'ಬಿಗ್ ಬಾಸ್ 2' ಫಸ್ಟ್ ಲುಕ್ ಔಟ್, ಸುದೀಪ್ ರಾಕ್ಸ್
ಕನ್ನಡದ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಎಂದು ಬಿಂಬಿಸಲಾಗಿದ್ದ 'ಬಿಗ್ ಬಾಸ್' ಆರಂಭವಾಗಲು ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಶೋ ಜೂ.22ರಿಂದ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿದೆ.
ಈ ಶೋಗೆ ಸಂಬಂಧಪಟ್ಟ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಅವರು ಮತ್ತೆ ತಮ್ಮ ಸ್ಟೈಲ್ ನಲ್ಲೇ ಗಮನಸೆಳೆದಿದ್ದಾರೆ. ಕಿರುತೆರೆ ವೀಕ್ಷಕರ ಅಭಿರುಚಿ ಹೇಗಿರುತ್ತದೆ, ಈ ಶೋಗಾಗಿ ಕಾಯುವ ವೀಕ್ಷಕ ಬಳಗ ಯಾವುದು? ಎಂಬ ಸಂಗತಿಗಳನ್ನಿಟ್ಟುಕೊಂಡು ಈ ಫಸ್ಟ್ ಲುಕ್ ತಯಾರಾಗಿರುವುದನ್ನು ಗಮನಿಸಬಹುದು.

"ಒಂಟಿ ಮನೇಲಿ ದೊಡ್ ದೊಡ್ಡ ಮಂದಿ ಅಡ್ಡಡ್ದ ಉದ್ದುದ್ದ ಮಲಗವ್ರೆ...ಮಲಗೋರು ಅವ್ರು ನೋಡೋರು ನೀವು...ಊರೆಲ್ಲಾ ಕ್ಯಾಮೆರಾ ಮಡಗವ್ರೆ ಹೊರಗಡೆಯಿಂದ ಅರಮನೆ, ಒಳಗಡೆ ಬಂದರೆ ಸೆರೆಮನೆ, ತೊಂಬತ್ತೆಂಟು ದಿನ ಜೀವಂತ ಇದ್ದರೆ..." ಎಂದು ಸಾಗುತ್ತಿದ್ದ ಹಾಡು ಜನಪ್ರಿಯವಾಗಿತ್ತು.
ಈ ಬಾರಿ ಸೀಸನ್ 2ಗೆ ಏನು ಹಾಡಿರುತ್ತದೋ ಇನ್ನೇನು ಪಂಚಿಂಗ್ ಡೈಲಾಗ್ ಇರುತ್ತದೋ ಎಂಬುದನ್ನು ಕಾದುನೋಡಬೇಕು. ಸೀಸನ್ ಒಂದರಲ್ಲಿ "ಹೌದು ಸ್ವಾಮಿ" ಎಂಬ ಪಂಚ್ ಎಲ್ಲರಿಗೂ ಸಖತ್ ಇಷ್ಟವಾಗಿತ್ತು. ಈ ಬಾರಿ ಏನಿರುತ್ತದೋ ಎಂಬ ಕುತೂಹಲ ಬೇರೆ ಇದೆ. (ಒನ್ಇಂಡಿಯಾ ಕನ್ನಡ)
<center><iframe width="100%" height="360" src="//www.youtube.com/embed/2Oxu-u13-x8?feature=player_embedded" frameborder="0" allowfullscreen></iframe></center>


Click it and Unblock the Notifications











