»   » ಅಣ್ಣ ಯಶ್ ಬಗ್ಗೆ ತಂಗಿ ದೀಪಿಕಾ ದಾಸ್ ಕೊಟ್ಟ ಹೇಳಿಕೆ ಏನ್ಗೊತ್ತಾ.?

ಅಣ್ಣ ಯಶ್ ಬಗ್ಗೆ ತಂಗಿ ದೀಪಿಕಾ ದಾಸ್ ಕೊಟ್ಟ ಹೇಳಿಕೆ ಏನ್ಗೊತ್ತಾ.?

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ರಾಕಿಂಗ್ ಸ್ಟಾರ್ ಯಶ್ ಕಾಲಿಟ್ಟು ದಶಕದ ಮೇಲಾಗಿದೆ. ಇನ್ನೂ ನಟಿ ದೀಪಿಕಾ ದಾಸ್ ಕೂಡ ಗಾಂಧಿನಗರಕ್ಕೆ ಪರಿಚಯ ಆಗಿ ವರುಷಗಳು ಉರುಳಿವೆ. ಹೀಗಿದ್ದರೂ, ನಟ ಯಶ್ ರವರ ತಂಗಿ (ಚಿಕ್ಕಮ್ಮನ ಮಗಳು) ನಟಿ ದೀಪಿಕಾ ದಾಸ್ ಅನ್ನೋದು ಬಹುತೇಕರಿಗೆ ಗೊತ್ತಿರಲಿಲ್ಲ.

ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಈ ಗುಟ್ಟು ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಜಗಜ್ಜಾಹೀರಾಯ್ತು.

ಇದೀಗ ನಟಿ ದೀಪಿಕಾ ದಾಸ್, ಸಹೋದರ ಯಶ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ದೀಪಿಕಾ ದಾಸ್, ನಟ ಯಶ್ ಬಗ್ಗೆ ಕೊಟ್ಟಿರುವ ಹೇಳಿಕೆ ಇಂತಿದೆ...

ಕನ್ನಡ ಚಿತ್ರರಂಗಕ್ಕೆ ದೀಪಿಕಾ ದಾಸ್ ಕಾಲಿಡಲು ಮುಖ್ಯ ಕಾರಣ.?

''ಈ ಇಂಡಸ್ಟ್ರಿಗೆ ಬರುವ ಉದ್ದೇಶ ನನಗಿರಲಿಲ್ಲ. ಇಂಟ್ರೆಸ್ಟ್ ಕೂಡ ಇರಲಿಲ್ಲ. ಆದ್ರೆ, ಅಮ್ಮ ಒತ್ತಾಯ ಮಾಡಿದ ಮೇಲೆ ಒಪ್ಪಿಕೊಂಡೆ'' ಎಂದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ದೀಪಿಕಾ ದಾಸ್ ಹೇಳಿದರು.

ಯಶ್ ರಿಂದ ಸ್ಫೂರ್ತಿ ಪಡೆದುಕೊಂಡ್ರಾ.?

''ಸಾಕಷ್ಟು ಜನರಿಗೆ ಈ ವಿಷಯ ಗೊತ್ತಿಲ್ಲ ನೀವು ಯಶ್ ರವರ ತಂಗಿ (ಚಿಕ್ಕಮ್ಮನ ಮಗಳು) ಅಂತ. ಯಶ್ ನಿಮ್ಮ ಸಹೋದರ.. ಅವರಿಂದ ನಟನೆಯಿಂದ ಸ್ಫೂರ್ತಿ ಪಡೆದುಕೊಂಡ್ರಾ.?'' ಎಂದು ಅಕುಲ್ ಬಾಲಾಜಿ ಕೇಳಿದಾಗ ದೀಪಿಕಾ ದಾಸ್ ಕೊಟ್ಟ ಉತ್ತರ ಹೀಗಿತ್ತು....

ಹೆಸರು ಇಟ್ಟುಕೊಂಡು ಬರಲು ಸಾಧ್ಯ ಇಲ್ಲ

''ಹೆಸರು ಇಟ್ಟುಕೊಂಡು ಬರುವುದರಿಂದ ಏನೂ ಪ್ರಯೋಜನ ಇಲ್ಲ. ಟ್ಯಾಲೆಂಟ್ ಹಾಗೂ ಹಾರ್ಡ್ ವರ್ಕ್ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ನಂಬಿರುವವಳು ನಾನು'' - ದೀಪಿಕಾ ದಾಸ್, ನಟಿ

ಯಶ್ ಗೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತೇನೆ

''ನನ್ನ ಕಡೆಯಿಂದ ಏನಾಗುತ್ತೆ, ನಾನು ಏನು ಮಾಡಬಹುದು ಎಂಬುದರ ಬಗ್ಗೆ ಗಮನ ಹರಿಸುತ್ತಿದ್ದೇನೆ. ನಾನು ಏನಾದರೂ ಸಾಧನೆ ಮಾಡಿ ಅವರಿಗೆ ಹೆಮ್ಮೆ ತರಬೇಕು ಎಂಬುದು ನನ್ನ ಆಸೆ'' ಎಂದು ಉತ್ತರ ಕೊಟ್ಟರು ನಟಿ ದೀಪಿಕಾ ದಾಸ್.

ಮುಂದೆ ತುಂಬಾ ಇದೆ

''ಯಶ್ ಗೆ ಯಾವತ್ತಾದರೂ ನೀವು ಹೆಮ್ಮ ತಂದ ಉದಾಹರಣೆ ಇದ್ಯಾ.?'' ಎಂದು ಅಕುಲ್ ಕೇಳಿದಕ್ಕೆ, ''ಇನ್ನೂ ಇಲ್ಲ. ಮುಂದೆ ತುಂಬಾ ಇದೆ'' ಎಂದರು ದೀಪಿಕಾ ದಾಸ್.

ಯಶ್ ಕಾಮೆಂಟ್ ಮಾಡಿದ್ದಾರಾ.?

''ನಿಮ್ಮ ಧಾರಾವಾಹಿಗಳನ್ನ ನೋಡಿ ಯಶ್ ಕೊಟ್ಟ ಪ್ರತಿಕ್ರಿಯೆ ಏನು.?'' ಎಂದು ಅಕುಲ್ ಕೇಳಿದಾಗ, ''ಚೆನ್ನಾಗಿ ಮಾಡುತ್ತಿದ್ದೀಯಾ.. ಅದೇ ತರಹ ಮುಂದುವರಿಯಲಿ ಎನ್ನುತ್ತಾರೆ. ಅವರ ಆಶೀರ್ವಾದ ನನ್ನ ಮೇಲೆ ಇದೆ'' ಎಂದರು ದೀಪಿಕಾ ದಾಸ್.

ರಾಧಿಕಾ ಪಂಡಿತ್ ಭೇಟಿ ಆಗಿಲ್ಲ

''ರಾಧಿಕಾ ಪಂಡಿತ್ ಏನಂತಾರೆ.?'' ಎಂದು ಅಕುಲ್ ಕೇಳಿದಾಗ, ''ನಿಜ ಹೇಳಬೇಕು ಅಂದ್ರೆ ನಾನು ಅವರನ್ನ ಇನ್ನೂ ಮೀಟ್ ಮಾಡಿಲ್ಲ'' ಎಂದರು ದೀಪಿಕಾ ದಾಸ್.

English summary
Kannada Actress Deepika Das comments on her cousin brother Rocking Star Yash in Colors Super Channel's popular show 'Super Talk Time'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada