»   » 'ದುನಿಯಾ ವಿಜಯ್'ನ 'ಸಾಯಿಸ್ತೀನಿ' ಎನ್ನದ ನಟಿ ಶುಭಾ ಪೂಂಜಾ.!

'ದುನಿಯಾ ವಿಜಯ್'ನ 'ಸಾಯಿಸ್ತೀನಿ' ಎನ್ನದ ನಟಿ ಶುಭಾ ಪೂಂಜಾ.!

Posted By:
Subscribe to Filmibeat Kannada

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಶುಭಾ ಪೂಂಜಾ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೊಡಲು ತಡಕಾಡಿದರು.

ಅದರಲ್ಲೂ 'ದುನಿಯಾ ವಿಜಯ್' ಮ್ಯಾಟರ್ ಬಂದಾಗ್ಲಂತೂ ಶುಭ ಪೂಂಜಾ ಕಸಿವಿಸಿಗೊಂಡರು. ಅಕುಲ್ ಬಾಲಾಜಿ ಎಸೆದ ಪ್ರಶ್ನೆಗಳ ಬೆಂಕಿ ಉಂಡೆಗಳನ್ನ ಹಿಡಿಯಲೂ ಆಗದೆ, ತಪ್ಪಿಸಿಕೊಳ್ಳಲು ಆಗದೆ ಶುಭಾ ಪೂಂಜಾ ಒದ್ದಾಡಿದರು. ಅದಕ್ಕೆ ಸಾಕ್ಷಿ ಈ ಪ್ರಶ್ನೋತ್ತರ.....

'ದಿಢೀರ್ ಬೆಂಕಿ' ಸುತ್ತು

ಮಾತುಕತೆ, ಆಟವೆಲ್ಲ ಮುಗಿದ ಬಳಿಕ 'ದಿಢೀರ್ ಬೆಂಕಿ (Rapid Fire)' ರೌಂಡ್ ಗೆ ನಿರೂಪಕ ಅಕುಲ್ ಬಾಲಾಜಿ ಚಾಲನೆ ನೀಡಿದರು. ಮೂವರು ನಟರ ಹೆಸರುಗಳನ್ನು ಕೇಳಿ ಮೂರು ಪ್ರಶ್ನೆಗಳನ್ನ ಶುಭಾ ಪೂಂಜಾ ಮುಂದಿಟ್ಟರು ಅಕುಲ್ ಬಾಲಾಜಿ.

ಅಕುಲ್ ಕೇಳಿದ ಪ್ರಶ್ನೆ ಏನು.?

''ಇವರಲ್ಲಿ ಯಾರನ್ನ ಸಾಯಿಸ್ತೀರಾ.? ಯಾರ ಜೊತೆ ಫ್ರೆಂಡ್ ಶಿಪ್ ಮಾಡುತ್ತೀರಾ.? ಯಾರನ್ನ ಮದುವೆ ಆಗುತ್ತೀರಾ.?'' ಎಂದು ಮೂರು ಆಯ್ಕೆಗಳನ್ನ ಅಕುಲ್ ಬಾಲಾಜಿ ನೀಡಿದರು.

ಆಯ್ಕೆಗಳು - ಶರಣ್, ದುನಿಯಾ ವಿಜಯ್ ಮತ್ತು ಹುಚ್ಚ ವೆಂಕಟ್

ಕಿಸಕ್ ಎಂದು ನಕ್ಕ ಪೂಜಾ ಗಾಂಧಿ

ಆಯ್ಕೆಗಳನ್ನು ಕೇಳಿದ ಕೂಡಲೆ ಶುಭಾ ಪೂಂಜಾ ಪಕ್ಕದಲ್ಲಿ ಕುಳಿತಿದ್ದ ಪೂಜಾ ಗಾಂಧಿ ಕಿಸಕ್ ಎಂದು ನಕ್ಕರು.

ಹಠ ಹಿಡಿದ ಶುಭಾ

''ನಾನು ಯಾರನ್ನೂ ಸಾಯಿಸಲ್ಲ. ನಾನು ಸಾಯಿಸುವಂತಹ ಕ್ಯಾರೆಕ್ಟರೇ ಅಲ್ಲ'' ಎಂದು ನಟಿ ಶುಭಾ ಪೂಂಜಾ ಹಠ ಹಿಡಿದರು. ಆಗ ಅಕುಲ್, ''ಈ ತರಹ ಸನ್ನಿವೇಶ ಬಂದಾಗ ಏನು ಮಾಡುತ್ತೀರಾ.? ಯಾರನ್ನ ಸಾಯಿಸಲು ಇಷ್ಟ ಪಡುತ್ತೀರಾ.?'' ಎಂದು ಕೇಳಿದರು.

ಎಡಿಟ್ ಮಾಡಿ ಪ್ಲೀಸ್....

''ಸಾಯಿಸುವುದು' ಒಂದನ್ನ ಎಡಿಟ್ ಮಾಡಿ. ನಾನು ಯಾರನ್ನೂ ಸಾಯಿಸಲ್ಲ'' ಎಂದು ಶುಭಾ ಪೂಂಜಾ ಕೇಳಿಕೊಂಡರು. ''ಸರಿ, ಯಾರನ್ನ ಬಿಟ್ಟುಬಿಡ್ತೀರಾ'' ಎಂದು ಅಕುಲ್ ಕೇಳಿದಕ್ಕೆ....

ಯಾರನ್ನ ಮದುವೆ ಆಗುತ್ತಾರೆ.?

''ನಾನು ಶರಣ್ ನ ಮದುವೆ ಆಗುತ್ತೇನೆ. ಹುಚ್ಚ ವೆಂಕಟ್ ಜೊತೆ ಫ್ರೆಂಡ್ ಶಿಪ್ ಮಾಡಿಕೊಳ್ಳುತ್ತೇನೆ'' ಎಂದು ಶುಭಾ ಪೂಂಜಾ ನುಡಿದರು.

'ಸಿಕ್ತಲ್ವಾ ಉತ್ತರ.!'

ಎರಡು ಆಯ್ಕೆಗಳಿಗೆ ಮಾತ್ರ ಶುಭಾ ಪೂಂಜಾ ಉತ್ತರ ಕೊಟ್ಟಾಗ, ''ಸಿಕ್ತಲ್ವಾ ಉತ್ತರ.!'' ಎಂದು ಪೂಜಾ ಗಾಂಧಿ ಹಲ್ಲು ಬಿಟ್ಟರು.

'ದುನಿಯಾ ವಿಜಯ್'ನ ಸಾಯಿಸ್ತೀನಿ ಎನ್ನದ ಶುಭಾ ಪೂಂಜಾ!

''ದುನಿಯಾ ವಿಜಯ್'ನ ಸಾಯಿಸ್ತೀನಿ'' ಎಂದು ಶುಭಾ ಪೂಂಜಾ ಹೇಳಲಿಲ್ಲ. ಆದ್ರೆ, 'ದುನಿಯಾ ವಿಜಯ್' ಮತ್ತು 'ಸಾಯಿಸ್ತೀನಿ' ಆಯ್ಕೆಗಳನ್ನ ಶುಭಾ ಪೂಂಜಾ ಬಿಟ್ಟುಬಿಟ್ಟರು.

English summary
Kannada Actress Shubha Poonja refused to take Duniya Vijay's name during Rapid Fire round in Colors Super channel's popular show 'Super Talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada