»   » 'ಫ್ರೆಂಡ್ಸ್ ಗ್ಯಾಂಗ್' ಪ್ರಭಾವ: ಗಣೇಶ್ ರನ್ನ ಗುರುತು ಹಿಡಿಯೋರೇ ಇರಲಿಲ್ಲ.!

'ಫ್ರೆಂಡ್ಸ್ ಗ್ಯಾಂಗ್' ಪ್ರಭಾವ: ಗಣೇಶ್ ರನ್ನ ಗುರುತು ಹಿಡಿಯೋರೇ ಇರಲಿಲ್ಲ.!

Posted By:
Subscribe to Filmibeat Kannada

ಓದಿನಲ್ಲಿ ಆಸಕ್ತಿ ಇಲ್ಲದ ಗಣೇಶ್ ಗೆ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಬೇಕು ಎಂಬ ಬಯಕೆ. ಕನಸಿನ ಬೆನ್ನೇರಿ ಬೆಂಗಳೂರಿಗೆ ಬಂದಿಳಿದ ಗಣೇಶ್ ಗೆ ಸಿಕ್ಕಿದ್ದು ಮಾತ್ರ ಸಣ್ಣ ಪುಟ್ಟ ಅವಕಾಶಗಳು.

ಸಿನಿಮಾಗಳಲ್ಲಂತೂ ಹೀರೋ 'ಫ್ರೆಂಡ್ಸ್' ಆಗಿ ಗಣೇಶ್ ಹಾಗೂ ನಾಗಶೇಖರ್ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಫ್ರೆಂಡ್ಸ್' ಪಾತ್ರಗಳಿಗೆ ಫಿಕ್ಸ್ ಆಗಿದ್ದ ನಾಗಶೇಖರ್, ಗಣೇಶ್ ಮತ್ತು ತಂಡಕ್ಕೆ 'ಫ್ರೆಂಡ್ಸ್ ಗ್ಯಾಂಗ್' ಅಂತ ಎಲ್ಲರೂ ಕರೆಯುತ್ತಿದ್ದರೇ ಹೊರತು ವೈಯುಕ್ತಿಕವಾಗಿ ಗುರುತು ಹಿಡಿಯೋರು ಯಾರೂ ಇರಲಿಲ್ಲ.!

Kannada Actor Ganesh speaks about his struggling days

ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?!

ಈ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟ ಗಣೇಶ್ ಹೇಳಿದ್ದು ಹೀಗೆ - ''ಸಣ್ಣ ಪುಟ್ಟ ಅವಕಾಶ ಸಿಕ್ಕರೂ, ನಾನು ಅದನ್ನ ಹೀರೋ ಫೀಲ್ ನಲ್ಲಿಯೇ ಮಾಡುತ್ತಿದ್ದೆ. ಅನೇಕ ಚಿತ್ರಗಳಲ್ಲಿ ನಾನು ಮತ್ತು ನಾಗಶೇಖರ್ ಒಟ್ಟಿಗೆ ಆಕ್ಟ್ ಮಾಡಿದ್ದೇವೆ. 2003-04ರಲ್ಲಿ ಎಲ್ಲ ಹೀರೋಗಳಿಗೂ ನಾವೇ ಫ್ರೆಂಡ್ಸ್. ನಮ್ಮನ್ನ 'ಫ್ರೆಂಡ್ಸ್ ಗ್ಯಾಂಗ್' ಅಂತ ಕರೆಯೋರು''

ಇದೇ ವೇಳೆ ನಿರ್ದೇಶಕ ನಾಗಶೇಖರ್ ಕೂಡ, ''ಡಾ.ವಿಷ್ಣುವರ್ಧನ್ ರವರಿಂದ ಹಿಡಿದು ವಿನೋದ್ ಪ್ರಭಾಕರ್ ವರೆಗೂ ಎಲ್ಲ ಹೀರೋಗಳಿಗೂ ನಾವೇ ಫ್ರೆಂಡ್ಸ್. ನಾಗಶೇಖರ್-ಗಣೇಶ್ ಬನ್ನಿ ಅಂತ ಕರೆಯುತ್ತಿರಲಿಲ್ಲ. ಫ್ರೆಂಡ್ಸ್ ಗ್ಯಾಂಗ್ ಬನ್ನಿ ಅಂತ ಕರೆಯೋರು'' ಎಂದರು.

ಹೀರೋಗಳ ಅಕ್ಕ-ಪಕ್ಕದಲ್ಲಿ ನಿಂತು 'ಫ್ರೆಂಡ್ಸ್' ನಂತೆ ಪೋಸ್ಟ್ ಕೊಡುತ್ತಿದ್ದ ಗಣೇಶ್ ಇಂದು ಸ್ವತಃ ಹೀರೋ.. ಗೋಲ್ಡನ್ ಸ್ಟಾರ್.! ಅಂದುಕೊಂಡಿದ್ದನ್ನ ಸಾಧಿಸಿದ ಗಣೇಶ್ ನಿಜಕ್ಕೂ ಅನೇಕರಿಗೆ ರೋಲ್ ಮಾಡೆಲ್.

English summary
Kannada Actor Ganesh spoke about his struggling days in Zee Kannada Channel's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada