»   » ಹುಚ್ಚ ವೆಂಕಟ್ ಜಾಗ ತುಂಬಲು ಹೋಗ್ತಾರಾ? ರವಿಮಾಮ..!

ಹುಚ್ಚ ವೆಂಕಟ್ ಜಾಗ ತುಂಬಲು ಹೋಗ್ತಾರಾ? ರವಿಮಾಮ..!

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಿಂದ ಹುಚ್ಚ ವೆಂಕಟ್ ಗೇಟ್ ಪಾಸ್ ಪಡೆದುಕೊಂಡ ಮೇಲೆ ಅವರು ಬಿಟ್ಟು ಹೋದ ಜಾಗ ತುಂಬಲು ಬೇರೆ ಯಾರು ಬರುತ್ತಾರೆ ಎಂದು ಎಲ್ಲರ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ.

ಇದೀಗ ಎಲ್ಲರ ಪ್ರಶ್ನೆಗೆ ಉತ್ತರವೆಂಬಂತೆ ಹುಚ್ಚ ವೆಂಕಟ್ ಜಾಗವನ್ನು ನಮ್ಮ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ರವಿಮಾಮ ಎಂದೇ ಖ್ಯಾತಿ ಗಳಿಸಿದ ನಟ ರವಿಚಂದ್ರನ್ ಅವರು ಆಕ್ರಮಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುವುದು ಪಕ್ಕಾ ಆಗಿದ್ದು, ಬಲಗಾಲಿಟ್ಟು ಒಳಗೆ ಹೋಗಲು ರವಿಮಾಮ ತಯಾರಿ ನಡೆಸುತ್ತಿದ್ದಾರಂತೆ.[ಹುಚ್ಚ ವೆಂಕಟ್ ಇಲ್ಲದ 'ಬಿಗ್ ಬಾಸ್' ನೀವು ನೋಡ್ತೀರಾ.?]

Kannada Actor Ravichandran entry to the Bigg Boss house

ಕೇವಲ ಎರಡು ವಾರ ಇರಿ ಸಾಕು, ಎರಡೂವರೆ ಕೋಟಿ ಕೊಡ್ತೀವಿ ಎಂದರೂ ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ಬಿಲ್ ಕುಲ್ ನೋ ಎಂದಿದ್ದರು ಅನ್ನೋ ವಿಷಯ ನಿಮಗೆ ಗೊತ್ತೇ ಇದೆ ಅಲ್ವಾ?.

ಆದರೆ ಇದೀಗ ಸಿಕ್ಕಿರೋ ಲೇಟೇಸ್ಟ್ ಮಾಹಿತಿ ಪ್ರಕಾರ 2 ವಾರಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇರೋಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ 2 ಕೋಟಿ ಆಫರ್ ಕೊಟ್ಟರಂತೆ. ಅದನ್ನು ರವಿಮಾಮ ಒಪ್ಪಿಕೊಂಡಿದ್ದು, ಆಯ್ತಂತೆ.

ಹುಚ್ಚ ವೆಂಕಟ್ ಜೊತೆ ನಾನಿರಲ್ಲ ಅಂತ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಹಿಂದೆ ನಿರಾಕರಿಸಿದ್ದರಂತೆ. ಆದರೆ ಇದೀಗ ಹುಚ್ಚ ವೆಂಕಟ್ ಅವರು ತಮ್ಮ ಹುಚ್ಚಾಟದಿಂದ ಮನೆಯಿಂದ ಆಚೆ ನಡೆದಿರುವುದರಿಂದ, ನಟ ರವಿಚಂದ್ರನ್ ಅವರು 2 ವಾರಗಳ ಕಾಲ ಮನೆಯಲ್ಲಿ ಇರಬಹುದು ಅನ್ನೋದು ದೊಡ್ಡಣ್ಣನ ಲೆಕ್ಕಾಚಾರ.

ಇನ್ನು ರವಿಚಂದ್ರನ್ ಅವರು ಮನೆ ಒಳಗೆ ಎಂಟ್ರಿ ಕೊಡದಿದ್ದರು, ಮನೆ ಹೊರಗಡೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಟ ಸುದೀಪ್ ಜೊತೆ ರವಿಮಾಮ ಇರುತ್ತಾರೆ ಅಂತ ಈ ಮೊದಲು ಸುದ್ದಿಯಾಗಿತ್ತು.[ಹುಚ್ಚ ವೆಂಕಟ್ ಬಾಯಲ್ಲಿ ಇನ್ಮುಂದೆ 'ಎಕ್ಕಡ' ಬರಲ್ಲ.!]

ಅಲ್ಲದೇ ಈಗಾಗಲೇ ರವಿಚಂದ್ರನ್ ಅವರು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸಿಂಗ್ ಸ್ಟಾರ್' ಕಾರ್ಯಕ್ರಮಕ್ಕೂ ಜಡ್ಜ್ ಆಗಿ ಭಾಗವಹಿಸಿರುವುದರಿಂದ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಸಾಧ್ಯತೆಗಳು ಕೊಂಚ ಜಾಸ್ತೀನೇ ಇದೆ.

ಅದೇನೇ ಇರಲಿ ಸದ್ಯಕ್ಕೆ ರವಿಮಾಮ ಮನೆ ಹೊರಗಡೆ ಇರ್ತಾರೋ ಅಥವಾ ಒಳಗಡೆ ಹೋಗ್ತಾರೋ ಅಂತ ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಮಾತ್ರವಲ್ಲದೇ ಒಳಗೆ ಎಂಟ್ರಿ ಕೊಟ್ಟರೆ, ಚಂದನವನದ 'ಕನಸುಗಾರ' ಬಿಗ್ ಮನೆಯೊಳಗೆ ಅದು ಏನೇನ್ ಕನಸುಗಳನ್ನು ಮಾರಿ ಬರ್ತಾರೆ, ಅಥವಾ ಹೊಸ ಹೊಸ ಟಾಸ್ಕಿಗೆ ಇನ್ಯಾವ ವೇಷ ಧರಿಸ್ತಾರೋ ಅಂತ ನೋಡಲು ಎಲ್ಲರೂ ಕುತೂಹಲದಿಂದ ಕಾದಿದ್ದಾರೆ.

English summary
Bigg Boss Kannada 3: Kannada Actor Ravichandran entry to the Bigg Boss house?.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada