»   » ಬಿಗ್ ಬಾಸ್ ಮನೆಯಿಂದ ಶರ್ಮಾಗೆ ಗೇಟ್ ಪಾಸ್?

ಬಿಗ್ ಬಾಸ್ ಮನೆಯಿಂದ ಶರ್ಮಾಗೆ ಗೇಟ್ ಪಾಸ್?

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಇನ್ನೊಂದು ಮಹತ್ವದ ಘಟ್ಟ ತಲುಪಿದೆ. ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ವಾಹಿನಿ ವೀಕ್ಷಕರಿಗೆ ಇದ್ದೇ ಇದೆ. ಬಹುಶಃ ಬೃಹತ್ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರೇ ಮನೆಯಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.

ಗುರುವಾರದ (ಏ.5) ಹೈಲೈಟ್ಸ್ ಹೀಗಿವೆ. ಈ ಬಾರಿಯೂ ಬಿಗ್ ಬಾಸ್ ಸ್ಪರ್ಧಿಗಳಿಗೆ ಲಕ್ಸುರಿ ಟಾಸ್ಕ್ ನೀಡಿದ. ಒಬ್ಬರಿಗೊಬ್ಬರು ಕೈಕೋಳದ ಮೂಲಕ ಬಂಧಿಸಿಕೊಳ್ಳಬೇಕಾಗಿತ್ತು. ಒಬ್ಬ ಪುರುಷ ಸ್ಪರ್ಧಿಯೊಂದಿಗೆ ಒಬ್ಬ ಮಹಿಳೆ ಬಂಧಿಯಾಗುವ ಟಾಸ್ಕ್.

ಎಲ್ಲರಿಗೂ ಒಬ್ಬ ಸ್ಪರ್ಧಿ ಸಿಕ್ಕಿದರೆ ಅರುಣ್ ಸಾಗರ್ ಅವರಿಗೆ ಇಬ್ಬರು ಸ್ಪರ್ಧಿಗಳು ಗಂಟುಹಾಕಿದರು ಬಿಗ್ ಬಾಸ್. ಈ ಬಾರಿಯೂ ಮಹಿಳಾ ಸ್ಪರ್ಧಿಗಳನ್ನು ಶೌಚಾಯಲದ ತನಕ ಬಿಟ್ಟು ಬರುವವರೆಗೂ ಕೈಕೋಳದಲ್ಲಿ ಬಂಧಿಯಾಗಿರಬೇಕು ಎಂದು ಬಿಗ್ ಬಾಸ್ ಆಜ್ಞಾಪಿಸಿದರು.

ಬಿಗ್ ಬಾಸ್ ಆದರೂ ಅಷ್ಟೇ ಯಾರಾದರೂ ಅಷ್ಟೇ

ಆದರೆ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಅವರು ಅನುಶ್ರೀ ಜೊತೆ ಕೈಕೋಳ ಹಾಕಿಸಿಕೊಳ್ಳಲಿಲ್ಲ. ನಾನು ಈ ಕೆಲಸ ಮಾಡಲ್ಲ ಎಂದರು. ಬಿಗ್ ಬಾಸ್ ಹೇಳಿದರು ಅಷ್ಟೇ, ಯಾರು ಹೇಳಿದರು ಅಷ್ಟೇ ಎಂದು ಕಡ್ಡಿಮುರಿದಂತೆ ಹೇಳಿದರು.

ಬ್ರಹ್ಮಾಂಡ ಗುರೂಜಿಗೆ ಮತ್ತೆ ಶಿಕ್ಷೆ

ಹಾಗಾಗಿ ಬ್ರಹ್ಮಾಂಡ ಗುರೂಜಿ ಅವರು ಬಿಗ್ ಬಾಸ್ ಕೆಂಗಣ್ಣಿಗೆ ಮತ್ತೊಮ್ಮೆ ಗುರಿಯಾಗಬೇಕಾಯಿತು. ಅವರಿಗೆ ಶಿಕ್ಷೆಯೂ ಆಯಿತು. ಈ ಬಾರಿಯ ಬಜೆಟ್ ನಲ್ಲಿ ಅವರಿಗೆ ಯಾವುದೇ ಅಧಿಕಾರ ಇರಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರ ಪಾಡು ಅಕ್ಷರಶಃ ನಾಯಿಪಾಡಾಗಿದೆ.

ನಾನು ಚಿಕನ್ ಮುಟ್ಟಲ್ಲ ಎಂದ ಬ್ರಹ್ಮಾಂಡ ಶರ್ಮಾ

ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ನಾನ್ ವೆಜ್ (ಚಿಕನ್) ತರಿಸಿರುವುದು ಅವರನ್ನು ಭಾರಿ ಇಕ್ಕಟ್ಟಿಗೆ ಸಿಲುಕಿಸಿದೆ. ಇದನ್ನು ಅವರು ಕ್ಯಾಮೆರಾ ಮುಂದೆಯೂ ಹೇಳಿಕೊಂಡರು.

ದಯವಿಟ್ಟು ನನ್ನನ್ನು ಮನೆಯಿಂದ ಕಳುಹಿಸಿ

ದಯವಿಟ್ಟು ನನ್ನನ್ನು ಬಿಗ್ ಬಾಸ್ ಮನೆಯಿಂದ ಕಳುಹಿಸಿಕೊಡುವ ಏರ್ಪಾಟು ಮಾಡಿ. ಇಲ್ಲ ಅಂದ್ರೆ ಎಲ್ಲರೂ ಅಮ್ಮನ ಕಣ್ಣಿಗೆ ಗುರಿಯಾಗಬೇಕಾಗುತ್ತದೆ. ನನ್ನ ಹತ್ತಿರ ಹುಡುಗಾಟ ಆಡಬೇಡಿ. ಮುಂದೆ ಆಗುವ ರಾದ್ಧಾಂತಗಳಿಗೆ ನಾನು ಹೊಣೆ ಅಲ್ಲ ಎಂದು ಮನವಿಯಂತೆ ಎಚ್ಚರಿಕೆ ನೀಡಿದ್ದಾರೆ.

ಬ್ರಹ್ಮಾಂಡ ಗುರೂಜಿಗಳು ಕೆಂಡಾಮಂಡಲ

ಫ್ರಿಜ್ ನಲ್ಲಿ ಚಿಕನ್ ಇಟ್ಟಿದ್ದಾರೆ. ಅಯ್ಯೋ ರಾಮ ನಾನು ಫ್ರಿಜ್ ಮುಟ್ಟಲ್ಲಪ್ಪ. ನನಗೆ ಅಡುಗೆ ಮನೆ ಸಹವಾಸವೇ ಬೇಡ. ವಿನಾಯಕ ಜೋಶಿ ಏನೋ ತಿಂತಾನೆ. ಆದರೆ ನಾನು ಹಂಗಲ್ಲ. ಇದೆಲ್ಲಾ ನನಗೆ ಹಾಗಿ ಬರಲ್ಲ. ನಾನು ಅಮ್ಮನವರ ಪುತ್ರ ಎಂದು ಬ್ರಹ್ಮಾಂಡ ಗುರೂಜಿಗಳು ಕೆಂಡಾಮಂಡಲವಾಗಿದ್ದಾರೆ.

ಯಾರು ಎಲಿಮಿನೇಟ್ ಆಗ್ತಾರೆ?

ಈ ಬಾರಿ ಎಲಿಮಿನೇಷನ್ ಗೆ ನಾಮಿನೇಟ್ ಆಗಿರುವವರು ಸಂಜನಾ, ನಿಖಿತಾ, ಅರುಣ್ ಸಾಗರ್ ಮತ್ತು ನರೇಂದ್ರ ಬಾಬು ಶರ್ಮಾ. ಇವರಲ್ಲಿ ಈ ವಾರ ಯಾರು ಔಟ್ ಆಗುತ್ತಾರೆ ಎಂಬುದು ಗೊತ್ತಾಗಬೇಕಾದರೆ ಈ ಶುಕ್ರವಾರ (ಏ.5) ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೊತ್ತಾಗಲಿದೆ.

English summary
Etv Kannada reality show Bigg Boss 11th day highlights. Who will eliminate from day 12th episode. Narendra Babu Sharma himself ready to walked out of the house. He is also nomited for elimination along with three others.
Please Wait while comments are loading...