Related Articles
ನಟ ಸಾರ್ವಭೌಮನಿಗೆ ನಮನ ಸಲ್ಲಿಸಿದ ದರ್ಶನ್, ಸುದೀಪ್
ನಿಂತ ಜಾಗದಲ್ಲೇ ದರ್ಶನ್ ಚಿತ್ರಕ್ಕೆ ಕಮಿಟ್ ಆದ ಶಿವರಾಜ್ ಕುಮಾರ್.!
ಈ ಲುಕ್ ನಲ್ಲಿ ಡಿ ಬಾಸ್ ನೋಡಿ ಅದೆಷ್ಟು ವರ್ಷವಾಯ್ತೋ !
ದುರ್ಯೋಧನ ದರ್ಶನ್ ಗೆ ಅಭಿಮಾನಿಯಿಂದ ಸಿಕ್ಕ ಆ ಭರ್ಜರಿ ಗಿಫ್ಟ್ ಏನು?
ನಿರ್ದೇಶಕರೇ ಕೇಳಿಸಿಕೊಳ್ಳಿ... ದರ್ಶನ್ ಜೊತೆಗೆ ಸಿನಿಮಾ ಮಾಡಲು ಯಶ್ ರೆಡಿ!
"ತೂಗುದೀಪ ಶ್ರೀನಿವಾಸ್ ಹುಟ್ಟುಹಬ್ಬದ ಸಂಭ್ರಮ"ದಲ್ಲಿ ಅಭಿಮಾನಿಗಳು
ಪ್ರತಿದಿನ ನಿಮ್ಮನ್ನ ನಕ್ಕು ನಲಿಸುವ ಉದಯ ಕಾಮಿಡಿಗೆ 9ನೇ ಹುಟ್ಟುಹಬ್ಬ ಕಣ್ರೀ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ರಿಲೀಸ್ ಆಗಿ ಎಂಟು ತಿಂಗಳುಗಳು ಕಳೆದಿವೆ ಅಷ್ಟೇ. ಅಷ್ಟು ಬೇಗ 'ಚಕ್ರವರ್ತಿ' ಚಿತ್ರ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.
ಭೂಗತ ಲೋಕದ ಜೊತೆಗೆ ದೇಶ ಪ್ರೇಮದ ಬೀಜ ಬಿತ್ತುವ 'ಚಕ್ರವರ್ತಿ' ಸಿನಿಮಾ ಈ ವರ್ಷ ಬಹು ನಿರೀಕ್ಷೆ ಮೂಡಿಸಿತ್ತು. 80 ರ ದಶಕದ ಬೆಂಗಳೂರು ಅಂಡರ್ ವರ್ಲ್ಡ್ ಕಥೆಯನ್ನ ಹೊತ್ತಿದ್ದ 'ಚಕ್ರವರ್ತಿ' ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಕೂಡ ಮಾಡಿತ್ತು.
ದಾಖಲೆ ಬೆಲೆಗೆ ಚಿತ್ರದ ಪ್ರಸಾರ ಹಕ್ಕುಗಳನ್ನು ಖರೀದಿಸಿದ್ದ ಉದಯ ಟಿವಿ, ಇದೀಗ 'ಚಕ್ರವರ್ತಿ' ಚಿತ್ರವನ್ನ ಪ್ರಸಾರ ಮಾಡಲು ಮುಂದಾಗಿದೆ. ಅತೀ ಶ್ರೀಘ್ರದಲ್ಲಿಯೇ, 'ಚಕ್ರವರ್ತಿ' ಸಿನಿಮಾ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.
ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ'
''ಚಕ್ರವರ್ತಿ' ಸಿನಿಮಾ ಅತಿ ಶೀಘ್ರದಲ್ಲಿ ಪ್ರಸಾರ ಆಗಲಿದೆ'' ಎಂದು ಉದಯ ಟಿವಿಯಲ್ಲಿ ಪ್ರೋಮೋ ಪ್ರಸಾರ ಆಗುತ್ತಿದೆ ಹೊರತು 'ಚಕ್ರವರ್ತಿ' ಚಿತ್ರದ ಪ್ರಸಾರ ದಿನಾಂಕ ಹಾಗೂ ಸಮಯ ನಿಗದಿ ಆಗಿಲ್ಲ.
ಹೊಸ ವರ್ಷದ ಪ್ರಯುಕ್ತ ಅಥವಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ 'ಚಕ್ರವರ್ತಿ' ಪ್ರಸಾರ ಆಗುವ ಸಾಧ್ಯತೆ ಇದೆ. 'ಚಕ್ರವರ್ತಿ' ಚಿತ್ರವನ್ನ ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು, ಉದಯ ಟಿವಿಯಲ್ಲಿ ನೋಡಬಹುದು.
ಅಂದ್ಹಾಗೆ, 'ಚಕ್ರವರ್ತಿ' ಚಿಂತನ್ ನಿರ್ದೇಶನದ ಸಿನಿಮಾ. ಇದರಲ್ಲಿ ದರ್ಶನ್ ಗೆ ಜೊತೆಯಾಗಿ ದೀಪಾ ಸನ್ನಿಧಿ ಕಾಣಿಸಿಕೊಂಡಿದ್ರೆ, ಎದುರಾಳಿ ಆಗಿ ದಿನಕರ್ ತೂಗುದೀಪ ಮಿಂಚಿದ್ದರು. ಚಾರುಲತಾ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದ್ದ ಸಿನಿಮಾ 'ಚಕ್ರವರ್ತಿ'.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.