»   » ವಿದ್ಯಾವಂತ ಕೋಮಲ್ ಚಿತ್ರರಂಗಕ್ಕೆ ಕಾಲಿಡಲು ಕಾರಣ ಒಂದೇ ಒಂದು ಮಾತು.!

ವಿದ್ಯಾವಂತ ಕೋಮಲ್ ಚಿತ್ರರಂಗಕ್ಕೆ ಕಾಲಿಡಲು ಕಾರಣ ಒಂದೇ ಒಂದು ಮಾತು.!

Posted By:
Subscribe to Filmibeat Kannada

ದಶಕದಿಂದ ಎಲ್ಲರಿಗೂ ಕಾಮಿಡಿ ಕಚಗುಳಿ ನೀಡುತ್ತಾ ಬಂದಿರುವ 'ಕಿಲಾಡಿ' ಕೋಮಲ್ ನಿಜ ಬದುಕಿನಲ್ಲಿ ವಿದ್ಯಾವಂತ. ಚೆನ್ನಾಗಿ ಓದುತ್ತಿದ್ದ ಕೋಮಲ್ ಕನ್ನಡ ಚಿತ್ರರಂಗದತ್ತ ಮುಖ ಮಾಡಲು ಕಾರಣ ಅವರ ತಾಯಿ ಹೇಳಿದ ಒಂದೇ ಒಂದು ಮಾತು.

''ಅನಂತ್ ನಾಗ್-ಶಂಕರ್ ನಾಗ್ ಇದ್ದ ಹಾಗೆ, ನಮ್ಮ ಮನೆಯಲ್ಲೂ ಅಣ್ಣ-ತಮ್ಮ ಚಿತ್ರರಂಗದಲ್ಲಿ ಬೆಳೆಯಲಿ'' ಅಂತ ತಾಯಿ ನಂಜಮ್ಮ ಹೇಳಿದ ಮಾತು ಕೋಮಲ್ ರನ್ನ ಗಾಂಧಿನಗರ ಪ್ರವೇಶ ಮಾಡುವ ಹಾಗೆ ಮಾಡಿತು.[ಕಲಾಕುಂಚದಲ್ಲಿ ಅರಳಿತ್ತು ಜಗ್ಗೇಶ್ ತಾಯಿಯ ಬಹುದೊಡ್ಡ ಕನಸು]

ಈ ಇಂಟ್ರೆಸ್ಟಿಂಗ್ ಘಟನೆ ಜಗ್ಗೇಶ್ ಬಾಯಿಂದ ಬಂದಿದ್ದು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ. ಕೋಮಲ್ ಬಗ್ಗೆ ಜಗ್ಗೇಶ್ ಏನೆಲ್ಲ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ....

ಕೋಮಲ್ ವಿದ್ಯಾವಂತ

''ಕೋಮಲ್ ಬಹಳ ವಿದ್ಯಾವಂತ. ನಮ್ಮ ಫ್ಯಾಮಿಲಿಯಲ್ಲಿಯೇ ತುಂಬಾ ಚೆನ್ನಾಗಿ ಓದಿಕೊಂಡಿರುವವನು ಕೋಮಲ್. ಆದರೆ ಅವನನ್ನ ಹಾಳು ಮಾಡಿದ್ದು ನನ್ನ ತಾಯಿ'' - ಜಗ್ಗೇಶ್, ನಟ ['ದಾರಿ ತಪ್ಪಿದ ಮಗ' ಜಗ್ಗೇಶ್ ಗೆ ಅಮ್ಮ ನಂಜಮ್ಮ ಬುದ್ಧಿ ಕಲಿಸಿದ್ದು ಹೇಗೆ?]

ಬಾಂಬ್ ಸಿಡಿಸಿದ ತಾಯಿ

''ನಾನು ಆಗ ಸಿನಿಮಾ ಮಾಡ್ತಿದ್ದೆ ಅಲ್ವಾ.. ಹಾಗೇ, ಕೋಮಲ್ ಕೂಡ ಆಕ್ಟ್ ಮಾಡಲಿ. ''ಅನಂತ್ ನಾಗ್-ಶಂಕರ್ ನಾಗ್ ಇದ್ಹಂಗೆ, ನಮ್ಮ ಮನೆಯಲ್ಲೂ ಇಬ್ಬರೂ ನಟರಾಗಲಿ'' ಅಂತ ನನ್ನ ತಾಯಿ ಬಾಂಬ್ ಹಾಕ್ಬಿಟ್ರು. ಈ ಮಾತು ಕೋಮಲ್ ತಲೆಗೆ ಹೋಯ್ತು. ನಾನು ಎಲ್ಲೇ ಶೂಟಿಂಗ್ ಗೆ ಅಂತ ಹೋದರೂ, ನನ್ನ ಹಿಂದೆ ಕೋಮಲ್ ಬರೋಕೆ ಶುರು ಮಾಡಿದ. ಕಡೆಗೆ ನಾನೇ ಅವನಿಗೆ ಪಾತ್ರ ಕೊಡಿಸಿದೆ'' - ಜಗ್ಗೇಶ್, ನಟ

ಕೋಮಲ್ ಗೆ ಅದೃಷ್ಟ ಕೈ ಹಿಡಿಯಿತು

''ಕೋಮಲ್ ಗೆ ರಿಯಲ್ ಬ್ರೇಕ್ ಸಿಕ್ಕಿದ್ದು 'ಕುರಿಗಳು ಸಾರ್ ಕುರಿಗಳು' ಚಿತ್ರದಲ್ಲಿ. ಅಲ್ಲಿಂದ ಅವನ ಬೆಳವಣಿಗೆ ತುಂಬಾ ಚೆನ್ನಾಗಿ ಆಯ್ತು'' - ಜಗ್ಗೇಶ್, ನಟ

ನಿನ್ನಂಥ ಅಣ್ಣ ಸಿಗುವುದು ಪುಣ್ಯ

''ನಿನ್ನ ಹಾಗೆ ಒಬ್ಬ ಅಣ್ಣ ಸಿಕ್ಕಿರುವುದು ನನ್ನ ಏಳೇಳು ಜನ್ಮದ ಪುಣ್ಯ. ತುಮಕೂರು ಜಿಲ್ಲೆಯಲ್ಲಿಯೇ ನಮ್ಮದು ಬೆಸ್ಟ್ ಥಿಯೇಟರ್. 'ಇಂತಹ ಚಿಕ್ಕ ಊರಲ್ಲಿ ಇಷ್ಟು ದೊಡ್ಡ ಥಿಯೇಟರ್ ಕಟ್ಟಿದ್ದೀರಲ್ಲ' ಅಂತ ಎಲ್ಲರೂ ಬಂದು ನಮಗೆ ಬಯ್ಯೋರು. ಆಗ ನಮ್ಮ ತಂದೆ, 'ನನ್ನ ಮಗ ಸಿನಿಮಾಗೆ ಸೇರ್ಕೊಂಡಿದ್ದಾನೆ. ಅವನಿಗೆ ಕೆಟ್ಟ ಹೆಸರು ಬರಬಾರದು. ಒಬ್ಬ ಥಿಯೇಟರ್ ಓನರ್ ಮಗ ಅಂತ ಗುರುತಿಸಿಕೊಳ್ಳಲಿ. ಹಾಗಾದ್ರೂ, ಒಳ್ಳೆ ಸಿನಿಮಾಗಳಲ್ಲಿ ಅವಕಾಶ ಸಿಗಲಿ'' ಅಂತ ಹೇಳಿಕೊಳ್ತಿದ್ರು. ಯಾಕಂದ್ರೆ, ಅಣ್ಣನಿಗೆ ಆಗ ಸಿನಿಮಾ ಸಿಗುತ್ತಿರಲಿಲ್ಲ'' - ಕೋಮಲ್, ನಟ, ಜಗ್ಗೇಶ್ ಸಹೋದರ

ಚೇಂಜ್ ಸಿಗುತ್ತೆ ಎಂಬ ಆಸೆ

''ಶೋಗಳಿಗೆ ಟಿಕೆಟ್ ಕೊಡೋಕೆ ಅಂತ ಅಣ್ಣ ಓಡಿಹೋಗುತ್ತಿದ್ದ. ಯಾಕಂದ್ರೆ, ಶೋ ಶುರು ಆಗುವಾಗ ಎಷ್ಟೋ ಜನ ಚೇಂಜ್ ಬಿಟ್ಟು ಹೋಗ್ಬಿಡೋರು. ಆ ಚೇಂಜ್ ಎಲ್ಲ ತನಗೆ ಸಿಗುತ್ತೆ ಅಂತ ಹೋಗುತ್ತಿದ್ದ'' - ಕೋಮಲ್, ನಟ, ಜಗ್ಗೇಶ್ ಸಹೋದರ

ಪ್ರತಿಭೆ ಇದ್ದರೆ ಸಾಧನೆ ಮಾಡಬಹುದು

''ಟಿಕೆಟ್ ಕೊಟ್ಟು ಅದರಲ್ಲಿ ಚಿಲ್ಲರೆ ಕಾಸು ಮಾಡಿಕೊಳ್ಳುವುದಕ್ಕೆ ಯೋಚನೆ ಮಾಡ್ತಿದ್ದೋನು, ಬೆಳ್ಳಿಪರದೆ ಮೇಲೆ ರಾರಾಜಿಸುತ್ತಿರುವುದನ್ನು ನೋಡಿದಾಗ ಟ್ಯಾಲೆಂಟ್ ಇದ್ರೆ ಯಾರೇ ಆದರೂ ಖಂಡಿತ ಸಾಧನೆ ಮಾಡುತ್ತಾರೆ ಅಂತ ನನಗೆ ಅನ್ಸುತ್ತೆ'' - ಕೋಮಲ್, ನಟ, ಜಗ್ಗೇಶ್ ಸಹೋದರ

English summary
Kannada Actor Jaggesh spoke about his brother Komal in Zee Kannada Channel's popular show 'Weekend with Ramesh-3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada