»   » 'ದೊಡ್ಮನೆ ಹುಡ್ಗ' ಚಿತ್ರವನ್ನ ಮತ್ತೊಮ್ಮೆ ನೋಡುವ ಅವಕಾಶ

'ದೊಡ್ಮನೆ ಹುಡ್ಗ' ಚಿತ್ರವನ್ನ ಮತ್ತೊಮ್ಮೆ ನೋಡುವ ಅವಕಾಶ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಪುನೀತ್ ಅಭಿನಯದ ಸೂಪರ್ ಹಿಟ್ ಚಿತ್ರ 'ದೊಡ್ಮನೆ ಹುಡ್ಗ'ನನ್ನ ಮತ್ತೊಮ್ಮೆ ನೋಡುವ ಅವಕಾಶ ನಿಮಗೆ ಸಿಗಲಿದೆ.

ಕಳೆದ ವರ್ಷ ತೆರೆಕಂಡಿದ್ದ 'ದೊಡ್ಮನೆ ಹುಡ್ಗ' ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿ ಯಶಸ್ವಿ ಪ್ರದರ್ಶನ ಕಂಡಿತ್ತು. ಆ ವೇಳೆ ಕೆಲವು ಅಭಿಮಾನಿಗಳು ಈ ಚಿತ್ರವನ್ನ ನೋಡಲು ಮಿಸ್ ಮಾಡಿಕೊಂಡಿರಬಹುದು. ಅಂತವರಿಗೆ ಮತ್ತೊಮ್ಮೆ ಈ ಸಿನಿಮಾನ ನೋಡುವ ಚಾನ್ಸ್ ಸಿಗಲಿದೆ.[ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ]

Kannada Movie Dodmane Hudga Premier in Zee Kannada

ಹೌದು, ಅತಿ ಶೀಘ್ರದಲ್ಲಿ 'ದೊಡ್ಮನೆ ಹುಡ್ಗ' ಟಿವಿಯಲ್ಲಿ ಪ್ರಸಾರವಾಗುತ್ತಿದೆ. ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪುನೀತ್ ಅವರ 25ನೇ ಚಿತ್ರ ಮೂಡಿ ಬರುತ್ತಿದೆ. ಈಗಾಗಲೇ ಪ್ರೋಮೊ ಪ್ರಸಾರವಾಗುತ್ತಿದ್ದು, ಮುಂದಿನ ವಾರಗಳಲ್ಲಿ 'ದೊಡ್ಮನೆ ಹುಡ್ಗ'ನನ್ನ ನೋಡಬಹುದು.[ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ 'ದೊಡ್ಮನೆ ಹುಡ್ಗ' ಪುನೀತ್.!]

ಅಂದ್ಹಾಗೆ, ಈ ಚಿತ್ರವನ್ನ ದುನಿಯಾ ಸೂರಿ ನಿರ್ದೇಶನ ಮಾಡಿದ್ದು, ಪುನೀತ್ ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್, ರಾಧಿಕಾ ಪಂಡಿತ್, ರವಿಶಂಕರ್, ಭಾರತಿ ವಿಷ್ಣುವರ್ಧನ್, ಸುಮಲತಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.[ವಿಮರ್ಶಕರು 'ದೊಡ್ಮನೆ ಬಿರಿಯಾನಿ' ತಿಂದು ತೇಗಿದ್ರಾ ಏನ್ಕತೆ?]

ಪ್ರೋಮೋ ಇಲ್ಲಿದೆ ನೋಡಿ

English summary
Kannada Movie Dodmane Hudga, which is all set to have its premier in Zee Kannada in Coming Days. Dodmane Hudga is a Family Drama written and directed by Duniya Suri. the film stars Puneeth RajKumar, Ambarish, Radhika Pandit in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada