»   » ಬಿಗ್ ಬಾಸ್ ನಲ್ಲಿ ತಿಲಕ್, ಶ್ವೇತಾ ಪಂಡಿತ್ ಐಸ್ ಪೈಸ್

ಬಿಗ್ ಬಾಸ್ ನಲ್ಲಿ ತಿಲಕ್, ಶ್ವೇತಾ ಪಂಡಿತ್ ಐಸ್ ಪೈಸ್

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ರಿಯಾಲಿಟಿಗಳು ಒಂದೊಂದೇ ಬಯಲಾಗುತ್ತಿವೆ. ಮೊದಲು ಎಲ್ಲರೂ ನಟಿಸುತ್ತಿದ್ದಾರೆ ಎಂಬ ಭಾವನೆ ಬರುತ್ತಿತ್ತು. ಬರುಬರುತ್ತಾ ನೈಜ ಚಿತ್ರಣ ಸಿಗುತ್ತಿದೆ. ಹತ್ತನೆ ದಿನದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ.

ಹತ್ತನೇ ದಿನ ಬಿಗ್ ಬಾಸ್ ಸ್ಪರ್ಧಿಗಳಿಗೆ ರೊಮ್ಯಾಂಟಿ ಟಾಸ್ಕ್ ಕೊಟ್ಟಿದ್ದಾನೆ. ಅದೇನೆಂದರೆ ಮಹಿಳೆಯರು ನೆಲದ ಮೇಲೆ ಪಾದ ಇಡದಂತೆ ಪುರುಷರು ನೋಡಿಕೊಳ್ಳಬೇಕು. ಅಂದರೆ ಅವರು ಎಲ್ಲಿಗೆ ಹೋಗಬೇಕೆಂದರೂ ಅವರನ್ನು ಹೊತ್ತುಕೊಂಡು ಹೋಗಿ ಬಿಡಬೇಕು.

ಕೆಲವರಿಗೆ ಕೈಯಾರೆ ಎತ್ತಿಕೊಂಡು ಹೋಗುವ ಸುವರ್ಣಾವಕಾಶವೂ ಸಿಕ್ಕಿತು. ಕೆಲವರನ್ನು ಸ್ಟ್ರೆಚರ್ ನಲ್ಲಿ ಸಾಗಾಟ ಮಾಡಬೇಕಾಯಿತು. ತಿಲಕ್ ಹಾಗೂ ಶ್ವೇತಾ ಪಂಡಿತ್ ಅವರಿಗೆ ಬಿಗ್ ಬಾಸ್ ಕೊಟ್ಟಂತಹ ಈ ರೊಮ್ಯಾಂಟಿಕ್ ಟಾಸ್ಕ್ ಚೆನ್ನಾಗಿ ವರ್ಕ್ ಔಟ್ ಆಯಿತು.

ರೊಮ್ಯಾಂಟಿಕ್ ಟಾಸ್ಕ್ ಕೊಟ್ಟ ಬಿಗ್ ಬಾಸ್

ಒಂದು ವೇಳೆ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕೆಂದರೆ ಅವರನ್ನು ಬಾಗಿಲ ತನಕ ಹೊತ್ತುಕೊಂಡು ಹೋಗಿ ಬಿಡಬೇಕಾಗಿತ್ತು. ಸದ್ಯ ಬಾತ್ ರೂಮ್ ಒಳಗೂ ಹೋಗಿ ಎಂದು ಬಿಗ್ ಬಾಸ್ ಹೇಳಲಿಲ್ಲ. ಇಲ್ಲ ಅಂದ್ರೆ ಕಥೆ ಬೇರೆ ಆಗಿರುತ್ತಿತ್ತು.

ಸಂಜನಾಗೆ ಡಾಕ್ಟರ್, ಇಂಜಿನಿಯರ್ ಬೇಕಂತೆ

ಇದೇ ಸಂದರ್ಭದಲ್ಲಿ ಸಂಜನಾ ಅವರು ತಮ್ಮ ಮದುವೆ ಕನಸುಗಳನ್ನು ಬಿಚ್ಚಿಟ್ಟರು. ತಾನು ಇಂಡಸ್ಟ್ರಿಯಲ್ ಇರುವವರನ್ನು ಕೈಹಿಡಿಯಲ್ಲ. ತಾನು ಮದುವೆಯಾಗುವ ಹುಡುಗ ಇಂಜಿನಿಯರ್ ಅಥವಾ ಡಾಕ್ಟರ್ ಆಗಿರಬೇಕು ಎಂದರು.

ಇನ್ನೂ ಮೂರು ವರ್ಷ ಮದುವೆ ಇಲ್ಲವಂತೆ

ಇನ್ನು ತಿಲಕ್ ದಿನಕ್ಕೊಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾನೆ. ಅವನ ವಿಚಾರ ಬೇಡ ಎಂದರು. ಇನ್ನೂ ಮೂರು ವರ್ಷಮದುವೆಯಾಗಲ್ಲ. ಮದುವೆಯಾಗುವ ಹುಡುಗನ ಜೊತೆ ಆರು ತಿಂಗಳು ಡೇಟಿಂಗ್ ಮಾಡುತ್ತೇನೆ. ಅವನನ್ನು ಅರ್ಥ ಮಾಡಿಕೊಂಡ ಬಳಿಕವಷ್ಟೇ ತಾಳಿಕಟ್ಟಿಸಿಕೊಳ್ಳುವುದು ಎಂದರು ಸಂಜನಾ.

ತಿಲಕ್, ಶ್ವೇತಾ ಪಂಡಿತ್ ಐಸ್ ಪೈಸ್

ಸಂಜನಾ ಈ ರೀತಿ ಹೇಳಿದ್ದಕ್ಕೋ ಏನೋ ಶ್ವೇತಾ ಪಂಡಿತ್ ಗೆ ತಿಲಕ್ ಹತ್ತಿರವಾಗಿದ್ದ. ಶ್ವೇತಾ ಪದೇ ಪದೇ ಬಾತ್ ರೂಮಿಗೆ ಹೋಗಬೇಕು ಎನ್ನುವುದು. ಆಕೆಯನ್ನು ತಿಲಕ್ ಹೊತ್ತುಕೊಂಡು ಹೋಗುವುದು. ಇಬ್ಬರೂ ಒಬ್ಬರಿಗೊಬ್ಬರು ತೀರಾ ಹತ್ತಿರವಾಗಲು ಬಿಗ್ ಬಾಸ್ ಕೊಟ್ಟ ಟಾಸ್ಕ್ ಬಹಳ ಸಹಕಾರಿಯಾಯಿತು.

ಎಲ್ಲರ ಕಣ್ಣು ಕುಕ್ಕಿದ ಇಬ್ಬರ ಜೂಟಾಟ

ಒಂದು ಹಂತದಲ್ಲಿ ತಿಲಕ್ ಈ ರೀತಿಯ ರೊಮ್ಯಾಂಟಿಕ್ ಟಾಸ್ಕ್ ಕೊಟ್ಟಿದ್ದಕ್ಕೆ ಬಿಗ್ ಬಾಸ್ ಗೆ ಕೃತಜ್ಞತೆಗಳನ್ನು ತಿಳಿಸಿದ. ಇವರಿಬ್ಬರ ಜೂಟಾಟ ಉಳಿದ ಸ್ಪರ್ಧಿಗಳ ಕಣ್ಣು ಕುಕ್ಕುತು. ಶ್ವೇತಾಗೆ ಹುಷಾರಾಗಿರುವಂತೆ ಎಲ್ಲರೂ ಎಚ್ಚರಿಸಿದರು.

ಪ್ಯಾರ್ ಗೆ ಆಗ್ಬಿಟ್ಟೈತೆ ಹಾಡಿಗೆ ಅಪರ್ಣಾ ಮಸ್ತ್ ಡಾನ್ಸ್

ಹತ್ತನೇ ದಿನದ ಕೊನೆಯಲ್ಲಿ ಮಹಿಳಾ ಸ್ಪರ್ಧಿಗಳು ಕುಣಿದು ರಂಜಿಸಬೇಕಾಗಿತ್ತು. ಪ್ಯಾರ್ ಗೆ ಆಗ್ಬಿಟ್ಟೈತೆ ಹಾಡಿಗೆ ಹೆಜ್ಜೆ ಹಾಕಿದ ಅಪರ್ಣಾ ಹಾಗೂ ಸಂಜನಾ ಅದ್ಭುತ ಪ್ರದರ್ಶನ ನೀಡಿದರು. ಬಸಂತಿ ನಾಚ್ ನಾಚ್... ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು...ಹಾಡು ಸೇರಿದಂತೆ ಹಲವು ಹಾಡುಗಳಿಗೆ ಎಲ್ಲರೂ ಹೆಜ್ಜೆಹಾಕಿದರು.

ಬ್ರಹ್ಮಾಂಡ ಗುರೂಜಿ ಮೌನಕ್ಕೆ ಶರಣು

ಹತ್ತನೇ ದಿನ ಯಾಕೋ ಏನೋ ಬ್ರಹ್ಮಾಂಡ ಗುರೂಜಿ ಮೌನಕ್ಕೆ ಶರಣಾಗಿದ್ದರು. ಇವರೆಲ್ಲರೆ ಆಟವನ್ನೂ ನೋಡುತ್ತಾ ಒಳಗೊಳಗೆ ಮಜಾ ಮಾಡುತ್ತಿದ್ದರು. ಅಯ್ಯೋ ಪುಟಗೋಸಿ ಬಿಡ್ರಿ ಇದ್ಯಾವ ಆಟ ಎಂಬಂತಿತ್ತು ಅವರ ಮುಖಭಾವ.

English summary
Etv Kannada reality show Bigg Boss 10th day highlighst. This time Bigg Boss gives romantic task for participants. Tilak and Shweta Pandit became more close to each other in this task.
Please Wait while comments are loading...