For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ದೇವರುಗಳಿಗೆ 'ಕಿಕ್' ಕೊಡಲು ಸೆಂಚುರಿ ಶಿವಣ್ಣ ರೆಡಿ

  By Suneetha
  |

  ಸದ್ಯಕ್ಕೆ ಎಲ್ಲಾ ಟಿವಿಗಳಲ್ಲಿ ರಿಯಾಲಿಟಿ ಶೋಗಳದೇ ಕಾರುಬಾರು. ತಮ್ಮ ತಮ್ಮ ಚಾನಲ್ ಗಳಲ್ಲಿ ಅತ್ಯುತ್ತಮ ರಿಯಾಲಿಟಿ ಶೋ ಬರಬೇಕು ಅಂತ ಒಳ್ಳೆ ರೇಸ್ ಗಿಳಿದಂತೆ ಟಿವಿ ಚಾನೆಲ್ ನವರು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಾರೆ.

  ಇದೀಗ ಇವೆಲ್ಲದರ ಸಾಲಿಗೆ ಹೊಸ ಸೇರ್ಪಡೆ ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಡ್ಯಾನ್ಸ್ ರಿಯಾಲಿಟಿ ಶೋ. 'ಕಿಕ್' ಎಂಬ ಡ್ಯಾನ್ಸ್ ರಿಯಾಲಿಟಿ ಶೋ ಉದಯ ಟಿವಿಯಲ್ಲಿ ಅತೀ ಶೀಘ್ರದಲ್ಲಿ ಪ್ರಸಾರವಾಗಲಿದ್ದು, ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಸ್ಯಾಂಡಲ್ ವುಡ್ ನ ಘಟಾನುಘಟಿಗಳೇ ಆಗಮಿಸುತ್ತಿದ್ದಾರೆ.['ಬುಲ್ ಬುಲ್' ರಚಿತಾ ಕಿರುತೆರೆಯಲ್ಲಿ ಕಿಕ್ ಕೊಡ್ತಾರೆ.!]

  ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಚಿತಾ ರಾಮ್ ಅವರು ಮುಖ್ಯ ತೀರ್ಪುಗಾರರಾಗಿ 'ಕಿಕ್' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದು, ಈಗಾಗಲೇ ಶಿವಣ್ಣ ಅವರ ಪ್ರೋಮೋ ಬಿಡುಗಡೆ ಆಗಿದೆ.

  ಶಿವಣ್ಣ ಅವರನ್ನು ಪರಿಚಯಿಸುವ ಸಲುವಾಗಿ ಪ್ರೋಮೋ ವಿಡಿಯೋ ಬಿಡುಗಡೆ ಆಗಿದ್ದು, ಸೆಂಚುರಿ ಸ್ಟಾರ್ ಶಿವಣ್ಣ ಅವರು ಬ್ಲ್ಯಾಕ್ ಸೂಟ್ ತೊಟ್ಟು, ಬ್ಲ್ಯಾಕ್ ಶೂನಲ್ಲಿ ಲಕ ಲಕ ಹೊಳೆಯುತ್ತಾ, 'ಜೋಗಯ್ಯ' ಹಾಡಿನ ಮ್ಯೂಸಿಕ್ ಗೆ ಭರ್ಜರಿ ಆಗಿ ಸ್ಟೆಪ್ ಹಾಕಿದ್ದಾರೆ.

  'ಕಾಲೆಳೆಯುವವರು ಲೈಫಲ್ಲಿ ಲಕ್ ಬೇಕು ಅಂತಾರೆ, ಶಿಳ್ಳೆ ಹೊಡಿಯೋರು ಲುಕ್ ಬೇಕು ಅಂತಾರೆ, ಇನ್ಮೇಲ್ ಅಭಿಮಾನಿ ದೇವರುಗಳು 'ಕಿಕ್' ಬೇಕು ಅಂತಾರೆ' ಅಂತ ಸಖತ್ ಡೈಲಾಗ್ ಮೂಲಕ ಶಿವಣ್ಣ ಅವರ ಎಂಟ್ರಿಯಾಗಿದ್ದು, ಅಭಿಮಾನಿಗಳು ಕೇಕೆ ಹಾಕೋದು ಗ್ಯಾರೆಂಟಿ.

  ಶಿವಣ್ಣ ಅವರ 'ಕಿಕ್' ಅದ್ದೂರಿ ಡ್ಯಾನ್ಸ್ ರಿಯಾಲಿಟಿ ಶೋನ ಸೂಪರ್ ಪ್ರೋಮೋ ಇಲ್ಲಿದೆ ನೋಡಿ...

  ಇನ್ನು ಶಿವಣ್ಣ ಅವರು ಮಹಾಗುರುವಾಗಿ ಆಗಮಿಸಿದರೆ ನಟಿ ರಚಿತಾ ರಾಮ್ ಮತ್ತು ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಹರ್ಷ ಅವರು ಸಹ ತೀರ್ಪುಗಾರರಾಗಿ ಆಗಮಿಸಲಿದ್ದಾರೆ.

  English summary
  Kannada Actor Shiva Rajkumar has made a comeback to the small screen with dance reality show Kick, which will be aired on Udaya tv soon. The other judges of the show are choregrapher-director A Harsha and kannada actress Rachita Ram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X