For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ನಲ್ಲಿ ಶರ್ಮಾಗೆ ನಿಖಿತಾ ಮಸಾಜ್

  By Rajendra
  |

  ಕನ್ನಡ 'ಬಿಗ್ ಬಾಸ್' ಮನೆಯಲ್ಲಿ ಒಬ್ಬರದ್ದೇ ಅಸಲಿ ಬಣ್ಣ ಬಯಲಾಗುತ್ತಿದೆ. ಎಷ್ಟು ದಿನ ಅಂತಾ ನಟಿಸಲು ಸಾಧ್ಯ? ಅದೂ ರಂಗಿನ ಹಬ್ಬ ಸಂಭ್ರಮದಲ್ಲಿ ಒಂದಷ್ಟು ಬಣ್ಣಗಳು ಬಯಲಾದವು. ಬಿಗ್ ಬಾಸ್ ಆಜ್ಞೆಯನ್ನು ಮೀರಿದ ನಿಖಿತಾ ತುಕ್ರಲ್ ಮೇಲೆ ಕ್ರಮಕೈಗೊಳ್ಳಲಾಯಿತು.

  ಮನೆಯಲ್ಲಿ ಎಲ್ಲರೂ ಹೋಳಿ ಹಬ್ಬ ಆಚರಿಸಲು ಬಿಗ್ ಬಾಸ್ ಅವಕಾಶ ನೀಡಿದ್ದ. ಆದರೆ ದೇಶದಲ್ಲಿ ನೀರಿನ ಅಭಾವದ ಕಾರಣ ನೀರನ್ನು ಬಳಸದೆ ಬಣ್ಣಗಳನ್ನು ಮಾತ್ರ ಬಳಸುವಂತೆ ಎಚ್ಚರಿಕೆ ನೀಡಿದ್ದ. ಆದರೆ ನಿಖಿತಾ ಈ ನಿಯಮವನ್ನು ಮುರಿದು ನೀರನ್ನು ಬಳಸಿದರು.

  ಇದಕ್ಕಾಗಿ ಅವರು 25 ಸಲ ಈಜುಕೊಳಕ್ಕೆ ಇಳಿದು ಬಂದು ಕ್ಯಾಮೆರಾ ಮುಂದೆ ಕ್ಷಮಿಸಿ ಎಂದು ಕೇಳಿಕೊಳ್ಳಬೇಕಾಯಿತು. ಇದೊಂಥರಾ ತಮಾಷೆಯಾಗಿತ್ತು. ಅಲ್ಲಾ ಬಿಗ್ ಬಾಸ್ ಗೆ ಅಷ್ಟೂ ಗೊತ್ತಾಗುವುದಿಲ್ಲವೇ? ಬಣ್ಣ ಎರಚಿಕೊಂಡ ಮೇಲಾದರೂ ಸ್ನಾನ ಮಾಡಿಕೊಳ್ಳಲು ನೀರು ಖರ್ಚಾಗುತ್ತದೆ ತಾನೆ?

  ಮತ್ತೊಂದು ಟಾಸ್ಕ್ ನೀಡಿದ ಬಿಗ್ ಬಾಸ್

  ಮತ್ತೊಂದು ಟಾಸ್ಕ್ ನೀಡಿದ ಬಿಗ್ ಬಾಸ್

  ಇನ್ನು ಬಿಗ್ ಬಾಸ್ ಕೊಟ್ಟಿದ್ದ ಮೊದಲ ಬಜೆಟ್ ಟಾಸ್ಕನ್ನು ಎಲ್ಲರೂ ಮುಗಿಸಿದ್ದಾರೆ. ಇದಕ್ಕಾಗಿ 5000 ಪಾಯಿಂಟ್ಸ್ ಸಿಕ್ಕಿವೆ. ಇದನ್ನು ಬಳಸಿಕೊಂಡು ಮತ್ತೊಂದು ಟಾಸ್ಕ್ ನೀಡಲಾಗಿತ್ತು. ಅದೇನೆಂದರೆ 5000 ಪಾಯಿಂಟ್ಸ್ ಮೀರದಂತೆ ಪಟ್ಟಿಯಲ್ಲಿ ತಮಗೆ ಬೇಕಾದ ದಿನಸಿ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು.

  ಲೆಕ್ಕಾಚಾರ ತಪ್ಪಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ

  ಲೆಕ್ಕಾಚಾರ ತಪ್ಪಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ

  ಆಯ್ಕೆಗೆ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಎಲ್ಲರೂ ಏನೇನೋ ಲೆಕ್ಕಾಚಾರ ಹಾಕಿ ಪಟ್ಟಿ ತಯಾರಿಸಿದರು. ಆದರೆ ಅವರ ಆಯ್ಕೆಯ ಪಟ್ಟಿ 5000 ಪಾಯಿಂಟ್ ಗಳನ್ನು ಮೀರಿತ್ತು. ಇದಕ್ಕಾಗಿ ಬಿಗ್ ಬಾಸ್ ಅವರಿಗೆ ಏನನ್ನೂ ಕೊಡದೆ ಎಲ್ಲವನ್ನೂ ಕ್ಯಾನ್ಸಲ್ ಮಾಡಿದ್ದಾನೆ.

  ಮೊದಲ ಟಾಸ್ಕ್ ಗೆದ್ದ ಸ್ಪರ್ಧಿಗಳು

  ಮೊದಲ ಟಾಸ್ಕ್ ಗೆದ್ದ ಸ್ಪರ್ಧಿಗಳು

  ಇನ್ನು ನರೇಂದ್ರ ಬಾಬು ಶರ್ಮಾ ಅವರಂತೂ ತಮ್ಮ ಎಂದಿನ ಶೈಲಿಯಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇವರೊಂಥರಾ ಕಾಮಿಡಿ ಹೀರೋ. ಮೊದಲ ಟಾಸ್ಕ್ ನ ಜವಾಬ್ದಾರಿಯನ್ನು ಶರ್ಮಾ ಹಾಗೂ ನರ್ಸ್ ಜಯಲಕ್ಷ್ಮಿ ಅವರಿಗೆ ಒಪ್ಪಿಸಲಾಗಿತ್ತು. ಎರಡು ರಾತ್ರಿ ಒಂದು ಹಗಲು ಹೋಮಕುಂಡ ನಂದದಂತೆ ನೋಡಿಕೊಳ್ಳುವ ಟಾಸ್ಕ್ ಅದು.

  ಸಂಜನಾ, ಚಂದ್ರಿಕಾಗೆ ಶರ್ಮಾ ಶಿಕ್ಷೆ

  ಸಂಜನಾ, ಚಂದ್ರಿಕಾಗೆ ಶರ್ಮಾ ಶಿಕ್ಷೆ

  ಈ ಟಾಸ್ಕ್ ನಲ್ಲಿ ಸ್ಪರ್ಧಿಗಳು ಗೆದ್ದಿದ್ದಾರೆ. ಆದರೆ ಟಾಸ್ಕ್ ನಲ್ಲಿ ಯಾರು ತೊಡಗಿಕೊಳ್ಳಲಿಲ್ಲವೋ ಅವರ ಹೆಸರುಗಳನ್ನು ಸೂಚಿಸುವಂತೆ ಶರ್ಮಾ ಮತ್ತು ಜಯಲಕ್ಷ್ಮಿ ಅವರಿಗೆ ಬಿಗ್ ಬಾಸ್ ಆಜ್ಞಾಪಿಸಿದ. ಹಾಗಾಗಿ ಅವರು ಮುಲಾಜಿಲ್ಲದೆ ಸಂಜನಾ ಹಾಗೂ ಚಂದ್ರಿಕಾ ಹೆಸರನ್ನು ಸೂಚಿಸಿದರು.

  ಶರ್ಮಾರನ್ನು ಮನೆಯಿಂದ ಹೊರದಬ್ಬಲು ತಂತ್ರ

  ಶರ್ಮಾರನ್ನು ಮನೆಯಿಂದ ಹೊರದಬ್ಬಲು ತಂತ್ರ

  ಶರ್ಮಾ ಮೇಲೆ ಚಂದ್ರಿಕಾ ಹಾಗೂ ಸಂಜನಾ ಇಬ್ಬರೂ ಕಣ್ಣಿಟ್ಟಿದ್ದಾರೆ. ಆದಷ್ಟು ಶರ್ಮಾರನ್ನು ಮನೆಯಿಂದ ಹೊರದಬ್ಬಲು ತಂತ್ರ ಹೆಣೆಯುತ್ತಿದ್ದಾರೆ. ಶರ್ಮಾ ಅವರಂತೂ ಮನೆಯಿಂದ ಬಿಗ್ ಬಾಸ್ ಯಾವಾಗ ಹೋಗು ಎಂದರೆ ಆಗ ಹೋಗುತ್ತೇನೆ. ನಾನು ಯಾವ ಕೆಲಸವನ್ನು ಮಾಡಲ್ಲ ಎಂದು ಅವರು ಬ್ರಹ್ಮಾಂಡವಾಗಿ ಹೇಳಿದ್ದಾರೆ.

  ಕಾದಿದೆ ಸಂಜನಾ, ಶರ್ಮಾ ನಡುವೆ ಬಿಗ್ ಫೈಟ್

  ಕಾದಿದೆ ಸಂಜನಾ, ಶರ್ಮಾ ನಡುವೆ ಬಿಗ್ ಫೈಟ್

  ಮುಂದೆ ಸಂಜನಾ ಮತ್ತು ಶರ್ಮಾ ನಡುವೆ ಬಿಗ್ ಫೈಟ್ ಕಾದಿದೆ. ಪುಟಗೋಸಿ, ಮುಂಡೆಮಕ್ಕಳು ಎಂಬ ಪದ ಬಳಸುತ್ತಿರುವ ಬಗ್ಗೆ ಶರ್ಮಾ ಮೇಲೆ ಸಂಜನಾ ಕತ್ತಿಮಸೆದಿದ್ದಾರೆ. ಇವರಿಬ್ಬರ ನಡುವೆ ಬಿಗ್ ಫೈಟ್ ಕಾದಿದೆ. ಮರೆಯಲ್ಲಿ ಕೂತಿರುವ 'ಬಿಗ್ ಬಾಸ್' ಮಜಾ ತಗೊಳ್ತಿದ್ದಾನೆ.

  ಬಿಗ್ ಬಾಸ್ ನಲ್ಲಿ ಶರ್ಮಾಗೆ ನಿಖಿತಾ ಮಸಾಜ್

  ಬಿಗ್ ಬಾಸ್ ನಲ್ಲಿ ಶರ್ಮಾಗೆ ನಿಖಿತಾ ಮಸಾಜ್

  ಒಂಚೂರು ಬೆನ್ನು ಯಾಕೋ ನೋಯ್ತಾಯಿದೆ ಸ್ವಲ್ಪ ಮಸಾಜ್ ಮಾಡಮ್ಮಾ ಎಂದು ನಿಖಿತಾಗೆ ಶರ್ಮಾ ಕೇಳಿದರು. ಶರ್ಮಾ ಅವರ ಬೆನ್ನನ್ನು ಉಜ್ಜುವ ಪ್ರಯತ್ನ ಮಾಡಿದರು ನಿಖಿತಾ. ಕೋಣಕ್ಕೆ ಮೈನೀವಿದಂತೆ ನಿಖಿತಾ ಫೀಲಾದರು. ನಾಲ್ಕನೇ ದಿನ ಆಗಾಗ ಮಸಾಜ್ ನಲ್ಲೇ ಇವರಿಬ್ಬರು ಕಾಣಿಸಿಕೊಂಡರು.

  ಜಯಲಕ್ಷ್ಮಿಗೆ ಟೀ ಶರ್ಟ್ ಬಿಚ್ಚುವಂತೆ ಹೇಳಿದ ಶರ್ಮಾ

  ಜಯಲಕ್ಷ್ಮಿಗೆ ಟೀ ಶರ್ಟ್ ಬಿಚ್ಚುವಂತೆ ಹೇಳಿದ ಶರ್ಮಾ

  ಅಯ್ಯೋ ಜಯಮ್ಮಾ ನೀನು ಟೀ ಶರ್ಟ್ ಹಾಕ್ಕೋಬೇಡಮ್ಮಾ ಎಂದರು. ಇನ್ನೇನು ಹಾಕ್ಕೋಳ್ಳಿ ಎಂದರು ಜಯಮ್ಮಾ. ಶಾಲು ಹೊದ್ದುಕೊಂಡು ಬಿಡಿ ಸುಮ್ನೆ ಎಂದು ಕಿಚಾಯಿಸಿದರು ಶರ್ಮಾ. ಶರ್ಮಾರನ್ನು ನೋಡುತ್ತಿದ್ದರೆ ಸ್ವಾಮೀಜಿ ವೇಷದಲ್ಲಿರುವ ರಸಿಕ ಶಿಖಾಮಣಿ ಅನ್ನಿಸುತ್ತದೆ.

  English summary
  Etv Kannada's Bigg Boss reality show 4th day highlights. Nikita was punished by the Bigg Boss for breaking the rule. She was asked to take a dip in the swimming pool for 25 times, come up to a camera and ask sorry for the mistake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X