ಸುಚಿತ್ರಾ ಅಕಾಡೆಮಿಯಿಂದ ಕನ್ನಡ ಸಿನಿಮಾಗಳ ಚಲನಚಿತ್ರೋತ್ಸವ.!
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕನ್ನಡ ಚಿತ್ರಪ್ರೇಮಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಇದೇ ಮೊದಲ ಬಾರಿಗೆ 'ಸುಚಿತ್ರಾ ಅಕಾಡೆಮಿ'ಯಿಂದ ಕನ್ನಡ ಸಿನಿಮಾಗಳ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಉಚಿತವಾಗಿ ಕನ್ನಡ ಸಿನಿಮಾ ನೋಡಬಹುದು.
ನವೆಂಬರ್ 9ನೇ ತಾರೀಖಿನಿಂದ ಆರಂಭವಾಗುವ ಈ ಚಲನಚಿತ್ರೋತ್ಸ ಈ ತಿಂಗಳ ಅಂತ್ಯದವರೆಗೂ (ನವೆಂಬರ್ 30) ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಗೆ ಒಂದೊಂದು ಸೂಪರ್ ಹಿಟ್ ಸಿನಿಮಾ ಪ್ರದರ್ಶನವಾಗಲಿದೆ.

ಅಂದ್ಹಾಗೆ, ಈ ಚಿತ್ರೋತ್ಸವದಲ್ಲಿ ಕೆಲವೇ ಕೆಲವು ಆಯ್ದ ಕನ್ನಡ ಸಿನಿಮಾಗಳು ಮಾತ್ರ ಪ್ರಸಾರವಾಗುತ್ತಿದ್ದು, ಸುಮಾರು 16 ಸಿನಿಮಾಗಳು ಪ್ರದರ್ಶನವಾಗುತ್ತಿದೆ. ಆ ಚಿತ್ರಗಳ ಪಟ್ಟಿ ಮುಂದೆ ನೀಡಲಾಗಿದೆ ನೋಡಿ.
'ಆಕ್ಸಿಡೆಂಟ್', 'ಬಂಗಾರದ ಮನುಷ್ಯ', 'ಬೆಟ್ಟದ ಹೂವು', 'ನಾಂದಿ', 'ನಾಗಮಂಡಲ', 'ಭೂತಯ್ಯನ ಮಗ ಅಯ್ಯು', 'ಪ್ರೇಮಲೋಕ', 'ಸಂಸ್ಕಾರ', 'ಘಟಶ್ರಾದ್ಧ', 'ಬೆಳದಿಂಗಳ ಬಾಲೆ', 'ದುನಿಯಾ', 'ಮುಂಗಾರು ಮಳೆ', 'ಅಮೆರಿಕಾ ಅಮೆರಿಕಾ', 'ಲೂಸಿಯಾ', 'ಉಳಿದವರು ಕಂಡಂತೆ', 'ಹುಲಿರಾಯ' ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.
ಹೆಚ್ಚಿನ ಮಾಹಿತಿಗೆ ಸುಚಿತ್ರಾ ಅಕಾಡೆಮಿಯನ್ನ ಸಂಪರ್ಕಿಸಿ.....


Click it and Unblock the Notifications











