»   » ಗೋಲ್ಡನ್ ಸ್ಟಾರ್ ಗಣೇಶ್ ಅವರ ನೆಚ್ಚಿನ ನಟ ಯಾರು?

ಗೋಲ್ಡನ್ ಸ್ಟಾರ್ ಗಣೇಶ್ ಅವರ ನೆಚ್ಚಿನ ನಟ ಯಾರು?

Posted By:
Subscribe to Filmibeat Kannada

ಕಾಮಿಡಿ ಡೈಮ್ ಗಣೇಶ್ ಗೋಲ್ಡನ್ ಸ್ಟಾರ್ ಗಣೇಶ್ ಆಗಿದ್ದು ಈಗ ಇತಿಹಾಸ. ಅಂದು ಸ್ಟಾರ್ ನಟರ ಅಭಿಮಾನಿಯಾಗಿದ್ದ ಗಣೇಶ್ ಅವರಿಗೆ, ಇಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನ ಬಳಗವಿದೆ. ಇಂತಹ ಸಮಯದಲ್ಲಿ ನಟ ಗಣೇಶ್ ಅವರಿಗೆ ಒಂದು ಪ್ರಶ್ನೆ ಅಭಿಮಾನಿ ಕಡೆಯಿಂದ ಕೇಳಿ ಬಂದಿದೆ. ''ಗಣೇಶ್ ಅವರ ಫೇವರೆಟ್ ನಟ ಯಾರು''?

ಅಭಿಮಾನಿ ಕೇಳಿದ ಈ ಪ್ರಶ್ನೆಗೆ ಉತ್ತರ ಕೊಟ್ಟ ಗಣೇಶ್ ''ನನಗೆ ಒಂದೊಂದರಲ್ಲಿ ಒಬ್ಬೊಬ್ಬರು ಫೇವರೆಟ್ ಆಕ್ಟರ್ ಇದ್ದಾರೆ. ಆದ್ರೆ, ಚಿಕ್ಕ ವಯಸ್ಸಿನಲ್ಲಿ ನನಗೆ ವಿಷ್ಣು ಸರ್ ಅಂದ್ರೆ ಬಹಳ ಇಷ್ಟ, ಅದೇ ರೀತಿ ಅಣ್ಣಾವ್ರನ್ನ ಪೌರಣಿಕ ಪಾತ್ರಗಳಲ್ಲಿ ನೋಡಿದ್ರೆ ತುಂಬಾ ಇಷ್ಟ ಆಗ್ತಿತ್ತು. ಅಂಬರೀಶ್ ಅವರು ಇನ್ಸ್ ಪೆಕ್ಟರ್ ಪಾತ್ರದಲ್ಲಿ ಇಷ್ಟ ಆಗ್ತಿದ್ರು'' ಎಂದು ಉತ್ತರಿಸಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ಮೇಲೆ ಕೂತ ನಟ ಗಣೇಶ್.!

Kannada Actor Golden Star Ganesh Reveals his Favorite Actor in Kannada

ಬಹುಶಃ ಗಣೇಶ್ ಅವರ ಸಿನಿಮಾಗಳಲ್ಲಿ ಗಮನಿಸಿರಬಹುದು. ಕರಾಟೆ ಶಂಕರ್ ನಾಗ್, ವಿಷ್ಣುವರ್ಧನ್, ಡಾ.ರಾಜ್ ಕುಮಾರ್ ಅವರಂತೆ ಮಿಮಿಕ್ರಿ ಮಾಡಿ ಅಭಿನಯಿಸುತ್ತಿದ್ದರು. ಅವರಂತೆ ಸ್ಟೈಲ್ ಕೂಡ ಮಾಡುತ್ತಿದ್ದರು.

ಗಣೇಶ್ ಹುಟ್ಟುಹಬ್ಬಕ್ಕೆ ಭಟ್ಟರಿಂದ ಸ್ಪೆಷಲ್ ಉಡುಗೊರೆ

ಅಷ್ಟಕ್ಕೂ, ಅಭಿಮಾನಿ ಈ ಪ್ರಶ್ನೆ ಕೇಳಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯ ಕೊನೆಯ ಅತಿಥಿಯಾಗಿ ಗಣೇಶ್ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಈಗಾಗಲೇ ಕಾರ್ಯಕ್ರಮದ ರೆಕಾರ್ಡಿಂಗ್ ಕೂಡ ಮುಗಿದಿದೆ. ಜುಲೈ 1 ಮತ್ತು ಜುಲೈ 2 ರಂದು ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಗಣೇಶ್ ಅವರ ಎಪಿಸೋಡ್ ಪ್ರಸಾರವಾಗಲಿದೆ.

English summary
Kannada Actor Golden Star Ganesh Reveals his Favorite Actor in Kannada

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada