»   » ಸುವರ್ಣ ವಾಹಿನಿಯಲ್ಲಿ ರಮ್ಯಾ, ಲೂಸ್ ಮಾದ ಚಿತ್ರ

ಸುವರ್ಣ ವಾಹಿನಿಯಲ್ಲಿ ರಮ್ಯಾ, ಲೂಸ್ ಮಾದ ಚಿತ್ರ

Posted By:
Subscribe to Filmibeat Kannada

ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಲೂಸ್ ಮಾದ ಯೋಗೇಶ್ ಅಭಿನಯದ ಸಿದ್ಲಿಂಗು ಚಿತ್ರ ಇದೇ ಭಾನುವಾರ (ಸೆ.16) ಸಂಜೆ 6ಕ್ಕೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದ ಅಡಿಬರಹ "ರೋಹಿಣಿ ನಕ್ಷತ್ರ ವೃಷಭ ರಾಶಿ".

ಬಂದ್ರೆ ಬೆಟ್ಟ ಹೋದ್ರೆ ಟಾಟಾ, ಅಬ್ಬಬ್ಬಾ ಅಂದ್ರೆ ನಾನ್ ನಿಮ್ಗೊಂದು ಮುತ್ ಕೊಟ್ಟಿಲ್ಲ. ಹ್ಯಾಂಡ್ ಸೆಟ್ಟಲ್ಲಿ ಸಿಮ್‌ಕಾರ್ಡ್ ಹಾಕಿಲ್ಲ. ಕೈ ಕೆಲಸ... ಈ ರೀತಿಯ ಡೈಲಾಗ್ ಗಳಿಂದ ಸಿದ್ಲಿಂಗು ಚಿತ್ರ ಎಲ್ಲರ ಗಮನ ಸೆಳೆದಿತ್ತು. ಸಿದ್ಲಿಂಗು ಚಿತ್ರದ ವಿಮರ್ಶೆ ಓದಿ.

ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರವನ್ನು ಟಿ.ಪಿ. ಸಿದ್ಧರಾಜು ನಿರ್ಮಿಸಿದ್ದರು. ಒಟ್ಟು ರು.6 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಬಾಕ್ಸಾಫೀಸಲ್ಲಿ ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿತು. ನಿರ್ಮಾಪಕರಿಗೆ ಲಾಭ ಬಂತೋ ಇಲ್ಲವೋ ಗೊತ್ತಿಲ್ಲ.

ಅನೂಪ್ ಸೀಳಿನ್ ಸಂಗೀತ ನೀಡಿದ ಈ ಚಿತ್ರದ ಹಾಡುಗಳು ಇಂಪಾಗಿದ್ದವು. ಎಲ್ಲೆಲ್ಲೋ ಓಡುವ ಮನಸೇ ಹಾಗೂ ಚೆಂಬೋ ಚೆಂಬೋ ಎಂಬ ಹಾಡುಗಳು ಹಿಟ್ ಆಗಿದ್ದವು. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ರಮ್ಯಾ ಹಾಗೂ ಆಡಳಮ್ಮಾ ಮೇಡಂ ಆಗಿ ಅಭಿನಯಿಸಿರುವ ಸುಮನ್ ರಂಗನಾಥ್.

ಚಿತ್ರದಲ್ಲಿನ ಕೆಲವು ಸ್ಯಾಂಪಲ್ ಡೈಲಾಗ್ ಗಳು ಹೀಗಿವೆ. ರಮ್ಯಾ ಒಂದು ಕಡೆ "ನಾವು ಏನಕ್ಕೆ ಇಲ್ಲಿ ಬಂದಿದ್ದೇವೆ ಅಂತ ಗೊತ್ತಾ? ನಮ್ಮತ್ರಾನು ಕಡ್ಲೆಕಾಯಿ ಬೀಜ ಇದೆ ಅಂತ ತೋರ್ಸೋದಿಕ್ಕೆ" ಎನ್ನುತ್ತಾರೆ. ಪೊಲೀಸರ ಹಿತವಚನ ಹೀಗಿದೆ: "ಅದಕ್ಕೆ ಹೇಳೋದು ಈ ಕಾಳು-ಬೀಜಗಳ ಸಹವಾಸಕ್ಕೆ ಹೋಗ್ಬಾರ್ದು ಅಂತಾ".

ಇನ್ನೊಂದು ಸನ್ನಿವೇಶದಲ್ಲಿ ಚಿತ್ರದ ನಾಯಕ ನಟ ಯೋಗೇಶ್, "ಸಾರಿ ಸಾರ್ ನಮ್ಮ ಚಂಬು ಒಂಥರಾ...ಲೋಟ ಕಂಡ ತಕ್ಷಣ ನೀರು ಸುರಿದು ಬಿಡುತ್ತೆ" ಅಂತಾರೆ. ಈ ರೀತಿಯ ಡೈಲಾಗ್ ಗಳಿಂದ ಚಿತ್ರ ಕುಖ್ಯಾತಿಗೂ ಒಳಗಾಗಿತ್ತು. (ಒನ್ಇಂಡಿಯಾ ಕನ್ನಡ)

English summary
Golden Girl Ramya and Loose Mada Yogesh lead comedy-emotional Kannada film Sidlingu playing on Suvarna Channel on 16th Sept, 2012 at 6 pm IST. The film has been directed and written by Vijayprasad, who makes his big screen debut after directing many TV series.
Please Wait while comments are loading...