»   » ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಮಫ್ತಿ' ಸಿನಿಮಾ

ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಮಫ್ತಿ' ಸಿನಿಮಾ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಸೂಪರ್ ಹಿಟ್ ಸಿನಿಮಾ 'ಮಫ್ತಿ' ಈಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

ಕಳೆದ ಡಿಸೆಂಬರ್ ನಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದ 'ಮಫ್ತಿ' ಯಶಸ್ವಿಯಾಗಿ ಶತದಿನ ಪೂರೈಸಿತ್ತು. ನೂರು ದಿನ ದಾಟಿದ ಸಂತಸದಲ್ಲೇ ಕಿರುತೆರೆ ಪ್ರೇಕ್ಷಕರನ್ನ ರಂಜಿಸಲು ಸ್ಟಾರ್ ನಟರು ಬರ್ತಿದ್ದಾರೆ.

ಹೌದು, ಜೀ ಕನ್ನಡ ವಾಹಿನಿ 'ಮಫ್ತಿ' ಚಿತ್ರವನ್ನ ದುಬಾರಿ ಬೆಲೆ ಕೊಟ್ಟು ಖರೀದಿಸಿದ್ದು, ಅತಿ ಶೀಘ್ರದಲ್ಲಿ ಪ್ರಸಾರ ಮಾಡಲಿದೆ. ಸದ್ಯಕ್ಕೆ ದಿನಾಂಕ ಹಾಗೂ ಸಮಯ ನಿಗದಿ ಮಾಡಿಲ್ಲ. ಆದ್ರೆ, ಅತಿ ಶೀಘ್ರದಲ್ಲಿ ಎಂದು ಪ್ರೋಮೋ ಪ್ರಸಾರವಾಗುತ್ತಿದೆ.

ಶಿವಣ್ಣ-ಅಪ್ಪು-ಸುದೀಪ್-ದರ್ಶನ್ ಈ ಗುಣಗಳನ್ನ ಬದಲಿಸಿಕೊಳ್ಳಬೇಕಂತೆ.!

Kannada Movie Mafti to premier in Zee kannada

ನರ್ತನ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರೇ, ಶಿವರಾಜ್ ಕುಮಾರ್ ಗ್ಯಾಂಗ್ ಸ್ಟರ್ ಆಗಿ ಮಿಂಚಿದ್ದರು. ಶ್ರೀಮುರಳಿಗೆ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿದ್ದು, ಛಾಯಾ ಸಿಂಗ್, ವಸಿಷ್ಠ ಸಿಂಹ, ಮಧು ಗುರುಸ್ವಾಮಿ, ಬಾಬು ಹಿರಣ್ಣಯ್ಯ, ದೇವರಾಜ್, ಸಾಧುಕೋಕಿಲಾ, ಪ್ರಕಾಶ್ ಬೆಳವಾಡಿ ಮತ್ತು ಚಿಕ್ಕಣ್ಣ ಅಭಿನಯಿಸಿದ್ದಾರೆ.

ಇನ್ನು ಜಯಣ್ಣ-ಬೋಗೇಂದ್ರ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದರು. ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಕೂಡ ಸೂಪರ್ ಹಿಟ್ ಆಗಿತ್ತು.

English summary
Hatric hero Shiva Rajkumar and roaring star srimurali starrer Kannada Movie 'Mafti' to premier in Zee kannada very soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X