For Quick Alerts
  ALLOW NOTIFICATIONS  
  For Daily Alerts

  ಗಣೇಶ್-ಶಿಲ್ಪಾ ಗಡಿಬಿಡಿ ಮದುವೆ ಬಗ್ಗೆ ಕೇಳಿಬಂದ ಅಂತೆ-ಕಂತೆಯೆಲ್ಲ 'ಬುಲ್ ಶಿಟ್'.!

  By Harshitha
  |

  ಫೆಬ್ರವರಿ, 2008 ರಲ್ಲಿ ನಟ ಗಣೇಶ್ ದಿಢೀರ್ ಅಂತ ಮದುವೆ ಆದರು. ಶಿಲ್ಪಾ ರವರೊಂದಿಗೆ ಗಣೇಶ್ ಮದುವೆ ಆಗುತ್ತಿದ್ದಂತೆಯೇ, ಮಾಧ್ಯಮಗಳಲ್ಲಿ ತರಹೇವಾರಿ 'ಬ್ರೇಕಿಂಗ್ ನ್ಯೂಸ್' ಹೊರಬಿದ್ದವು.

  ಗಣೇಶ್-ಶಿಲ್ಪಾ ಕುರಿತು ಅಂತೆ-ಕಂತೆ ಪುರಾಣಗಳು ಶುರು ಆದವು. ಆದ್ರೆ, ಅವೆಲ್ಲ 'ಬುಲ್ ಶಿಟ್' ಎಂದು ನಟ ಗಣೇಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸ್ಪಷ್ಟ ಪಡಿಸಿದರು.

  ತಾವು ಮದುವೆ ಆದಾಗ, ತಮ್ಮ ಜನಪ್ರಿಯತೆಯೇ ತಮಗೆ ಮುಳುವಾದ ಬಗ್ಗೆ ನಟ ಗಣೇಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದೆ ಓದಿರಿ....

  ಮದುವೆ ಆದ್ಮೇಲೆ ಗೊತ್ತಾಗಿದ್ದು...

  ಮದುವೆ ಆದ್ಮೇಲೆ ಗೊತ್ತಾಗಿದ್ದು...

  ''ಮದುವೆ ಆದ್ಮೇಲೆ ನನಗೆ ಗೊತ್ತಾಗಿದ್ದು, ನಾನೆಷ್ಟು ಪಾಪ್ಯುಲರ್ ಅಂತ. ಅಲ್ಲಿಯವರೆಗೂ ನನಗೆ ಗೊತ್ತಿರಲಿಲ್ಲ. ಆ ಟೈಮ್ ನಲ್ಲಿ ಅವರಿಗೆ (ಶಿಲ್ಪಾ) ಸೆಲೆಬ್ರಿಟಿ, ಪಾಪ್ಯುಲಾರಿಟಿ ಅನ್ನೋದು ಗೊತ್ತಿರಲಿಲ್ಲ. ಅವರದ್ದು ಬಿಸಿನೆಸ್ ಫ್ಯಾಮಿಲಿ'' - ಗಣೇಶ್, ನಟ

  ಮೀಡಿಯಾದಲ್ಲಿ ಬೇರೆ ಬೇರೆ ರೀತಿ ಬಂತು

  ಮೀಡಿಯಾದಲ್ಲಿ ಬೇರೆ ಬೇರೆ ರೀತಿ ಬಂತು

  ''ನನ್ನ ಮದುವೆಯನ್ನ ಮೀಡಿಯಾದಲ್ಲಿ ಬೇರೆ ಬೇರೆ ರೀತಿಯಲ್ಲಿ ತೋರಿಸುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ಆಗ ತುಂಬಾ ಬೇಜಾರಾಯ್ತು. ಯಾವ ಮಟ್ಟಕ್ಕೆ ಆಯ್ತು ಅಂದ್ರೆ, ನನ್ನ ಪಾಪ್ಯುಲಾರಿಟಿ ನಾನು ಇಷ್ಟ ಪಟ್ಟ ಹುಡುಗಿಗೆ ಇಷ್ಟೊಂದು ಹರ್ಟ್ ಮಾಡುತ್ತಿದ್ಯಾ ಅಂತ ಅನಿಸೋಕೆ ಶುರು ಆಯ್ತು'' - ಗಣೇಶ್, ನಟ

  ತುಂಬಾ ಪ್ರೆಶರ್ ಆಯ್ತು

  ತುಂಬಾ ಪ್ರೆಶರ್ ಆಯ್ತು

  ''ಆ ಸಮಯದಲ್ಲಿ ನನಗೆ ತಂಬಾ ಪ್ರೆಶರ್ ಇತ್ತು. ಜನಪ್ರಿಯತೆಯೇ ನನಗೆ ಇಷ್ಟೊಂದು ನೋವು ಕೊಡ್ತಾ ಅನಿಸಿಬಿಡ್ತು'' - ಗಣೇಶ್, ನಟ

  ಎಲ್ಲವೂ ಬುಲ್ ಶಿಟ್

  ಎಲ್ಲವೂ ಬುಲ್ ಶಿಟ್

  ''ಟಿವಿಗಳಲ್ಲಿ ಏನೇನೋ ಹಾಕಿದರು, ಏನೇನೋ ಬಂದುಬಿಡ್ತು. ಎವೆರಿಥಿಂಗ್ ವಾಸ್ ಬುಲ್ ಶಿಟ್. ಆ ತರಹ ಏನೂ ಇರಲಿಲ್ಲ. ಥ್ಯಾಂಕ್ಸ್ ಟು ಎವೆರಿಬಡಿ. ಅದೇ ಟೈಮ್ ನಾನು ಸ್ಟ್ರಾಂಗ್ ಆಗಿದ್ದು'' - ಗಣೇಶ್, ನಟ

  ಸಿನಿಮಾ ಬಿಡಲು ರೆಡಿ ಇದ್ದೆ

  ಸಿನಿಮಾ ಬಿಡಲು ರೆಡಿ ಇದ್ದೆ

  ''ಮದುವೆ ಟೈಮ್ ನಲ್ಲಿ ಪ್ರೆಶರ್ ಆದಾಗ ಶಿಲ್ಪಾ ಗೇವ್ ಅಪ್. ನಾನು ನಿಮ್ಮನ್ನ ಮದುವೆ ಆಗಲ್ಲ. ನನಗೆ ಇದೆಲ್ಲ ಆಗಲ್ಲ ಅಂತ ಹೇಳಿದಳು. ಆಗ, ''ನನ್ನ ಪಾಪ್ಯುಲಾರಿಟಿ ನಿನಗೆ ಇಷ್ಟೊಂದು ತೊಂದರೆ ಕೊಡುತ್ತಿದೆ ಅಂದ್ರೆ ನಾನು ಸಿನಿಮಾ ಬಿಟ್ಟುಬಿಡುತ್ತೇನೆ. ನಾನು ನಿನ್ನ ತುಂಬಾ ಇಷ್ಟ ಪಡುತ್ತೇನೆ'' ಅಂತ ಹೇಳಿದೆ'' - ಗಣೇಶ್, ನಟ

  ಪಾಪ್ಯುಲಾರಿಟಿಯಿಂದ ತೊಂದರೆ

  ಪಾಪ್ಯುಲಾರಿಟಿಯಿಂದ ತೊಂದರೆ

  ''ನಮ್ಮಿಂದ ಯಾರಿಗಾದರೂ ತೊಂದರೆ ಆಗುತ್ತಿದೆ ಅಂದ್ರೆ, ಆ ತೊಂದರೆ ಇಂದ ದೂರ ಇರಬೇಕು. ನನ್ನ ಪಾಪ್ಯುಲಾರಿಟಿ ಇಂದ ಆಕೆಗೆ ತೊಂದರೆ ಆಗುತ್ತಿತ್ತು. ಹೀಗಾಗಿ ಸಿನಿಮಾ ಬಿಡುತ್ತೇನೆ ಎಂದಿದ್ದೆ'' - ಗಣೇಶ್, ನಟ

  ಶಿಲ್ಪಾ ಕಾರಣ

  ಶಿಲ್ಪಾ ಕಾರಣ

  ''ಗಣೇಶ್ ಏನಾದರೂ ಹೀಗೆ ಇದ್ದಾನೆ ಅಂದ್ರೆ ಅದಕ್ಕೆ ಕಾರಣ ಶಿಲ್ಪಾ'' - ಗಣೇಶ್, ನಟ

  English summary
  Kannada Actor Ganesh speaks about his marriage story in Zee Kannada Channel's popular show 'Weekend With Ramesh-3'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X