»   » ಒಂದೇ ಒಂದು ಮಾರ್ಕ್ ನಲ್ಲಿ ಒಮ್ಮೆ ಫೇಲ್ ಆಗಿದ್ದ ನಟಿ ಭಾರತಿ.!

ಒಂದೇ ಒಂದು ಮಾರ್ಕ್ ನಲ್ಲಿ ಒಮ್ಮೆ ಫೇಲ್ ಆಗಿದ್ದ ನಟಿ ಭಾರತಿ.!

Posted By:
Subscribe to Filmibeat Kannada

ನಟಿ ಭಾರತಿ ವಿಷ್ಣುವರ್ಧನ್ ಅತ್ಯುತ್ತಮ ನಟಿ.. ಇದರಲ್ಲಿ ಎರಡು ಮಾತೇ ಇಲ್ಲ..! ಆಕ್ಟಿಂಗ್ ನಲ್ಲಿ ಇಂಟ್ರೆಸ್ಟ್ ಇಲ್ಲದೇ ಇದ್ದರೂ, ಚಿತ್ರರಂಗಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ನಟಿ ಭಾರತಿ ವಿಷ್ಣುವರ್ಧನ್ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಪ್ರತಿಭಾವಂತ ಕಲಾವಿದೆ ನಟಿ ಭಾರತಿ ವಿಷ್ಣುವರ್ಧನ್.

ಚಿಕ್ಕವಯಸ್ಸಿಂದಲೂ ಗಾಯನ ಮತ್ತು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಭಾರತಿ ರವರಿಗೆ ಓದಿನ ಬಗ್ಗೆ ಇದ್ದ ಆಸಕ್ತಿ ಅಷ್ಟಕಷ್ಟೆ. ಪಾಸ್ ಆಗಲು 35 ಮಾರ್ಕ್ಸ್ ಬೇಕಾಗಿರುವುದರಿಂದ, ಅಷ್ಟು ಅಂಕಗಳು ಬಂದ್ರೆ ಸಾಕು ಎಂಬ ಲೆಕ್ಕಾಚಾರ ಭಾರತಿರವರದ್ದು.

Bharathi Vishnuvardhan

ಈ ಲೆಕ್ಕಾಚಾರ ಒಮ್ಮೆ ಉಲ್ಟಾ ಹೊಡೆದಿದ್ದರಿಂದ, ಒಂದು ಬಾರಿ ಭಾರತಿ ಫೇಲ್ ಆಗ್ಬಿಟ್ಟಿದ್ರಂತೆ. ಈ ವಿಚಾರ ಬಯಲಾಗಿದ್ದು ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ.

''ಪಾಸ್ ಆಗಲು 35 ಮಾರ್ಕ್ಸ್ ಬೇಕು. ಹೀಗಾಗಿ, ಜಾಸ್ತಿ ಯಾಕೆ ಬೇಕು.? ಅಂತ ಉತ್ತರಗಳನ್ನ ಬರೆಯುತ್ತಿರಲಿಲ್ಲ. ಒಮ್ಮೆ 34 ಬಂದುಬಿಡ್ತು. ನಂತರ ಟೀಚರ್ ಜೊತೆ ಮಾತನಾಡಿದ್ಮೇಲೆ ಪಾಸ್ ಮಾಡಿದ್ರು. ಅಲ್ಲಿಂದ ಇನ್ನೂ 5 ಮಾರ್ಕ್ಸ್ ಗೆ ಹೆಚ್ಚಿಗೆ ಬರೆಯಲು ಶುರು ಮಾಡಿದೆ'' ಅಂತ ನಟಿ ಭಾರತಿ ವಿಷ್ಣುವರ್ಧನ್ ತಮ್ಮ ಬಾಲ್ಯದ ದಿನಗಳ ಕುರಿತು ಕಾರ್ಯಕ್ರಮದಲ್ಲಿ ಮೆಲುಕು ಹಾಕಿದರು.

English summary
Kannada Actress Bharathi Vishnuvardhan remembered her childhood days in Zee Kannada's Popular show 'Weekend with Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada