»   » ನಟಿ ಮೇಘನಾ ಗಾಂವ್ಕರ್ 'ಬಾಯ್ ಫ್ರೆಂಡ್' ಆಸ್ಟ್ರೇಲಿಯಾದಲ್ಲಿದ್ದಾರಾ.?

ನಟಿ ಮೇಘನಾ ಗಾಂವ್ಕರ್ 'ಬಾಯ್ ಫ್ರೆಂಡ್' ಆಸ್ಟ್ರೇಲಿಯಾದಲ್ಲಿದ್ದಾರಾ.?

Posted By:
Subscribe to Filmibeat Kannada

ನಟಿ ಮೇಘನಾ ಗಾಂವ್ಕರ್ ರವರ ಬಾಯ್ ಫ್ರೆಂಡ್ ಅಥವಾ ಲವ್ವರ್ ಅಥವಾ ಆತ್ಮೀಯ ಗೆಳೆಯ ಆಸ್ಟ್ರೇಲಿಯಾದಲ್ಲಿದ್ದಾರಾ.? ಹೀಗೊಂದು ಅನುಮಾನ ಮೂಡಲು ಕಾರಣ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ.

ನಟಿ ಮೇಘನಾ ಗಾಂವ್ಕರ್ ಅಷ್ಟಾಗಿ ಸಿನಿಮಾ ಮಾಡ್ತಾನೆ ಇಲ್ಲ.! ಯಾಕೆ.?

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ಅನೀಶ್ ತೇಜೇಶ್ವರ್ ಜೊತೆ ಅತಿಥಿ ಆಗಿ ನಟಿ ಮೇಘನಾ ಗಾಂವ್ಕರ್ ಭಾಗವಹಿಸಿದರು. ಇದೇ ಕಾರ್ಯಕ್ರಮದಲ್ಲಿ ನಿರೂಪಕ ಅಕುಲ್ ಬಾಲಾಜಿ 'ಆಸ್ಟ್ರೇಲಿಯಾ'ದ ಟಾಪಿಕ್ ಎತ್ತಿದಾಗ ನಟಿ ಮೇಘನಾ ಗಾಂವ್ಕರ್ ನಾಚಿ ನೀರಾದರು. ಮುಂದೆ ಓದಿರಿ...

ಮೇಘನಾ ಗಾಂವ್ಕರ್ ಸ್ಟೇಟಸ್ ಏನು.?

ಹರಟೆ ಹೊಡೆಯುವ ಸಂದರ್ಭದಲ್ಲಿ ''ನಿಮ್ಮ ಸ್ಟೇಟಸ್ ಏನು.?'' ಎಂದು ನಿರೂಪಕ ಅಕುಲ್ ಬಾಲಾಜಿ, ನಟಿ ಮೇಘನಾ ಗಾಂವ್ಕರ್ ಗೆ ಕೇಳಿದರು.

ಹೇಳಲ್ಲ ಅಂದ್ರೆ ಹೇಳಲ್ಲ.!

'ಸ್ಟೇಟಸ್' ಪ್ರಶ್ನೆಗೆ ಉತ್ತರ ಕೊಡಲು ನಿರಾಕರಿಸಿದ ನಟಿ ಮೇಘನಾ ಗಾಂವ್ಕರ್, ''ನಾನು ಹೇಳಲ್ಲ. ನನ್ನ ಸ್ಟೇಟಸ್ ತುಂಬಾ ಸೀಕ್ರೆಟ್. ನೀವು ಗೆಸ್ ಮಾಡಿ, ನಿಮಗೆ ತಾಕತ್ ಇದ್ರೆ ತಿಳಿದುಕೊಂಡು ಬಂದು ನನಗೆ ಹೇಳಿ'' ಎಂದರು.

ಎಂಗೇಜ್ ಆಗಿಲ್ವಂತೆ.!

''ನೀವು ಎಂಗೇಜ್ ಆಗಿದ್ದೀರಾ.?'' ಎಂದು ಅಕುಲ್ ಬಾಲಾಜಿ ಕೇಳಿದಾಗ, ''ನೋ... ನೋ ಚಾನ್ಸ್'' ಎಂದರು ನಟಿ ಮೇಘನಾ ಗಾಂವ್ಕರ್

ರಿಲೇಶನ್ ಶಿಪ್ ನಲ್ಲಿ ಇಲ್ವಂತೆ.!

''ರಿಲೇಶನ್ ಶಿಪ್ ನಲ್ಲಿ ಇದ್ದೀರಾ.?'' ಎಂದು ಅಕುಲ್ ಬಾಲಾಜಿ ಕೇಳಿದಾಗ, ''ಇಲ್ಲ'' ಎಂದರು ನಟಿ ಮೇಘನಾ ಗಾಂವ್ಕರ್.

ಲವ್ ನಲ್ಲಿ ಇರಬಹುದು.?

''ಲವ್ ನಲ್ಲಿದ್ದೀರಾ.?'' ಎಂದು ಅಕುಲ್ ಬಾಲಾಜಿ ಕೇಳಿದಾಗ, ''ಇರಬಹುದು, ಇಲ್ಲದೇ ಇರಬಹುದು. ನನಗಿನ್ನೂ ಗೊತ್ತಿಲ್ಲ'' ಎಂದರು ಮೇಘನಾ ಗಾಂವ್ಕರ್. ಅದಕ್ಕೆ, ''ಈ ಶೋ ಆಸ್ಟ್ರೇಲಿಯಾದಲ್ಲೂ ಬರುತ್ತೆ'' ಅಂತ ಅಕುಲ್ ಬಾಲಾಜಿ ಹೇಳುತ್ತಿದ್ದಂತೆಯೇ, ಪಕ್ಕದಲ್ಲಿ ಕುಳಿತಿದ್ದ ನಟ ಅನೀಶ್ ಕಿಸಕ್ ಎಂದು ನಕ್ಕುಬಿಟ್ಟರು.

ಮೇಘನಾ ಕೆನ್ನೆ ಕೆಂಪಾಯ್ತು

'ಆಸ್ಟ್ರೇಲಿಯಾ' ಟಾಪಿಕ್ ಬರುತ್ತಿದ್ದಂತೆಯೇ, ನಟಿ ಮೇಘನಾ ಕೆನ್ನೆ ಕೆಂಪಾಯ್ತು.

''ದೇಶದ ಹೆಸರು ಯಾಕೆ ತಗೊಂಡ್ರಿ? ಭಾರತ, ಕರ್ನಾಟಕದ ಬಗ್ಗೆ ಮಾತನಾಡಿ'' ಎಂದು ಅಕುಲ್ ಗೆ ಮೇಘನಾ ಹೇಳಿದರು. ಅದಕ್ಕೆ, ''ಭಾರತದಿಂದ ಆಸ್ಟ್ರೇಲಿಯಾಗೆ ಹೋದರು'' ಎಂದರು ಅಕುಲ್ ಬಾಲಾಜಿ. ಕೊನೆಗೆ ''ಆಸ್ಟ್ರೇಲಿಯಾ ಚೆನ್ನಾಗಿರಿ'' ಎಂದು ಅಕುಲ್ ಬಾಲಾಜಿ ಹೇಳಿದಾಗ ಮೇಘನಾ ಗಾಂವ್ಕರ್ ನಾಚಿ ನೀರಾದರು.

ಅಕುಲ್ ಮಾತಿನ ಮರ್ಮ ಏನು.?

ಆಸ್ಟ್ರೇಲಿಯಾ ಬಗ್ಗೆ ಅಕುಲ್ ಬಾಲಾಜಿ ಮಾತನಾಡಿದ್ದು, ಅದಕ್ಕೆ ಮೇಘನಾ ಗಾಂವ್ಕರ್ ನಾಚಿಕೊಂಡಿದ್ದನ್ನ ನೋಡಿದವರು ಆಸ್ಟ್ರೇಲಿಯಾ ಹಾಗೂ ಮೇಘನಾ ನಡುವೆ ಸಂಥಿಂಗ್ ಸಂಥಿಂಗ್ ಇದೆ ಅಂತ ಮಾತನಾಡಿಕೊಳ್ತಿದ್ದಾರೆ. ಅಷ್ಟಕ್ಕೂ, ತಮ್ಮ ಲವ್ ಸ್ಟೋರಿ ಬಗ್ಗೆ ಮೇಘನಾ ಗಾಂವ್ಕರ್ ಮಾತನಾಡಿಲ್ಲ. ಅವರು ಬಾಯ್ಬಿಟ್ರೆ, ಊಹಾಪೋಹಕ್ಕೆ ಫುಲ್ ಸ್ಟಾಪ್ ಬೀಳಬಹುದು.

English summary
Kannada Actress Meghana Gaonkar tried to maintain secrecy about her relationship status, but started blushing when Akul mentioned the word Australia in 'Super Talk Time'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada