»   » 'ಫೇಕ್ ಶೋ' ಬಿಗ್ ಬಾಸ್ ಗೆ ಛೀಮಾರಿ ಹಾಕಿದ ವೀಕ್ಷಕರು!

'ಫೇಕ್ ಶೋ' ಬಿಗ್ ಬಾಸ್ ಗೆ ಛೀಮಾರಿ ಹಾಕಿದ ವೀಕ್ಷಕರು!

Posted By:
Subscribe to Filmibeat Kannada

ವೀಕ್ಷಕರ ಆಸೆ, ಇಚ್ಛೆ, ನಿರೀಕ್ಷೆಗೆ ಈ ಬಾರಿಯೂ ಕಲರ್ಸ್ ಕನ್ನಡ ವಾಹಿನಿ ಬಕೆಟ್ ಗಟ್ಟಲೆ ತಣ್ಣೀರು ಎರಚಿದೆ. ಯಾವುದು ಆಗಬಾರದು ಅಂತ ವೀಕ್ಷಕರು ಅಂದುಕೊಂಡಿದ್ದರೋ, ಅದು 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಆಗೇಬಿಟ್ಟಿದೆ. ವೀಕ್ಷಕರಿಂದ 'ಡವ್ ರಾಣಿ' ಅಂತ ಕರೆಯಿಸಿಕೊಳ್ಳುತ್ತಿದ್ದ ನಟಿ ಶ್ರುತಿ 'ಬಿಗ್ ಬಾಸ್-3' ವಿನ್ನರ್ ಆಗಿದ್ದಾರೆ.

98 ದಿನಗಳ ಕಾಲ ಎಲ್ಲರನ್ನ ನಕ್ಕು-ನಲಿಸಿ ಮನರಂಜನೆ ನೀಡಿದ ಮಾಸ್ಟರ್ ಆನಂದ್ 'ದಿ ಮೋಸ್ಟ್ ಡಿಸರ್ವಿಂಗ್ ವಿನ್ನರ್' ಅಂತ ಅನೇಕ ವೀಕ್ಷಕರು ಅಭಿಪ್ರಾಯ ಪಟ್ಟಿದ್ದರು. ಈ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ವರದಿ ಮಾಡಿತ್ತು. ಆದ್ರೆ, ಬಂದ ರಿಸಲ್ಟ್ ಮಾತ್ರ ಉಲ್ಟಾ ಪಲ್ಟಾ. [ಕನ್ನಡ 'ಬಿಗ್ ಬಾಸ್' ಸೀಸನ್ 3 ಗೆಲುವಿನ ಪಟ್ಟ ಯಾರಿಗೆ?]

'ಬಿಗ್ ಬಾಸ್' ನೋಡುವವರೆಲ್ಲರೂ ವೋಟ್ ಮಾಡುವುದಿಲ್ಲ ನಿಜ. ಆದರೆ, ''ವೋಟ್ ಮಾಡಿದವರ ಪೈಕಿ, ವೀಕ್ಷಕರು ಹೆಚ್ಚು ಇಷ್ಟಪಟ್ಟ ಸ್ಪರ್ಧಿ ಗೆದ್ದಿದ್ದಾರೆ'' ಅಂತ ಹೇಳ್ತಾ, ''ನಟಿ ಶ್ರುತಿ ಈ ಸೀಸನ್ ನ ವಿಜೇತರು'' ಅಂತ ಕಿಚ್ಚ ಸುದೀಪ್ ಹೇಳಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ವಿರುದ್ಧ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲೇ ವೀಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಮುಂದೆ ಓದಿ.....

ಇನ್ಮೇಲೆ ಕಲರ್ಸ್ ಕನ್ನಡ ನೋಡಲ್ಲ!

''ನಿಜವಾದ 'ಬಿಗ್ ಬಾಸ್' ವಿನ್ನರ್ ಅಂದ್ರೆ ರೆಹಮಾನ್ ಅಥವಾ ಆನಂದ್. ಅವರನ್ನ ಬಿಟ್ಟು 'ಡವ್ ರಾಣಿ' ಶ್ರುತಿಗೆ ವಿನ್ನರ್ ಪಟ್ಟ ಕೊಟ್ಟಿರುವುದರಿಂದ ಇನ್ಮೇಲೆ ಕಲರ್ಸ್ ಕನ್ನಡ ನೋಡೋದೇ ಇಲ್ಲ'' ಅಂತ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, ಈ ಕಾಮೆಂಟ್ ಗೆ ಸಿಕ್ಕಿರುವ ಲೈಕ್ಸ್ ಎಷ್ಟು ಅಂತ ಒಮ್ಮೆ ನೋಡಿ.... [ಅಳುಮುಂಜಿ ಸ್ಟಾರ್ ಶ್ರುತಿಗ್ಯಾಕೆ ಕಿರೀಟ, ನನ್ ಮಗಂದ್!]

ವೀಕ್ಷಕರು ಗುಗ್ಗುಗಳಲ್ಲ!

''ಬಿಗ್ ಬಾಸ್' ಫೇಕ್ ಶೋ. ವೀಕ್ಷಕರು ಗುಗ್ಗುಗಳಲ್ಲ. ನಿಮಗೂ ನಿಮ್ಮ ಶೋಗೂ ದೊಡ್ಡ ನಮಸ್ಕಾರ'' ಅಂತಿದ್ದಾರೆ ವೀಕ್ಷಕರು. ['ಬಿಗ್ ಬಾಸ್' ಮನೆಗೆ ನಟ ರವಿಚಂದ್ರನ್ ಬಂದಿದ್ಯಾಕೆ ಗೊತ್ತಾ?]

ಚಂದನ್ ನಲ್ಲಿ ಉತ್ತಮ ನಡವಳಿಕೆ ಇತ್ತಾ?

''ಪೂಜಾ ಗಾಂಧಿ, ಅಯ್ಯಪ್ಪ, ಗೌತಮಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಚಂದನ್ ನಡವಳಿಕೆ ಉತ್ತಮವಾಗಿತ್ತಾ'' ಅಂತ ವೀಕ್ಷಕರು 'ಬಿಗ್ ಬಾಸ್'ಗೆ ಪ್ರಶ್ನೆ ಮಾಡುತ್ತಿದ್ದಾರೆ. [ನಟಿ ಶ್ರುತಿ ಮುಡಿಗೆ 'ಬಿಗ್ ಬಾಸ್' ಗೆಲುವಿನ ಕಿರೀಟ]

ತಾಕತ್ ಇದ್ರೆ?

'ತಾಕತ್ ಇದ್ರೆ ಯಾರಿಗೆ ಎಷ್ಟು ವೋಟ್ ಬಂದಿದೆ ಅಂತ ಕಲರ್ಸ್ ಕನ್ನಡ ವಾಹಿನಿ ಹೇಳಲಿ' ಅಂತ ವೀಕ್ಷಕರು ಆಗ್ರಹಿಸುತ್ತಿದ್ದಾರೆ. ['ಬಿಗ್ ಬಾಸ್' ಗೆದ್ದ ಶ್ರುತಿ; ನಮ್ಮ ಜನಕ್ಕೆ ಸಮಾಧಾನವೇ ಇಲ್ಲ ಬಿಡಿ!]

'ಬಿಗ್ ಬಾಸ್'ಗೆ ಕಣ್ಣು ಕಾಣಲ್ವಾ?

'ಮನೆ ತುಂಬಾ ಕ್ಯಾಮರಾ ಇಟ್ಟಿದ್ದರೂ, ಯಾರು ಹೇಗೆ ಅನ್ನೋದು 'ಬಿಗ್ ಬಾಸ್'ಗೆ ಕಾಣಲೇ ಇಲ್ವಾ?? ಉತ್ತರ ಕೊಡಿ 'ಬಿಗ್ ಬಾಸ್'.

ಸುದೀಪ್ ಮೇಲೆ ಇರುವ ಗೌರವ ಹೋಗುತ್ತೆ!

ಇಂತಹ ಫೇಕ್ ಶೋನ ಮುಂದಿನ ಬಾರಿ ಸುದೀಪ್ ಅವರು ಹೋಸ್ಟ್ ಮಾಡಿದ್ರೆ, ಅವರ ಮೇಲೆ ಇರುವ ಗೌರವ ಕಡಿಮೆ ಆಗುತ್ತೆ ಅನ್ನೋದು ವೀಕ್ಷಕರ ಅಭಿಪ್ರಾಯ.

ಎಲ್ಲಾ ಮೋಸ ಸ್ವಾಮಿ!

ಅಂದ್ಹಾಗೆ, ಮುಂದಿನ 'ಬಿಗ್ ಬಾಸ್' ಸೀಸನ್ ಗೆ ವೀಕ್ಷಕರೇ ಕೊಟ್ಟಿರುವ ಟ್ಯಾಗ್ ಲೈನ್ ಏನು ಗೊತ್ತಾ? ''ಎಲ್ಲಾ ಮೋಸ ಸ್ವಾಮಿ''.

ಆನಂದ್ ರಿಯಲ್ ವಿನ್ನರ್

'ರಿಯಲ್ ವಿನ್ನರ್' ಆನಂದ್ ಆಗಿದ್ದರೂ, ಅವರನ್ನ ಟಾಪ್ 2 ಗೆ ಬರೋಕೆ ಬಿಡಲಿಲ್ಲ ಅಂತ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ.

ವೀಕ್ಷಕರಿಗೆ ಮತ್ತೆ ಮೋಸ!

''ದುರಾದೃಷ್ಟವಶಾತ್ 'ಬಿಗ್ ಬಾಸ್' ಕಾರ್ಯಕ್ರಮದಿಂದ ವೀಕ್ಷಕರಿಗೆ ಮತ್ತೆ ಮೋಸ ಆಗಿದೆ!''

ಸುದೀಪ್ ಮೇಲೂ ಆಪಾದನೆ!

''ಸುದೀಪ್ ಇರುವರೆಗೂ 'ರಿಯಲ್ ವಿನ್ನರ್ಸ್' ಗೆಲ್ಲುವುದೇ ಇಲ್ಲ'' ಅಂತ ಕೆಲ ವೀಕ್ಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ.

ಗೆದ್ದಿರುವವರು ಮೊದಲು ಈ ಕಾಮೆಂಟ್ಸ್ ನೋಡಲಿ!

''ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿದಿರುವವರು ಮೊದಲು ಈ ಕಾಮೆಂಟ್ಸ್ ನೋಡಿ ತಮ್ಮ ಅರ್ಹತೆ ತಿಳಿಯಲಿ''

ಪ್ರತಿ ಸೀಸನ್ ನಲ್ಲೂ ಮೋಸ!

''ಮೊದಲ ಸೀಸನ್ ನಲ್ಲಿ ಅರುಣ್ ಸಾಗರ್ ಗೆ ಮೋಸ ಆಗಿತ್ತು. ಎರಡನೇ ಸೀಸನ್ ನಲ್ಲಿ ಸೃಜನ್ ಲೋಕೇಶ್ ಗೆ ಮೋಸ ಆಗಿತ್ತು. ಮೂರನೇ ಸೀಸನ್ ನಲ್ಲೂ ಆನಂದ್ ಗೆ ಮೋಸ ಆಗಿದೆ. 'ಬಿಗ್ ಬಾಸ್' ಗೇಮ್ ಫಿಕ್ಸ್ ಆಗಿದೆ'' ಅಂತ ವೀಕ್ಷಕರು ಛೀಮಾರಿ ಹಾಕುತ್ತಿದ್ದಾರೆ.

ವೀಕ್ಷಕರ ಮನಸ್ಸಲ್ಲಿ ಇರುವುದು ಆನಂದ್!

ಬಹುತೇಕ ವೀಕ್ಷಕರ ಮನಗೆದ್ದಿರುವುದು ಆನಂದ್ ಅನ್ನುವುದಕ್ಕೆ ಈ ಕಾಮೆಂಟ್ ಗಳೇ ಉತ್ತಮ ನಿದರ್ಶನ.

'ಬಿಗ್ ಬಾಸ್' ಶೋ ನಿಲ್ಲಿಸಿ!

''ಇನ್ಮುಂದೆ 'ಬಿಗ್ ಬಾಸ್ ಶೋ ನೋಡೋದಿಲ್ಲ, ನಿಲ್ಲಿಸಿ'' ಅಂತಿದ್ದಾರೆ ವೀಕ್ಷಕರು.

ವೀಕ್ಷಕರು ಮಾಡಿರುವ ಪ್ರಾಮಿಸ್ ಏನು?

'ಇನ್ಮೇಲೆ 'ಬಿಗ್ ಬಾಸ್' ನೋಡಲ್ಲ. ಸುದೀಪ್ ಚಿತ್ರಗಳನ್ನ ನೋಡಲ್ಲ. ಕಲರ್ಸ್ ಕನ್ನಡ ವಾಹಿನಿ ನೋಡಲ್ಲ' ಅಂತ ವೀಕ್ಷಕರು ಆಣೆ ಮಾಡಿದ್ದಾರೆ ನೋಡಿ.

'ಬಿಗ್ ಬಾಸ್' ಫೇಕ್ ಶೋ

'ಬಿಗ್ ಬಾಸ್' ಒಂದು ಫೇಕ್ ಶೋ ಅಂತ ಜನರು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ.

ನಾಟಕ ಆಡೋರಿಗೆ ಪ್ರಶಸ್ತಿ!

ನಾಟಕಕ್ಕೆ ಜಾಗ ಇಲ್ಲ ಅಂತ್ಹೇಳಿ ನಾಟಕ ಆಡೋರಿಗೆ ಪ್ರಶಸ್ತಿ ನೀಡಿದ್ದಾರಂತೆ!

ಫಲಿತಾಂಶದ ವಿರುದ್ಧ ವೀಕ್ಷಕರು!

'ಬಿಗ್ ಬಾಸ್' ನೀಡಿರುವ ಫಲಿತಾಂಶದ ವಿರುದ್ಧ ಜನ ಇದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.

ಒಳ್ಳೆತನಕ್ಕೆ ಜಾಗ ಇಲ್ಲ!

'ಒಳ್ಳೆ ತನಕ್ಕೆ ಜಾಗ ಇಲ್ಲ' ಅನ್ನೋದು ಮತ್ತೆ ಪ್ರೂವ್ ಆಗಿದೆ.

ನಿಮ್ಮ ಅಭಿಪ್ರಾಯ ಏನು?

ನಟಿ ಶ್ರುತಿ 'ಬಿಗ್ ಬಾಸ್' ವಿಜೇತರಾಗಿರುವುದು ನಿಮಗೆ ಖುಷಿ ಕೊಟ್ಟಿದ್ಯಾ? ಮಾಸ್ಟರ್ ಆನಂದ್ ಮತ್ತು ರೆಹಮಾನ್ ಗೆ ಟ್ರೋಫಿ ಮಿಸ್ ಆಗಿರುವುದು ನಿಮಗೆ ಬೇಸರ ಕೊಟ್ಟಿದ್ಯಾ? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.....

English summary
Bigg Boss Kannada 3 Viewers are extremely unhappy over the decision of Kannada Actress Shruthi Winning 'Bigg Boss Trophy'. Check out the viewers reaction here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada