»   » ಅವಮಾನ ಸಹಿಸದೆ ನಾನ್ ವೆಜ್ ಮುಟ್ಟಲ್ಲ ಅಂತ ಶಪಥ ಮಾಡಿದ್ದ ಜಗ್ಗೇಶ್.!

ಅವಮಾನ ಸಹಿಸದೆ ನಾನ್ ವೆಜ್ ಮುಟ್ಟಲ್ಲ ಅಂತ ಶಪಥ ಮಾಡಿದ್ದ ಜಗ್ಗೇಶ್.!

Posted By:
Subscribe to Filmibeat Kannada

ಮಾತಿನಲ್ಲಿ ಜಗತ್ಕಿಲಾಡಿ ಆಗಿರುವ ನಟ ಜಗ್ಗೇಶ್ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ತಾವು ಕನ್ನಡ ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿ, ಎದುರಿಸಿದ ಅವಮಾನ, ಅನುಭವಿಸಿದ ಯಾತನೆಯನ್ನೆಲ್ಲ ರಮೇಶ್ ಅರವಿಂದ್ ಮುಂದೆ ಬಿಚ್ಚಿಟ್ಟರು.

ದೊಡ್ಡ ನಟನಾಗಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟ ಜಗ್ಗೇಶ್ ಗೆ ಅವಕಾಶಗಳು ಸುಲಭವಾಗಿ ಸಿಗಲಿಲ್ಲ. ತುತ್ತು ಅನ್ನಕ್ಕೂ ಜಗ್ಗೇಶ್ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಪ್ರೊಡಕ್ಷನ್ ಬಾಯ್ ಗಳಿಂದಲೂ ಅವಮಾನ ಎದುರಿಸಿರುವ ಜಗ್ಗೇಶ್ ರವರ ಅಂದಿನ ದಿನಗಳ ಮೆಲುಕು ಇಲ್ಲಿದೆ.

ಊಟಕ್ಕೆ ಕೂತರೆ ಬಾಯಿಗೆ ಬಂದ್ಹಂಗೆ ಬೈಯ್ಯೋರು!

''ನಾನು ಭೋಜನ ಪ್ರಿಯ. ಬ್ರೇಕ್ ಟೈಮ್ ನಲ್ಲಿ ತಟ್ಟೆ ಹಿಡಿದುಕೊಂಡು ಕೂತಿರುವಾಗ ಪ್ರೊಡಕ್ಷನ್ ಬಾಯ್ ಬಂದು ಬಾಯಿಗೆ ಬಂದ ಹಾಗೆ ಬೈದು ಓಡಿಸೋರು. ನನಗೆ ತುಂಬಾ ಅವಮಾನ ಆಗೋದು'' - ಜಗ್ಗೇಶ್, ನಟ [ಸುಪ್ರೀಂ ಕೋರ್ಟ್ ನಲ್ಲಿ ಲ್ಯಾಂಡ್ ಮಾರ್ಕ್ ಆದ ಜಗ್ಗೇಶ್-ಪರಿಮಳ ಪ್ರೇಮ ಪ್ರಕರಣದ ತೀರ್ಪು]

ಜಗ್ಗೇಶ್ ಮಾಡಿದ ಶಪಥ

''ಆಗ.. ನನ್ನ ಜೀವನದಲ್ಲಿ... ನನ್ನ ಕಾಲ ಮೇಲೆ ನಾನು ನಿಲ್ಲುವವರಿಗೂ ನಾನು ನಾನ್ ವೆಜ್ ಮುಟ್ಟಲ್ಲ ಅಂತ ಶಪಥ ಮಾಡಿದ್ದೆ. ಹೀಗಾಗಿ ನಾನು ಏಳು ವರ್ಷ ನಾನ್ ವೆಜ್ ತಿಂದಿರಲಿಲ್ಲ'' - ಜಗ್ಗೇಶ್, ನಟ ['ಈಶ್ವರ್ ಗೌಡ'ಗೆ ಜಗ್ಗೇಶ್ ಅಂತ ನಾಮಕರಣ ಮಾಡಿದ್ದು ಯಾರು.?]

ಆಗಿರುವ ಅವಮಾನ ಒಂದೆರಡಲ್ಲ

''ಶೂಟಿಂಗ್ ಗೆ ಹೋದರೆ ನಮಗೆ ಸರಿಯಾಗಿ ರೂಮ್ ಕೊಡುತ್ತಿರಲಿಲ್ಲ. ಪ್ಯಾಸೇಜ್ ನಲ್ಲಿ ಮಲ್ಕೊಳ್ಬೇಕಿತ್ತು. ಎಲ್ಲ ಅವಮಾನಗಳನ್ನ ಸಹಿಸಿಕೊಂಡಿದ್ದೇನೆ'' - ಜಗ್ಗೇಶ್, ನಟ ['ದಾರಿ ತಪ್ಪಿದ ಮಗ' ಜಗ್ಗೇಶ್ ಗೆ ಅಮ್ಮ ನಂಜಮ್ಮ ಬುದ್ಧಿ ಕಲಿಸಿದ್ದು ಹೇಗೆ?]

ಪಾತ್ರಕ್ಕೂ ರಾಜಕೀಯ!

''ನಾನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಚಾನ್ಸ್ ಕೇಳೋಕೆ ಅಂತ ಹೋದಾಗ, 'ಅಗ್ನಿಪರ್ವ' ಎಂಬ ಸಿನಿಮಾಗೆ ಪ್ರಭಾಕರ್ ಶಿಫಾರಸು ಮಾಡಿದ್ರು. ನನಗೆ ಹೇಳಿದದ್ದು ತುಂಬಾ ದೊಡ್ಡ ಕ್ಯಾರೆಕ್ಟರ್. ಆದ್ರೆ, ರಾಜಕೀಯ ಮಾಡಿ ಚಿಕ್ಕ ಪಾತ್ರ ಕೊಟ್ಟುಬಿಟ್ಟರು. ನನಗೆ ಅವತ್ತು ತುಂಬಾ ಸಂಕಟ ಆಗ್ಹೋಯ್ತು. ನನಗೆ ಹೇಳಿದ್ದು ಬೇರೆ ಪಾತ್ರ ಆದ್ರಿಂದ ನಾನು ಅವತ್ತು ಜಗಳ ಮಾಡಿದೆ. ನಂತರ ಮುಂದಿನ ಚಿತ್ರಕ್ಕೆ ಒಳ್ಳೆ ಪಾತ್ರ ನೀಡುವುದಾಗಿ ಭರವಸೆ ನೀಡಿದ್ರು'' - ಜಗ್ಗೇಶ್, ನಟ

ಹೊಸ ತಿರುವು ಸಿಕ್ಕಿದ್ದು

''ನಂತರ 'ಸಂಗ್ರಾಮ' ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ತು. ಚಿತ್ರದ ಪೋಸ್ಟರ್ ನ ನನಗೆ ಡೆಡಿಕೇಟ್ ಮಾಡಿದ್ರು. ಆಗ್ಲೇ ನನ್ನ ಬದುಕು ಚೇಂಜ್ ಆಗಿದ್ದು'' - ಜಗ್ಗೇಶ್, ನಟ

English summary
Kannada Actor Jaggesh remembered his struggling days in Zee Kannada Channel's popular show 'Weekend with Ramesh-3'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada