For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯೊಳಗೆ ಹೋಗೋಕೆ ಉಪೇಂದ್ರ ಸಿದ್ಧ!

  By Harshitha
  |

  ಯಾರು ನಂಬಿದ್ರೂ, ಬಿಟ್ರೂ ರಿಯಲ್ ಸ್ಟಾರ್ ಉಪೇಂದ್ರಗೆ 'ಬಿಗ್ ಬಾಸ್' ಮನೆಯೊಳಗೆ ಹೋಗಿ ಸ್ಪರ್ಧಿಸುವುದಕ್ಕೆ ಇಷ್ಟವಿರುವುದು ಮಾತ್ರ ಸತ್ಯ.

  'ಬಿಗ್ ಬಾಸ್' ಮನೆಯ ಎಲ್ಲಾ ಮೂಲೆಗಳಲ್ಲೂ ಕ್ಯಾಮರಾ ಇದ್ದು, ತಮ್ಮನ್ನ ಎಲ್ಲರೂ ಸದಾ ನೋಡುತ್ತಿರುತ್ತಾರೆ ಅಂತ ಅರಿವಿದ್ದು, ಎಲ್ಲಾ ಸನ್ನಿವೇಶಗಳಲ್ಲೂ ತಮ್ಮ ವರ್ತನೆ ಹೇಗೆ ಅಂತ ತಮಗೆ ತಾವೇ ತಿಳಿಯುವ ಕುತೂಹಲ ಉಪೇಂದ್ರಗೆ ಇದ್ಯಂತೆ. ['ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರ 'ರಿಯಲ್ ಸ್ಟಾರ್' ಆದ ಜರ್ನಿ]

  ಹಾಗಂತ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಉಪೇಂದ್ರ ಬಾಯ್ಬಿಟ್ರು. ''ಚಾನ್ಸ್ ಸಿಕ್ಕರೆ ಒಮ್ಮೆ ಖಂಡಿತ 'ಬಿಗ್ ಬಾಸ್' ಮನೆಯೊಳಗೆ ಹೋಗುವುದಕ್ಕೆ ಸಿದ್ಧ'' ಅಂತ ಉಪೇಂದ್ರ ಹೇಳಿದ್ರು. [ರಾಜಕೀಯಕ್ಕೆ ಧುಮುಕಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ!?]

  ತಕ್ಷಣ ಸುದೀಪ್ ಕೂಡ, ''ನೀವು ಹೋಗ್ತೀನಿ ಅಂದ್ರೆ ನಾನು ಬರುವುದಕ್ಕೆ ರೆಡಿ'' ಅಂದ್ರು. [ಇಬ್ಬರಲ್ಲಿ ಕಾಲು ಎಳ್ದೋರ್ ಯಾರು? ಎಳ್ಸ್ಕೊಂಡೋರು ಯಾರು?]

  ಅಲ್ಲಿಗೆ, ಉಪೇಂದ್ರ ಮತ್ತು ಸುದೀಪ್ 'ಬಿಗ್' ಮನೆಯೊಳಗೆ ಬಂಧಿಯಾಗುವುದಕ್ಕೆ ಸಿದ್ಧ. ಈಗ 'ಬಿಗ್ ಬಾಸ್' ಡಿಸೈಡ್ ಮಾಡುವುದೊಂದೇ ಬಾಕಿ.

  English summary
  Kannada Actor Real Star Upendra expressed his desire to contest in Bigg Boss reality show during a chit-chat with Sudeep in Super Sunday with Sudeep (Bigg Boss Kannada-3) show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X