»   » ರಾಜಕೀಯಕ್ಕೆ ಬಂದು 'ತಪ್ಪು' ಮಾಡಿದೆ ಎಂದ ನಟಿ ಪೂಜಾ ಗಾಂಧಿ.!

ರಾಜಕೀಯಕ್ಕೆ ಬಂದು 'ತಪ್ಪು' ಮಾಡಿದೆ ಎಂದ ನಟಿ ಪೂಜಾ ಗಾಂಧಿ.!

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

'ಮುಂಗಾರು ಮಳೆ' ಸಿನಿಮಾ ಆದ್ಮೇಲೆ ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಂಡು, ಆಗಾಗ ಸೋಲು ಅನುಭವಿಸಿದ ನಟಿ ಪೂಜಾ ಗಾಂಧಿ ದಿಢೀರ್ ಅಂತ ರಾಜಕೀಯ ರಂಗಕ್ಕೂ ಧುಮುಕಿ, ಪಕ್ಷದಿಂದ ಪಕ್ಷಕ್ಕೆ ಹಾರಿ, ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡರು.

ಅದಾದ್ಮೇಲೆ, ಚಿತ್ರರಂಗಕ್ಕೆ ಮರಳಿದ ನಟಿ ಪೂಜಾ ಗಾಂಧಿ ರಾಜಕೀಯದ ಕಡೆ ಮುಖ ಮಾಡಲಿಲ್ಲ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದಾಗ, ''ರಾಜಕೀಯಕ್ಕೆ ಬಂದು ನಾನು ಮಿಸ್ಟೇಕ್ ಮಾಡಿದೆ'' ಎಂದು ನಟಿ ಪೂಜಾ ಗಾಂಧಿ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಒಪ್ಪಿಕೊಂಡಿದ್ದಾರೆ. ಮುಂದೆ ಓದಿರಿ....

ರಾಜಕೀಯದಿಂದ ದೂರ ಉಳಿಯಲು ಕಾರಣ.?

''ಬೇಕು ಅಂತಲೇ ರಾಜಕೀಯದಿಂದ ದೂರ ಉಳಿದಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ರಾಜಕೀಯ ಅಧ್ಯಾಯ ಸ್ವಲ್ಪ ಬೇಗ ಬಂತು. ''ನಾನು ರಾಜಕೀಯಕ್ಕೆ ಬಹಳ ಬೇಗ ಬಂದು ತಪ್ಪು (ಮಿಸ್ಟೇಕ್) ಮಾಡಿದೆ'' ಎಂದು ಒಪ್ಪಿಕೊಳ್ಳುತ್ತೇನೆ'' ಅಂತ ನಟಿ ಪೂಜಾ ಗಾಂಧಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದರು.

ನನ್ನ ನಿರ್ಧಾರ ತಪ್ಪು.!

''ನಾನು ಮುಂಚೆ ಸೋಷಿಯಲ್ ಸರ್ವೀಸ್ ಮಾಡುತ್ತಿದ್ದೆ. ಹೀಗಾಗಿ ರಾಜಕೀಯಕ್ಕೆ ಬಂದರೆ ಇನ್ನೂ ದೊಡ್ಡ ಪ್ಲಾಟ್ ಫಾರ್ಮ್ ಸಿಗಬಹುದು ಎಂದು ಭಾವಿಸಿದ್ದೆ. ಆದ್ರೆ, ನಾನು ತೆಗೆದುಕೊಂಡಿದ್ದು ತಪ್ಪು ನಿರ್ಧಾರ'' - ಪೂಜಾ ಗಾಂಧಿ

ದೊಡ್ಡ ಪಾಠ ಕಲಿತಿದ್ದೇನೆ

''ನನ್ನ ಜೀವನದಲ್ಲಿ ಇದರಿಂದ ದೊಡ್ಡ ಪಾಠ ಕಲಿತಿದ್ದೇನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನನ್ನ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಪಕಿ ಆಗಿ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡುವಲ್ಲಿ ತೊಡಗಿಸಿಕೊಂಡಿದ್ದೇನೆ'' - ಪೂಜಾ ಗಾಂಧಿ

ನಾಳೆ ಏನಾಗುತ್ತೋ, ಗೊತ್ತಿಲ್ಲ

''ಮತ್ತೆ ರಾಜಕೀಯಕ್ಕೆ ಬರುತ್ತೇನೋ, ಇಲ್ವೋ ಗೊತ್ತಿಲ್ಲ. ನಾಳೆ ಏನಾಗುತ್ತೆ ಅಂತ ಯಾರಿಗೆ ಗೊತ್ತು'' ಎಂದಷ್ಟೇ ನಟಿ ಪೂಜಾ ಗಾಂಧಿ ಹೇಳಿದರು.

English summary
Kannada Actress Pooja Gandhi speaks about her Political Life in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada