For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 22 ರಂದು ಕಿರುತೆರೆಯಲ್ಲಿ ಶಿವಣ್ಣ-ಶ್ರೀಮುರಳಿ ಜೋಡಿಯ 'ಮಫ್ತಿ'

  By Bharath Kumar
  |
  ನಿಮ್ಮ ಮನೆಗೆ ಬರಲಿದ್ದಾರೆ ಶಿವಣ್ಣ ಹಾಗು ಶ್ರೀಮುರಳಿ | Filmibeat Kannada

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಸೂಪರ್ ಹಿಟ್ ಸಿನಿಮಾ 'ಮಫ್ತಿ' ಈಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಇದೇ ತಿಂಗಳು 22 ರಂದು, ಭಾನುವಾರ ರಾತ್ರಿ 7.30ಕ್ಕೆ ನಿಮ್ಮ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

  ಕಳೆದ ಡಿಸೆಂಬರ್ ನಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದ 'ಮಫ್ತಿ' ಯಶಸ್ವಿಯಾಗಿ ಶತದಿನ ಪೂರೈಸಿತ್ತು. ನೂರು ದಿನ ದಾಟಿದ ಸಂತಸದಲ್ಲೇ ಕಿರುತೆರೆ ಪ್ರೇಕ್ಷಕರನ್ನ ರಂಜಿಸಲು ಸ್ಟಾರ್ ನಟರು ಬರ್ತಿದ್ದಾರೆ.

  ಹೌದು, ಜೀ ಕನ್ನಡ ವಾಹಿನಿ 'ಮಫ್ತಿ' ಚಿತ್ರವನ್ನ ದುಬಾರಿ ಬೆಲೆ ಕೊಟ್ಟು ಖರೀದಿಸಿದ್ದು, ಪ್ರೋಮೋ ಪ್ರಸಾರವಾಗುತ್ತಿದೆ. ಹೀಗಾಗಿ, ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡಿದ್ದ ಬಹುತೇಕ ಸಿನಿ ಅಭಿಮಾನಿಗಳಿಗೆ ಈಗ ಟಿವಿಯಲ್ಲಿ ಮಫ್ತಿ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ.

  ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಮಫ್ತಿ' ಸಿನಿಮಾ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಮಫ್ತಿ' ಸಿನಿಮಾ

  ನರ್ತನ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದರೇ, ಶಿವರಾಜ್ ಕುಮಾರ್ ಗ್ಯಾಂಗ್ ಸ್ಟರ್ ಆಗಿ ಮಿಂಚಿದ್ದರು. ಶ್ರೀಮುರಳಿಗೆ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿದ್ದು, ಛಾಯಾ ಸಿಂಗ್, ವಸಿಷ್ಠ ಸಿಂಹ, ಮಧು ಗುರುಸ್ವಾಮಿ, ಬಾಬು ಹಿರಣ್ಣಯ್ಯ, ದೇವರಾಜ್, ಸಾಧುಕೋಕಿಲಾ, ಪ್ರಕಾಶ್ ಬೆಳವಾಡಿ ಮತ್ತು ಚಿಕ್ಕಣ್ಣ ಅಭಿನಯಿಸಿದ್ದಾರೆ.

  ಇನ್ನು ಜಯಣ್ಣ-ಬೋಗೇಂದ್ರ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದರು. ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಕೂಡ ಸೂಪರ್ ಹಿಟ್ ಆಗಿತ್ತು.

  English summary
  Hatric hero Shiva Rajkumar and roaring star srimurali starrer Kannada Movie 'Mafti' to premier in Zee kannada on april 22 at 7.30 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X