»   » ಸಾಧಕರ ಸೀಟ್ ಮೇಲೆ ಕುಳಿತ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ.!

ಸಾಧಕರ ಸೀಟ್ ಮೇಲೆ ಕುಳಿತ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ.!

Posted By:
Subscribe to Filmibeat Kannada

ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ರಕ್ಷಿತ್ ಶೆಟ್ಟಿ, ತಮ್ಮ ವೃತ್ತಿ ಬಿಟ್ಟು 2010 ರಲ್ಲಿ 'ನಮ್ ಏರಿಯಾಲ್ ಒಂದಿನ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಅದಾದ ಬಳಿಕ ಗಾಂಧಿನಗರದಲ್ಲಿ 'ತುಘಲಕ್' ಆಗಿ ತಲೆ ಕೆರ್ಕೊಂಡಿದ್ದ ರಕ್ಷಿತ್ ಶೆಟ್ಟಿಗೆ ಅದೃಷ್ಟ ಖುಲಾಯಿಸಿದ ಸಿನಿಮಾ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆಯೇ, ರಕ್ಷಿತ್ ಶೆಟ್ಟಿ ಸಿಕ್ಕಾಪಟ್ಟೆ ಬಿಜಿಯಾದರು. 'ಉಳಿದವರು ಕಂಡಂತೆ', 'ವಾಸ್ತು ಪ್ರಕಾರ', 'ರಿಕ್ಕಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕಿರಿಕ್ ಪಾರ್ಟಿ' ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಲೇ ಬಂದಿರುವ ರಕ್ಷಿತ್ ಶೆಟ್ಟಿ ಸಾಧಕರ ಸೀಟ್ ಮೇಲೆ ಆಸೀನರಾಗಿದ್ದಾರೆ. ಮುಂದೆ ಓದಿ....

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ

ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದಾರೆ. ಈಗಾಗಲೇ ರಕ್ಷಿತ್ ಶೆಟ್ಟಿ ಸಾಧಕರ ಸೀಟ್ ಮೇಲೆ ಕೂತಿರುವ ಸಂಚಿಕೆಯ ಚಿತ್ರೀಕರಣ ಮುಗಿದಿದೆ.

ರಕ್ಷಿತ್ ಶೆಟ್ಟಿ ಸಾಧನೆಯ ಹೆಜ್ಜೆ ಗುರುತು

ಉಡುಪಿಯಲ್ಲಿ ಜನಿಸಿದ ರಕ್ಷಿತ್ ಶೆಟ್ಟಿಯ ಬಾಲ್ಯದ ಬದುಕು, ಕಾಲೇಜ್ ಲೈಫ್ ಹಾಗೂ ಸಿನಿ ಜರ್ನಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಲಿದೆ.

'ಕಿರಿಕ್' ಗ್ಯಾಂಗ್ ಹಾಜರ್

ರಕ್ಷಿತ್ ಶೆಟ್ಟಿ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಕಿರಿಕ್ ಪಾರ್ಟಿ' ಚಿತ್ರತಂಡದಿಂದ ರಿಶಬ್ ಶೆಟ್ಟಿ, ಸಂಯುಕ್ತ ಹೆಗಡೆ, ಅಜನೀಶ್ ಲೋಕನಾಥ್ ಮುಂತಾದವರು ಪಾಲ್ಗೊಂಡಿದ್ದಾರೆ.

ಪ್ರಸಾರ ಯಾವಾಗ.?

ರಕ್ಷಿತ್ ಶೆಟ್ಟಿ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಯಾವಾಗ ಪ್ರಸಾರ ಅಗಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

English summary
Kannada Actor Rakshit Shetty has taken part in Zee Kannada Channel's popular show Weekend With Ramesh 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada