»   » 'ಬಿಗ್ ಬಾಸ್' ರನ್ನ ಪ್ರಶ್ನೆ ಮಾಡಿದ ಕನ್ನಡದ ಖ್ಯಾತ ನಟಿ

'ಬಿಗ್ ಬಾಸ್' ರನ್ನ ಪ್ರಶ್ನೆ ಮಾಡಿದ ಕನ್ನಡದ ಖ್ಯಾತ ನಟಿ

Posted By:
Subscribe to Filmibeat Kannada
Bigg Boss Kannada Season 5 : ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಮಾಡಿದ ಕನ್ನಡದ ಖ್ಯಾತ ನಟಿ

ಕನ್ನಡದ 'ರಿಯಾಲಿಟಿ ಶೋ'ಗಳಲ್ಲಿ ಸಖತ್ ಪಾಪ್ಯೂಲರ್ ಆಗಿರುವ ಶೋ ಅಂದ್ರೆ ಅದು 'ಬಿಗ್ ಬಾಸ್'. ಕಿಚ್ಚನ ನಿರೂಪಣೆ, ವಿಭಿನ್ನ ಎನಿಸುವ ಟಾಸ್ಕ್, ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಬಿಗ್ ಬಾಸ್' ಶೋ ಬಗ್ಗೆ ಕನ್ನಡದ 'ಖ್ಯಾತ ನಟಿ'ಯೊಬ್ಬರು ಪ್ರಶ್ನೆ ಮಾಡಿದ್ದಾರೆ.

ಲಕ್ಷಾಂತರ ಜನ ನೋಡುವ ಈ ಶೋ ಬಗ್ಗೆ ಇಲ್ಲಿಯ ತನಕ ಯಾರನ್ನೂ ಕಾಡದ ಪ್ರಶ್ನೆ ಈ ನಟಿಗೆ ಬಂದಿದೆ. ಹಾಗಾದ್ರೆ ಆ ಪ್ರಶ್ನೆ ಏನು? ಐದು ಸೀಸನ್ ಆದ ನಂತರ ಈ ಪ್ರಶ್ನೆ ಕೇಳಿರುವ ಆ ನಟಿ ಯಾರು.? ಮುಂದೆ ಓದಿ...

'ಮೇಘನಾ ಗಾಂವ್ಕರ್' ಕೇಳಿದ ಪ್ರಶ್ನೆ ಏನು.?

'ನಮ್ ಏರಿಯಾದಲ್ಲಿ ಒಂದ್ ದಿನ', 'ಚಾರ್ ಮಿನಾರ್', 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'.... ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ 'ಮೇಘನಾ ಗಾಂವ್ಕರ್' 'ಬಿಗ್ ಬಾಸ್' ಗೆ ಪ್ರಶ್ನೆ ಕೇಳಿದ್ದಾರೆ. ''ಬಿಗ್ ಬಾಸ್ ಧ್ವನಿ ಯಾಕೆ ಪುರುಷರದ್ದೇ ಆಗಬೇಕು? ಮಹಿಳೆಯ ಧ್ವನಿ ಕೂಡ ಆಗಬಹುದಲ್ಲವೇ.?'' ಅಂತ ಮೇಘನಾ ಕೇಳ್ತಿದ್ದಾರೆ.

ಸುಮ್ಮನೆ ಕೇಳಿದೆ ಅಂತಿರೋ ಮೇಘನಾ

ಟ್ವಿಟ್ಟರ್ ಮೂಲಕ ಇಂಥದೊಂದು ಅಭಿಪ್ರಾಯವನ್ನ ಮೇಘನಾ ವ್ಯಕ್ತ ಪಡಿಸಿದ್ದಾರೆ. ಇದನ್ನ ನೋಡಿರುವ ಅಭಿಮಾನಿಗಳು ತಮ್ಮದೇ ಸ್ಟೈಲ್ ನಲ್ಲಿ ಉತ್ತರಿಸೋದಕ್ಕೆ ಶುರು ಮಾಡಿದ್ದಾರೆ.

ಟ್ವಿಟ್ಟರ್ ಮೂಲಕ ಮೇಘನಾ ಧ್ವನಿಗೆ ಮೆಚ್ಚುಗೆ

ಈ ರೀತಿ ಟ್ವೀಟ್ ಮಾಡಿದ ತಕ್ಷಣ ಅನೇಕರು ಮೇಘನಾರಿಗೆ ನೀವೇ ಧ್ವನಿ ಕೊಡಿ ಅಂತ ಸಲಹೆ ನೀಡಿದ್ದಾರೆ. ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ, ಆದ್ದರಿಂದ ನೀವು ಪ್ರಯತ್ನ ಮಾಡಿ ಎಂದಿದ್ದಾರೆ.

ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ

ಇತ್ತೀಚೆಗಷ್ಟೇ 'ವ್ಯಾನಿಟಿ ಟ್ರಂಕ್' ಸೇಲ್ ನಲ್ಲಿ ಭಾಗಿಯಾಗಿದ್ದ ಮೇಘನಾ ಒಳ್ಳೆ ಕತೆಗಾಗಿ ಕಾದಿದ್ದಾರೆ. ಚಿತ್ರರಂಗಕ್ಕೆ ಬಂದಾಗಿನಿಂದಲೂ ಒಳ್ಳೆ ಪಾತ್ರಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುವ ನಟಿ ಮೇಘನಾ ಇನ್ನೂ ಕೆಲವೇ ದಿನಗಳಲ್ಲಿ ಅಭಿಮಾನಿಗಳ ಮುಂದೆ ವಿಭಿನ್ನ ಪಾತ್ರದ ಮೂಲಕ ಬರಲಿದ್ದಾರೆ.

English summary
Kannada Actress Meghana questions Bigg Boss

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada