ ನಾನು ಮತ್ತು ಎಂ.ಡಿ.ಶ್ರೀಧರ್ ಅಂದುಕೊಂಡ್ವಿ'' - ಗಣೇಶ್, ನಟ

ದೇವರ ದಯೆಯಿಂದ...

''ಆದ್ರೆ, ದೇವರ ದಯೆಯಿಂದ ಆ ತರಹ ಏನೂ ಆಗಲಿಲ್ಲ. ಮುಹೂರ್ತ ಮುಗಿದು ಶೂಟಿಂಗ್ ಶುರು ಆದ್ಮೇಲೆ, ಎಲ್ಲವೂ ಸರಾಗವಾಗಿ ನಡೆಯಿತು'' - ಗಣೇಶ್, ನಟ

ಜನ ಕೈಬಿಡಲಿಲ್ಲ

''ಅವತ್ತು ಜನ ನನ್ನನ್ನ ಕೈಬಿಡಲಿಲ್ಲ. 'ಮೇನಕಾ' ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆ ಆಯ್ತು. ಬೆಳಗ್ಗೆ ಹೌಸ್ ಫುಲ್ ಆಗಿತ್ತು. ನನಗೆ ತುಂಬಾ ಖುಷಿ ಆಯ್ತು. ಆದ್ರೆ, ವಿತರಣೆಯಲ್ಲಿ ಜಗದೀಶ್ ರವರಿಗೆ ಅಷ್ಟು ದುಡ್ಡು ಬರಲಿಲ್ಲ. ಅದೊಂದೇ ಬೇಜಾರಾಗಿದ್ದು ನನಗೆ'' - ಗಣೇಶ್, ನಟ

English summary
Kannada Actor Ganesh speaks about his first movie 'Chellata' in Zee Kannada Channel's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada