»   » ಮುಖವಾಡಗಳ ಕಳಚುವ ಅಸಲಿ ಆಟ 'ಬಿಗ್ ಬಾಸ್'

ಮುಖವಾಡಗಳ ಕಳಚುವ ಅಸಲಿ ಆಟ 'ಬಿಗ್ ಬಾಸ್'

Posted By:
Subscribe to Filmibeat Kannada

ಕನ್ನಡದ ಬಿಗ್ ರಿಯಾಲಿಟಿ ಶೋ 'ಬಿಗ್ ಬಾಸ್' ಎರಡನೇ ಆವೃತ್ತಿಗೆ ಇನ್ನು ಕೇವಲ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಜೂನ್ 29ರಿಂದ ರಾತ್ರಿ 8ಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ. ಈ ಬಾರಿಯ ಸಂಚಿಕೆಗೆ ಸಂಬಂಧಿಸಿದಂತೆ ಇನ್ನೊಂದು ಪ್ರೋಮೊ ಬಿಡುಗಡೆಯಾಗಿದೆ.

ಈ ಎರಡನೇ ಪ್ರೋಮೊದಲ್ಲಿ ಸುದೀಪ್ ಮುಖವಾಡಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಮುಖವಾಡಗಳನ್ನು ಸಂಕೇತದಂತೆ ಬಳಸಿಕೊಂಡು ಈ ಬಾರಿಯ ಪ್ರೊಮೋವನ್ನು ಬಹಳ ಅಚ್ಚುಕಟ್ಟಾಗಿ ತಂದಿದ್ದಾರೆ. ಈಗಾಗಲೆ ಈ ಪ್ರೋಮೊ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ['ಬಿಗ್ ಬಾಸ್ 2' ಫಸ್ಟ್ ಲುಕ್ ಔಟ್, ಸುದೀಪ್ ರಾಕ್ಸ್]

ಒಂದು ಮನೆಯೊಳಗೆ ನೂರು ದಿನಗಳ ಕಾಲ ನಾಟಕ ಆಡಲು ಸಾಧ್ಯವಿಲ್ಲ. ಒಬ್ಬೊಬ್ಬರ ಮುಖವಾಡವನ್ನು ಕಳಚುತ್ತಾ ಅಸಲಿ ಮುಖವನ್ನು ತೋರಿಸುವುದೇ ಈ ರಿಯಾಲಿಟಿ ಶೋನ ಹೆಚ್ಚುಗಾರಿಕೆ. ಈ ಬಾರಿ ಯಾರೆಲ್ಲಾ ಶೋನಲ್ಲಿ ಇದ್ದಾರೆ ಎಂಬುದನ್ನು ಗುಟ್ಟಾಗಿ ಇಡಲಾಗಿದೆ. ಇಷ್ಟಕ್ಕೂ ಹೊಸ ಪ್ರೋಮೋದಲ್ಲಿ ಏನಿದೆ?

ಮುಖವಾಡಗಳ ಕಳಚಲಿರುವ ಬಿಗ್ ಬಾಸ್

ಸುತ್ತಲೂ ಮುಖವಾಡಗಳು, ಕ್ಯಾಪ್ ತೊಟ್ಟು ಬರುವ ಸುದೀಪ್ ಎಂದಿನ ತಮ್ಮ ವರಸೆಯಲ್ಲಿ ಶೋ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಹೇಳುತ್ತಾರೆ. ಈ ಬಾರಿ ಬಿಗ್ ಬಾಸ್ ಧ್ವನಿ ಯಾರದು ಎಂಬ ಕುತೂಹಲವೂ ಇದೆ.

ಇದು ತಮಾಷೆ ಅಲ್ಲ, ಬಿಗ್ ಬಾಸ್ ಅಸಲಿ ಆಟ

"ಬ್ರಹ್ಮನಿಗೆ ನಾಲ್ಕೇ ಮುಖ, ರಾವಣನಿಗೆ ಹತ್ತು ಮುಖ, ಆದರೆ ಮನುಷ್ಯನಿಗೆ ಸಾವಿರಾರು ಮುಖಗಳು. ಅದನ್ನು ಮುಚ್ಚೋಕೆ ಒಂದು ಮುಖವಾಡ. ಅದರ ಹಿಂದೆ ಏನಿದೆ ಅಂಥ ಯಾರಿಗೂ ಗೊತ್ತಾಗಲ್ಲ. ಮುಖವಾಡಗಳನ್ನು ತೆಗೆದುಹಾಕೋ ಸಮಯ ಬಂದಿದೆ. ಇದು ತಮಾಷೆ ಅಲ್ಲ, ಬಿಗ್ ಬಾಸ್ ಅಸಲಿ ಆಟ. ಈಗ ಶುರು" ಎನ್ನುತ್ತಾರೆ ಸುದೀಪ್.

ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಅವರ ಕಲಾ ಸ್ಪರ್ಶ

ಈ ಬಾರಿಯ ಶೋನ ವಿಶೇಷತೆ ಎಂದರೆ ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಅವರ ಕಲಾ ಸ್ಪರ್ಶ ಇರುವುದು. ಅದು ಎಷ್ಟರ ಮಟ್ಟಿಗೆ ಕಿರುತೆರೆ ವೀಕ್ಷಕರನ್ನು ಸೆಳೆಯಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲಾ ತಂಗಲಿದ್ದಾರೆ?

ಈ ಬಾರಿ ಸುಮಾರು ಹತ್ತರಿಂದ ಹದಿನಾಲ್ಕು ಮಂದಿ ಬಿಗ್ ಬಾಸ್ ಮನೆಯಲ್ಲಿ ಮಲಗಲಿದ್ದಾರೆ. ಯಾರೆಲ್ಲಾ ಇರುತ್ತಾರೆ ಎಂಬುದು ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು. ಅಲ್ಲಿಯವರೆಗೂ ಪ್ರೋಮೊಗಳೇ ವೀಕ್ಷಕರ ಪಾಲಿನ ಪಂಚಾಮೃತ.

ಕುತೂಹಲ ಹೆಚ್ಚಿಸಿರುವ ಬಿಗ್ ಬಾಸ್ ಪ್ರೋಮೊ

ಈಗಾಗಲೆ ಬಿಗ್ ಬಾಸ್ ರಿಯಾಲಿಟಿ ಶೋನ ಎರಡನೇ ಪ್ರೋಮೊ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು ಕಾರ್ಯಕ್ರಮವನ್ನು ನಿರೀಕ್ಷಿಸುತ್ತಿರುವವರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

English summary
Second promo of the 'Most Awaited show' Bigg Boss Kannada 2 is out. Kichcha Sudeep rocks again in the Bigg Boss video. The biggest show of Karnataka coming up on Suvarna TV from 29th June at 8 pm.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada