For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಯಿಂದ ನರ್ಸ್ ಜಯಲಕ್ಷ್ಮಿ ಔಟ್

  By Rajendra
  |

  ಕಿಚ್ಚ ಸುದೀಪ್ ಹೇಗೋ ಏನೋ ಎಂದುಕೊಂಡಿದ್ದರು. ಅಯ್ಯೋ ಸಲ್ಮಾನ್ ಖಾನ್ ಮುಂದೆ ಸುದೀಪ್ ಎಲ್ಲಿ. ಸಲ್ಲುಗಿರುವಷ್ಟು ಹಾಸ್ಯಪ್ರಜ್ಞೆ ಕಿಚ್ಚನಿಗೆಲ್ಲಿದೆ ಬಿಡ್ರಿ ಎಂದವರೂ ಉಂಟು. ಆದರೆ ಶುಕ್ರವಾರ (ಮಾ.29) ರಾತ್ರಿ 8ಕ್ಕೆ ಕಾರ್ಯಕ್ರಮ ನೋಡಿದವರು ಸುದೀಪ್ ಮಾತಿನ ಮೋಡಿಗೆ ಮರುಳಾಗಿದ್ದಾರೆ. ಅವರ ನಿರೂಪಣಾ ಶೈಲಿಗೆ ಮನಸೋತಿದ್ದಾರೆ.

  ಸಲ್ಮಾನ್ ಖಾನ್ ಗಿಂತಲೂ ಸುದೀಪ್ ಬೆಟರ್ ಎಂಬುದನ್ನು ಮೊದಲ ನೋಟದಲ್ಲೇ ಕಿಚ್ಚ ತೋರಿಸಿದ್ದಾರೆ. ಇದು ಸುದೀಪ್ ಅವರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಮಾತಲ್ಲ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವರು ನಿಜಕ್ಕೂ ಒಂದು ಗಂಟೆ ಕಾಲ ಈಟಿವಿ ಕನ್ನಡ ಬಳಗದ ವೀಕ್ಷಕರನ್ನು ಹಿಡಿದಿಟ್ಟರು.

  ಕ್ಷಣಕ್ಷಣಕ್ಕೂ ನಕ್ಕು ನಲಿಸುತ್ತಾ, ಸ್ಪರ್ಧಿಗಳನ್ನು ಕಿಚಾಯಿಸುತ್ತಾ, ಕಾಲೆಳೆಯುತ್ತಾ ಸುದೀಪ್ ನಿರೂಪಿಸಿದ ಕಾರ್ಯಕ್ರಮ ಮಜವಾಗಿತ್ತು. ನರ್ಸ್ ಜಯಲಕ್ಷ್ಮಿ ಐಸಿಯುಗೆ ಹೋಗ್ತಾರಾ ಅಥವಾ ಗುರೂಜಿ ನರೇಂದ್ರ ಬಾಬು ಶರ್ಮಾ ಅವರ ಭವಿಷ್ಯವೇ ಬದಲಾಗುತ್ತಾ ಸುದೀಪ್ ಹೇಳುತ್ತಾ ಕಾರ್ಯಕ್ರಮಕ್ಕೆ ಒಂದು ಖದರ್ ತಂದರು.

  ವಾರದ ಕಥೆ ಕಿಚ್ಚನ ಜೊತೆ

  ವಾರದ ಕಥೆ ಕಿಚ್ಚನ ಜೊತೆ

  "ವಾರದ ಕಥೆ ಕಿಚ್ಚನ ಜೊತೆ" ಎಂದು ಹೆಸರಿಟ್ಟಿದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಯಾರಿಗೆ ಶುಕ್ರದೆಸೆ ಯಾರಿಗೆ ವಕ್ರದೆಸೆ ಎಂದು ಹೇಳುತ್ತಲೇ ನರ್ಸ್ ಜಯಲಕ್ಷ್ಮಿ ಅವರನ್ನು ಎಲಿಮಿನೇಟ್ ಮಾಡಿದರು. ರಾಜ್ಯದ ಜನತೆ ಕಳುಹಿಸಿದ ಎಸ್ಎಂಎಸ್ ಆಧಾರದ ಮೇಲೆ ಜಯಲಕ್ಷ್ಮಿ ಅವರು ಎಲಿಮಿನೇಟ್ ಆದರು. ಸದ್ಯಕ್ಕೆ ಶರ್ಮಾಗಾರು ಸೇಫ್.

  ಹದಿಮೂರನೇ ಸ್ಪರ್ಧಿ ಯಾರು?

  ಹದಿಮೂರನೇ ಸ್ಪರ್ಧಿ ಯಾರು?

  ಇದೇ ಸಂದರ್ಭದಲ್ಲಿ ಸುದೀಪ್ ಅವರು 13ನೇ ಸ್ಪರ್ಧಿಯ ಬಗ್ಗೆಯೂ ಸುಳಿವು ನೀಡಿದರು. ಅವರು ಇನ್ನೇನು ಈ ವಾರ ಸೂಟ್ ಕೇಸ್ ಸಮೇತ ಬಿಗ್ ಬಾಸ್ ಮನೆ ಸೇರುತ್ತಾರೆ ಎಂಬ ಸುಳಿವನ್ನು ಕೊಟ್ಟಿದ್ದಾರೆ. ಆದರೆ ಅವರ್ಯಾರು ಎಂದು ಗೊತ್ತಾಗಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕು.

  ಕನ್ನಡ ಚಿತ್ರರಂಗದ ನಿರ್ಮಾಪಕನೇ?

  ಕನ್ನಡ ಚಿತ್ರರಂಗದ ನಿರ್ಮಾಪಕನೇ?

  ಮೂಲಗಳ ಪ್ರಕಾರ 13ನೇ ಸ್ಪರ್ಧಿ ಕನ್ನಡ ಚಿತ್ರರಂಗ ನಿರ್ಮಾಪಕರೊಬ್ಬರು ಎನ್ನಲಾಗಿದೆ. ಆದರೆ ಖಚಿತವಾಗಿ ಯಾರು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ 'ಬಿಗ್ ಬಾಸ್' ರಹ್ಯಸವನ್ನು ಕಾಪಾಡಿಕೊಂಡಿದ್ದಾರೆ.

  ಶರ್ಮಾ ತಮ್ಮ ಧಿಮಾಕು ಬಿಡಲಿಲ್ಲ

  ಶರ್ಮಾ ತಮ್ಮ ಧಿಮಾಕು ಬಿಡಲಿಲ್ಲ

  ವಾರದ ಕಥೆ ಕಿಚ್ಚನ ಜೊತೆ ಅಪರ್ಣಾ ಅವರಂತೂ ಒಂಚೂರು ಭಾವುಕರಾದರು. ಅವರು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಎಂದಿನಂತೆ ಶರ್ಮಾ ಅವರು ತಮ್ಮ ಧಿಮಾಕು ಬಿಟ್ಟುಕೊಡಲಿಲ್ಲ. ಕಾರ್ಯಕ್ರಮದಲ್ಲಿ ಅವರಿದ್ದರೇನೇ ಮಜಾ ಎಂಬ ಮಾತುಗಳು ವೀಕ್ಷಕ ಬಳಗದಿಂದ ಕೇಳಿಬರುತ್ತಿವೆ. ಅವರನ್ನು ಉಳಿಸಿಕೊಳ್ಳುವುದು ಬಿಡುವುದು ವೀಕ್ಷಕರ ಕೈಯಲ್ಲೇ ಇದೆ.

  ನರ್ಸ್ ಜಯಲಕ್ಷ್ಮಿ ಇನ್ನಷ್ಟು ದಿನ ಇರಬೇಕಾಗಿತ್ತು!

  ನರ್ಸ್ ಜಯಲಕ್ಷ್ಮಿ ಇನ್ನಷ್ಟು ದಿನ ಇರಬೇಕಾಗಿತ್ತು!

  ಹಾಗೆಯೇ ನರ್ಸ್ ಜಯಲಕ್ಷ್ಮಿ ಅವರು ಇನ್ನಷ್ಟು ದಿನ ಇರಬೇಕಾಗಿತ್ತು. ಯಾಕೆಂದರೆ ಬಿಗ್ ಬಾಸ್ ಮನೆಯಲ್ಲಿ ಅವರು ಇನ್ನೇನು ಕುಚಿಕು ಕುಚಿಕು ಸುದ್ದಿಗಳನ್ನು ಹೇಳುತ್ತಿದ್ದರೋ ಎಂಬ ಕುತೂಹಲ ಇತ್ತು. ಬಹುಶಃ ಚುನಾವಣೆ ಸಮಯವಾದ ಕಾರಣ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮೇಲೆ ಅವರ ಮಾತುಗಳು ಪರಿಣಾಮ ಬೀರಬಹುದಾಗಿದ್ದರಿಂದ ಬಿಗ್ ಬಾಸ್ ಅವರಿಗೆ ಗೇಟ್ ಪಾಸ್ ನೀಡಿರಬಹುದೇ?

  ಶರ್ಮಾ ಹೆಗಲೇರಿದ ಮತ್ತೊಂದು ಜವಾಬ್ದಾರಿ

  ಶರ್ಮಾ ಹೆಗಲೇರಿದ ಮತ್ತೊಂದು ಜವಾಬ್ದಾರಿ

  ಶರ್ಮಾ ಅವರ ಹೆಗಲಿಗೆ ಮತ್ತೊಂದು ಜವಾಬ್ದಾರಿಯನ್ನು ಹೊರಿಸಲಾಗಿದೆ. ಅವರು ಉಳಿದ ಸ್ಪರ್ಧಿಗಳ ಮೇಲೆ ಕಣ್ಣಿಟ್ಟಿರಬೇಕು. ಬಿಗ್ ಬಾಸ್ ಮನೆಯ ನೀತಿ ನಿಯಮಗಳನ್ನು ಉಲ್ಲಂಘಿಸುವವರನ್ನು ನೋಟ್ ಮಾಡಿಕೊಳ್ಳಬೇಕು. ಸ್ವತಃ ಶರ್ಮಾ ಅವರು ಅವರ ಮೇಲೆ ಕಣ್ಣಿಡಬೇಕಾಗುತ್ತದೆ ಎಂದೂ ಬಿಗ್ ಬಾಸ್ ಆರ್ಡರ್ ಮಾಡಿದ್ದಾರೆ.

  ಬಿಗ್ ಬಾಸ್ ಮನೆಯಲ್ಲಿ ಬಚ್ಚನ್ ಆಡಿಯೋ

  ಬಿಗ್ ಬಾಸ್ ಮನೆಯಲ್ಲಿ ಬಚ್ಚನ್ ಆಡಿಯೋ

  ಇನ್ನು ಶನಿವಾರದ (ಮಾ.30) ಕಾರ್ಯಕ್ರಮ ಇನ್ನಷ್ಟು ಕುತೂಹಲಕ್ಕೆ ವೇದಿಕೆಯಾಗಲಿದೆ. ಸುದೀಪ್ ಅಭಿನಯದ ಬಚ್ಚನ್ ಆಡಿಯೋ ಬಿಡುಗಡೆಯಾಗುತ್ತಿದೆ. ಜೊತೆಗೆ ನರ್ಸ್ ಜಯಲಕ್ಷ್ಮಿ ಅವರ ಡಾನ್ಸ್ ಬೇರೆ ಇರುತ್ತದೆ. ಆದರೆ ಐಟಂ ಡಾನ್ಸ್ ಅಲ್ಲ.

  English summary
  Etv Kannada's Bigg Boss reality show 5th day highlights. Nurse Jayalakshmi eliminated from the Bigg Boss house. Kichcha Sudeep announced the name in 5th day weekend programme titled as "Vaarada Kathe Kichchana Jothe".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X