»   » 'ಲಕ್ಷ್ಮಿ ಬಾರಮ್ಮ' ಚಿನ್ನು(ಕವಿತಾ)ಗೂ ಕಾಡಿತ್ತು 'ಕಾಸ್ಟಿಂಗ್ ಕೌಚ್' ಪೆಡಂಭೂತ.!

'ಲಕ್ಷ್ಮಿ ಬಾರಮ್ಮ' ಚಿನ್ನು(ಕವಿತಾ)ಗೂ ಕಾಡಿತ್ತು 'ಕಾಸ್ಟಿಂಗ್ ಕೌಚ್' ಪೆಡಂಭೂತ.!

Posted By:
Subscribe to Filmibeat Kannada

''ಸಿನಿಮಾದಲ್ಲಿ ಚಾನ್ಸ್ ಸಿಗಬೇಕು ಅಂದ್ರೆ ನಿರ್ಮಾಪಕರ ಜೊತೆ ಅಡ್ಜಸ್ಟ್ ಮಾಡಿಕೊಳ್ಳಬೇಕು'' ಎಂಬ ವಿಕೃತ ಸಂಸ್ಕೃತಿ ಸ್ಯಾಂಡಲ್ ವುಡ್ ನಲ್ಲಿಯೂ ಇದೆ ಎಂದು 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ಚಿನ್ನು (ನಟಿ ಕವಿತಾ ಗೌಡ) ಬಾಯ್ಬಿಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಾಮುಕರು ಇದ್ದಾರೆ ಎಂಬ ದಿಟ್ಟ ಹೇಳಿಕೆಯನ್ನ ನಟಿ ಕವಿತಾ ಗೌಡ ನೀಡಿದ್ದಾರೆ. ತಮಗೆ ಆದ ಕರಾಳ ಅನುಭವದ ಕುರಿತು ಸ್ವತಃ ನಟಿ ಕವಿತಾ ಗೌಡ ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಕವಿತಾ ಗೌಡ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ, ನಟಿ ರಾಜ್ ಶ್ರೀ ಪೊನ್ನಪ್ಪ ಜೊತೆ ನಟಿ ಕವಿತಾ ಗೌಡ ಅತಿಥಿ ಆಗಿ ಭಾಗವಹಿಸಿದ್ದರು. ಇದೇ ಶೋನಲ್ಲಿ 'ಕಾಸ್ಟಿಂಗ್ ಕೌಚ್' ಕುರಿತು ನಟಿ ಕವಿತಾ ಗೌಡ ಮಾತನಾಡಿದರು.

'ಕಾಸ್ಟಿಂಗ್ ಕೌಚ್' ಖಂಡಿತ ಇದೆ, ನಡೆಯುತ್ತಲೇ ಇದೆ ಎಂದ ಶ್ರುತಿ ಹರಿಹರನ್.!

ಎರಡು ಬಾರಿ ಕಾಸ್ಟಿಂಗ್ ಕೌಚ್.!

ತಮ್ಮ ವೃತ್ತಿ ಜೀವನದಲ್ಲಿ ಎರಡು ಬಾರಿ 'ಕಾಸ್ಟಿಂಗ್ ಕೌಚ್' ಫೇಸ್ ಮಾಡಿದ್ದಾರಂತೆ ನಟಿ ಕವಿತಾ ಗೌಡ.

ಹೆಣ್ಮಕ್ಕಳನ್ನ ಮಂಚಕ್ಕೆ ಕರೆಯುವವರಿಗೆ ಚಪ್ಪಲಿ ತಗೊಂಡು ಹೊಡೆಯಿರಿ ಎಂದ ಜಗ್ಗೇಶ್!

ಒಮ್ಮೆ ಆಗಿದ್ದೇನು.?

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಸೆಟ್ ನಲ್ಲಿಯೇ... ಸಿನಿಮಾ ಅವಕಾಶದ ಕುರಿತು ಮಾತನಾಡಲು ಬಂದ ನಿರ್ಮಾಪಕರ ಮ್ಯಾನೇಜರ್, ''ಪ್ರೊಡ್ಯೂಸರ್ ನಿಮ್ಮ ಹತ್ತಿರ ಬೇರೆ ಏನೋ ಎಕ್ಸ್ ಪೆಕ್ಟ್ ಮಾಡ್ತಿದ್ದಾರೆ. ನಿಮಗೆ ಎಷ್ಟು ದುಡ್ಡು ಬೇಕಾದರೂ ಕೊಡುತ್ತೇವೆ'' ಎಂದು ನಟಿ ಕವಿತಾ ಗೌಡ ಬಳಿ ಹೇಳಿದರಂತೆ.

ನಾಚಿಕೆಗೇಡು: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್'! ಸಾಕ್ಷಿ ಬೇಕಾ?

ಗುಡುಗಿದ ಕವಿತಾ

''ಇಲ್ಲಿಂದ ಈಗಲೇ ಎದ್ದು ಹೋಗಿ, ಇಲ್ಲಾಂದ್ರೆ ಲೈಟ್ ಬಾಯ್ಸ್ ನ ಕರೆಯಿಸಿ ಹೊಡೆಸುತ್ತೇನೆ'' ಎಂದು ಕವಿತಾ ಗೌಡ ಗುಡುಗಿದರಂತೆ.

ಇನ್ನೊಮ್ಮೆ ಹೋಟೆಲ್ ನಲ್ಲಿ...

ಇನ್ನೊಮ್ಮೆ ಕಥೆ ಕೇಳಲು ಹೋಟೆಲ್ ಗೆ ಹೋಗಿದ್ದಾಗಲೂ, ಇಂಥದ್ದೇ ಅನುಭವ ಆಯ್ತು ಎಂದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ಕವಿತಾ ಗೌಡ ಹೇಳಿಕೊಂಡಿದ್ದಾರೆ.

ನಾಚಿಕೆಗೇಡು.!

ಕನ್ನಡ ಚಿತ್ರರಂಗದಲ್ಲಿ ನಟಿಯರನ್ನ ಮಂಚಕ್ಕೆ ಆಹ್ವಾನಿಸುವ ನಿರ್ಮಾಪಕರು, ನಿರ್ದೇಶಕರಿರುವುದು ನಿಜಕ್ಕೂ ನಾಚಿಕೆಗೇಡು.

English summary
Kannada Actress Kavitha Gowda speaks about Casting Couch

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada