»   » ನಟಿ ಮೇಘನಾ ಗಾಂವ್ಕರ್ ಅಷ್ಟಾಗಿ ಸಿನಿಮಾ ಮಾಡ್ತಾನೆ ಇಲ್ಲ.! ಯಾಕೆ.?

ನಟಿ ಮೇಘನಾ ಗಾಂವ್ಕರ್ ಅಷ್ಟಾಗಿ ಸಿನಿಮಾ ಮಾಡ್ತಾನೆ ಇಲ್ಲ.! ಯಾಕೆ.?

Posted By:
Subscribe to Filmibeat Kannada

'ಚಾರ್ಮಿನಾರ್' ಬೆಡಗಿ ನಟಿ ಮೇಘನಾ ಗಾಂವ್ಕರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಹತ್ತತ್ರ ಎಂಟು ವರ್ಷಗಳಾಗಿವೆ. ಈ ಎಂಟು ವರ್ಷಗಳಲ್ಲಿ ಮೇಘನಾ ಗಾಂವ್ಕರ್ ಅಭಿನಯಿಸಿರುವ ಸಿನಿಮಾಗಳ ಸಂಖ್ಯೆ ಕೇವಲ 6.

'ಹೀಗ್ಯಾಕೆ?' ಅಂತ ಪ್ರಶ್ನೆ ಮಾಡಿದರೆ 'ತುಂಬಾ ಚ್ಯೂಸಿ' ಎಂಬ ಉತ್ತರ ನಟಿ ಮೇಘನಾ ಗಾಂವ್ಕರ್ ಕಡೆಯಿಂದ ಬರುತ್ತದೆ.

Kannada Actress Meghana Gaonkar speaks about her choosy nature

ನಟಿ ಮೇಘನಾ ಗಾಂವ್ಕರ್ ಸಿನಿಮಾ ಮಾಡ್ತಿಲ್ಲ ಯಾಕೆ?

''ಕಥೆ ಹೇಳುವಾಗ ನನಗೆ ಫೀಲ್ ಆಗಬೇಕು. ಪ್ರತಿ ತಿಂಗಳು ನಾನು ಕಥೆ ಕೇಳುತ್ತಿರುತ್ತೇನೆ. ನನಗೆ ಕಥೆ ಇಷ್ಟ ಆಗಲಿಲ್ಲ ಅಂದ್ರೆ ಖಂಡಿತ ಮಾಡೋಕೆ ಹೋಗಲ್ಲ'' ಎಂದು ತಮ್ಮ ಚ್ಯೂಸಿ ನೇಚರ್ ಬಗ್ಗೆ ನಟಿ ಮೇಘನಾ ಗಾಂವ್ಕರ್ ಹೇಳಿಕೊಂಡಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.

ನಟ ಅನೀಶ್ ತೇಜೇಶ್ವರ್ ಹಾಗೂ ನಿರ್ದೇಶಕ 'ಸಿಂಪಲ್' ಸುನಿ ಜೊತೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅತಿಥಿ ಆಗಿ ಭಾಗವಹಿಸಿದ ನಟಿ ಮೇಘನಾ ಗಾಂವ್ಕರ್ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ.

ಸೀರಿಯಲ್ ಲೋಕಕ್ಕೆ ಕಾಲಿಟ್ಟ 'ಚಾರ್ಮಿನಾರ್' ಚೆಲುವೆ ಮೇಘನಾ

ಅಂದ್ಹಾಗೆ, 'ನಮ್ ಏರಿಯಾಲ್ ಒಂದಿನ', 'ವಿನಾಯಕ ಗೆಳೆಯರ ಬಳಗ', 'ತುಘ್ಲಕ್', 'ಚಾರ್ಮಿನಾರ್', 'ಭಕ್ತ ಶಂಕರ', 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರಗಳಲ್ಲಿ ನಟಿ ಮೇಘನಾ ಗಾಂವ್ಕರ್ ಅಭಿನಯಿಸಿದ್ದಾರೆ.

English summary
Kannada Actress Meghana Gaonkar speaks about her choosy nature
Please Wait while comments are loading...