»   » ಸವಾಲು ಸೈಡಿಗಿಟ್ಟ ಯಶ್: ಎಲ್ಲಾ ಚಾನೆಲ್ ಗಳಿಗೂ ಹೊಸ ಆಫರ್.!

ಸವಾಲು ಸೈಡಿಗಿಟ್ಟ ಯಶ್: ಎಲ್ಲಾ ಚಾನೆಲ್ ಗಳಿಗೂ ಹೊಸ ಆಫರ್.!

Posted By:
Subscribe to Filmibeat Kannada

''ರೈತರ ಬಗ್ಗೆ ಒಳ್ಳೆ ಕೆಲಸ ಮಾಡಲು ಮಾಧ್ಯಮಗಳು ರೆಡಿ ಇದ್ದರೆ, ಪ್ರೈಮ್ ಟೈಮ್ ನಲ್ಲಿ ರೈತರ ಪರ ಅಭಿಯಾನ ಮಾಡಿ. ಯಾವುದೇ ಕೆಲಸ ಇದ್ದರೂ, ಅದನ್ನ ಬಿಟ್ಟು ಬರುತ್ತೇನೆ. ಒಂದು ಅಥವಾ ಎರಡು ದಿನ ಅಂತಲ್ಲ. ಅನ್ ಲಿಮಿಟೆಡ್ ಪ್ರೋಗ್ರಾಂ ಮಾಡೋಣ'' ಅಂತ ಕನ್ನಡ ಸುದ್ದಿ ವಾಹಿನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಓಪನ್ ಚಾಲೆಂಜ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಯಶ್ ಹಾಕಿದ ಈ ಸವಾಲಿಗೆ ಪಬ್ಲಿಕ್ ಟಿವಿ ಸೈ ಎಂದಿತು. ಪ್ರಜಾ ಟಿವಿ ಯಲ್ಲಿ ವೇದಿಕೆ ಸಿದ್ಧವಾಯ್ತು. ರೈತರ ಕುರಿತ ಚರ್ಚಾ ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 20) ಸಂಜೆ 7 ಗಂಟೆಗೆ (ಪ್ರೈಮ್ ಟೈಮ್) ಪ್ರಜಾ ಟಿವಿಯಲ್ಲಿ ಶುರುವಾಯ್ತು. ಅದರಲ್ಲಿ ದೂರವಾಣಿ ಕರೆ ಮಾಡಿ ಮಾತನಾಡಿದ್ದು ಬಿಟ್ಟರೆ ಪ್ರಜಾ ಟಿವಿ ಸ್ಟುಡಿಯೋಗೆ ಯಶ್ ಕಾಲಿಡಲಿಲ್ಲ. [ಸವಾಲಿಗೆ ಸೈ ಎಂದ 'ಪ್ರಜಾ ಟಿವಿ': ಸಂಜೆ 7ಕ್ಕೆ 'ಯಶ್'ಗೆ ಅಗ್ನಿಪರೀಕ್ಷೆ.!]

ನುಡಿದಂತೆ ನಡೆಯಲು ಒದ್ದಾಡುತ್ತಿರುವಂತೆ ಕಾಣುವ ಯಶ್ ಈಗ ಎಲ್ಲಾ ಮಾಧ್ಯಮಗಳ ಮುಂದೆ ಒಂದು ಸ್ಪೆಷಲ್ ಆಫರ್ ಇಟ್ಟಿದ್ದಾರೆ. ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುವ ಮುಖಾಂತರ ಎಲ್ಲಾ ಮಾಧ್ಯಮಗಳ ಮುಖ್ಯಸ್ಥರಿಗೂ ಯಶ್ ನೀಡಿರುವ ಆಫರ್ ಏನು ಅಂತ ಅವರ ಮಾತುಗಳಲ್ಲೇ ಓದಿರಿ.....

ಮಾಧ್ಯಮದವರೇ ಸ್ಫೂರ್ತಿ

''ನನಗೆ ಸ್ಫೂರ್ತಿ ನೀಡುತ್ತಿರುವವರು ಮಾಧ್ಯಮದವರೇ....'ಏನು ಮಾಡುತ್ತಿದ್ದೀರಾ?' ಎಂಬ ಪ್ರಶ್ನೆಗೆ 'ಏನು ಮಾಡಬೇಕು?' ಅಂತ ನಾನು ಮುಂದೆ ಬಂದು ನಾನು ಕೇಳುತ್ತಿದ್ದೇನೆ. ನನಗೆ ಪಬ್ಲಿಕ್ ಟಿವಿ, ಪ್ರಜಾ ಟಿವಿ ಕೂಡ ವೇದಿಕೆ ಕಲ್ಪಿಸಿಕೊಟ್ಟಿದೆ. ಬಹಳ ಸಂತೋಷ. ಇದರ ಜೊತೆ ಎಲ್ಲಾ ಮಾಧ್ಯಮಗಳ ಮುಖ್ಯಸ್ಥರು ಫೋನ್ ಮಾಡಿ 'ರೈತರ ಕಾಳಜಿ ಕುರಿತು ನಾವು ಸಾಕಷ್ಟು ಪ್ರೋಗ್ರಾಂ ಮಾಡಿದ್ದೀವಿ. ರೇಟಿಂಗ್ ಬರಲ್ಲ ಅಂತ ಗೊತ್ತಿದ್ದರೂ, ನಾವು ಮಾಡಿದ್ದೀವಿ' ಅಂತ ಹೇಳಿದ್ದಾರೆ'' - ಯಶ್, ನಟ

ರೈತರ ಪರ ಹೋರಾಡೋಣ

''ಪ್ರತಿ ನ್ಯೂಸ್ ಚಾನೆಲ್ ಕೂಡ ವೇದಿಕೆ ಕಲ್ಪಿಸಲಿ, ಅದರಲ್ಲಿ ಬರುವ ರೆವಿನ್ಯೂ ರೈತರಿಗೆ ಹೋಗಬೇಕು. ಅದರಲ್ಲಿ ನಡೆಯುವ ಚರ್ಚೆ ರೈತರ ಸಮಸ್ಯೆ ಕುರಿತು ಆಗಿರಬೇಕು. 961 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಪರಿಹಾರ ಕೂಡ ಸಿಕ್ಕಿದೆ. ಪರಿಹಾರದಿಂದ ಏನು ಲಾಭ.? ಆತ್ಮಹತ್ಯೆ ತಡೆಯುವಂತೆ ಹೋರಾಟ ಮಾಡೋಣ'' - ಯಶ್, ನಟ [ಯಶ್ ಸವಾಲಿಗೆ 'ಪ್ರಜಾ ಟಿವಿ' ಚೀಫ್ ಎಡಿಟರ್ ಕೊಟ್ಟ ಜವಾಬು ಏನು?]

ಮಾಧ್ಯಮಗಳ ಮುಖ್ಯಸ್ಥರಿಗೆ ಯಶ್ ಆಫರ್

''ಎಲ್ಲಾ ಚಾನೆಲ್ ನವರೂ ಕೂಡ ಈಗ ನನಗೆ ಆಹ್ವಾನ ನೀಡುತ್ತಿದ್ದಾರೆ. ಈಗ ಅದಕ್ಕೆ ನಾನೇ ಎಲ್ಲರಿಗೂ ಒಂದು ಆಫರ್ ನೀಡುತ್ತಿದ್ದೇನೆ, ''ಎಲ್ಲಾ ಚಾನೆಲ್ ಗೂ ಡೇಟ್ ಫಿಕ್ಸ್ ಮಾಡಿ ಬರುತ್ತೇನೆ. ಆದ್ರೆ, ಯಾಕೆ ಒಂದೇ ವೇದಿಕೆಯಲ್ಲಿ ಎಲ್ಲಾ ಚಾನೆಲ್ ನ ಮುಖ್ಯಸ್ಥರು ಬಂದು ಕೂತ್ಕೋಬಾರದು.? ಅದರಲ್ಲಿ ರೈತರು, ಜನರು ಕೂಡ ಬರಲಿ. ಎಲ್ಲರೂ ಸೇರಿ ಒಂದು ನಿಲುವಿಗೆ ಬರೋಣ. ಗೆಲುವು ಸಿಗುವವರೆಗೆ ಹೋರಾಡೋಣ'' - ಯಶ್, ನಟ ['ಪಬ್ಲಿಕ್ ಟಿವಿ' ಮತ್ತು ಎಚ್.ಆರ್.ರಂಗನಾಥ್ ಬಗ್ಗೆ ಯಶ್ ಬಾಯಿಂದ ಬಂದ ಮಾತುಗಳಿವು]

ಜವಾಬ್ದಾರಿ ತೆಗೆದುಕೊಳ್ಳಲು ನಾನು ರೆಡಿ

''ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ನಾನು ರೆಡಿ ಇದ್ದೀನಿ. ಬನ್ನಿ, ಎಲ್ಲರೂ ಹೋರಾಡೋಣ. ಎಲ್ಲಾ ಮಾಧ್ಯಮಕ್ಕೂ ಕೇಳಿಕೊಳ್ಳುತ್ತಿದ್ದೇನೆ. ಇಲ್ಲಿ ಕಾಂಪಿಟೇಷನ್ ಮಾಡುವುದು ಬೇಡ. ನಾನು ರೆಡಿ ಇದ್ದೀನಿ, ನೀವು ರೆಡಿ ಇದ್ದರೆ ಎಲ್ಲರೂ ಅನೌನ್ಸ್ ಮಾಡಿ, ಬನ್ನಿ...'' - ಯಶ್, ನಟ

ವಿಡಿಯೋ ನೋಡಿ....

ತಮ್ಮ ಮುಂದಿನ ಹೆಜ್ಜೆ ಬಗ್ಗೆ ಯಶ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....ಈ ಲಿಂಕ್ ಕ್ಲಿಕ್ ಮಾಡಿ....

English summary
Keeping Challenge aside, Kannada Actor Yash has given new offer for all Kannada News Channels. Read the article to now about Yash's new offer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada