»   » ಮಿನಿಟ್ ಆಟಕ್ಕೆ ಶೇಕ್ ಆದ ಸ್ಪೋಟಕ ಸುದ್ದಿ ನಿರೂಪಕರು!

ಮಿನಿಟ್ ಆಟಕ್ಕೆ ಶೇಕ್ ಆದ ಸ್ಪೋಟಕ ಸುದ್ದಿ ನಿರೂಪಕರು!

Posted By:
Subscribe to Filmibeat Kannada

ಇಡೀ ಕರ್ನಾಟಕ ರಾಜ್ಯವನ್ನೇ ಬೆಚ್ಚಿಬೀಳಿಸುವ ಸ್ಪೋಟಕ ಸುದ್ದಿಗಳನ್ನು ಟಿವಿ ಪರದೆ ಮೂಲಕ ಬಿಸಿಬಿಸಿಯಾಗಿ ಉಣಬಡಿಸುವ ಸುದ್ದಿ ನಿರೂಪಕರು, ಅದೇ ಕಿರುತೆರೆಯಲ್ಲಿ ಶೇಕ್ ಆಗೋ ಹಾಗೆ ಮಾಡಿದ್ದು 'ಈಟಿವಿ' ವಾಹಿನಿಯ ಜನಪ್ರಿಯ ಗೇಮ್ ಶೋ 'ಸೂಪರ್ ಮಿನಿಟ್'.

ಪ್ರತಿ ವಾರ ಸೆಲೆಬ್ರಿಟಿಗಳ ಕೈಲಿ ಮಿನಿಟ್ ಆಟ ಆಡಿಸುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್, ನಿನ್ನೆ (ನವೆಂಬರ್ 07) ಪ್ರಸಾರವಾದ ಕಾರ್ಯಕ್ರಮದಲ್ಲಿ, ಕರ್ನಾಟಕದ ವಿವಿಧ ಸುದ್ದಿ ವಾಹಿನಿಗಳ 'ಟಿ.ಆರ್.ಪಿ' ಆಂಕರ್ ಗಳನ್ನ ಒಟ್ಟುಗೂಡಿಸಿ ಟೈಮ್ ಜೊತೆ ಆಟವಾಡಿಸಿದ್ದು ವಿಶೇಷವಾಗಿತ್ತು. [ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್]

Super Minute1

ನಿಮಿಷ ನಿಮಿಷಕ್ಕೂ ಲೆಕ್ಕ ಇಟ್ಟು, ಬ್ರೇಕಿಂಗ್ ನ್ಯೂಸ್ ನ ಬಾಯ್ಬಿಟ್ಟು ಹೇಳೋ ಸುದ್ದಿ ನಿರೂಪಕರು, 'ಸೂಪರ್ ಮಿನಿಟ್' ಆಟದಲ್ಲಿ, ಅದೇ ಮಿನಿಟ್ ಲೆಕ್ಕದಲ್ಲಿ ಗಡಗಡ ನಡುಗಿಹೋದರು. ಅದಕ್ಕೆ ಮೊದಲನೇ ಆಟ (ಗುಡ್ಡದ ಭೂತ)ದಲ್ಲಿ ಸೋತ ಸುವರ್ಣ ನ್ಯೂಸ್ ಆಂಕರ್ ಪ್ರತಿಮಾ ಭಟ್ ಸಾಕ್ಷಿ. [ಈಟಿವಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಸೂಪರ್ ಶೋ]

ಸುವರ್ಣ ನ್ಯೂಸ್ 24/7 ವಾಹಿನಿಯ ಭಾವನ ಮತ್ತು ಪ್ರತಿಮಾ ಭಟ್, ಸಮಯ ಸುದ್ದಿವಾಹಿನಿಯ ಜೈಪ್ರಕಾಶ್ ಶೆಟ್ಟಿ ಮತ್ತು ಶಿಲ್ಪಾ, ಪಬ್ಲಿಕ್ ಟಿವಿಯ ರಾಧಾ ಹಿರೇಗೌಡರ್, ಕಸ್ತೂರಿ ನ್ಯೂಸ್ 24 ವಾಹಿನಿಯ ದಿವ್ಯಶ್ರೀ ಮತ್ತು ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಸಿನಿಮಾ ವಿಭಾಗದ ಮಾಜಿ ಮುಖ್ಯಸ್ಥ ಗೌರೀಶ್ ಅಕ್ಕಿ ಸೇರಿದಂತೆ ಒಟ್ಟು ಏಳು ಮಂದಿಗೆ ಟೈಮ್ ಜೊತೆ ಆಟಾಡೋ ಟೈಮ್ ಬಂದಿತ್ತು.

ರಜನಿಕಾಂತ್ ಸ್ಟೈಲ್ ನಲ್ಲಿ ಜೆ.ಪಿ.ಶೆಟ್ಟಿ ಮಿಂಚಿಂಗ್!
ಐಸ್ ಕ್ಯಾಂಡಿ ಕಡ್ಡಿ ಮೇಲೆ ಒಂದೇ ಏಟಿಗೆ 6-8 ಡೈಸ್ ಜೋಡಿಸಿ, ಬ್ಯಾಲೆನ್ಸ್ ಮಾಡೋದು ಕಷ್ಟ. ಅಂತದ್ರಲ್ಲಿ, ಚೂರೂ ನಡುಗಡೇ, ಸ್ಟೈಲಾಗಿ ರಜನಿಕಾಂತ್ ರೇಂಜಿಗೆ ಬಹುಬೇಗ ಡೈಸ್ ಕ್ಯಾಂಡಿ ಆಟವನ್ನ ಮುಗಿಸಿದವರು ಜೈಪ್ರಕಾಶ್ ಶೆಟ್ಟಿ.

Super Minute3

ರಬ್ಬರ್ ಸಿಂಗ್ ಗೆ ರಾಣಿಯಾದ ರಾಧಕ್ಕ!
ರಾಜಕಾರಣಿಗಳ ವಿರುದ್ದ ಅಬ್ಬರಿಸಿ ಬೊಬ್ಬಿರಿಯುವ ರಾಧಾ ಹೀರೇಗೌಡರ್, ಟಾರ್ಗೆಟ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಅನ್ನುವುದಕ್ಕೆ 'ಗಬ್ಬರ್ ಅಲ್ಲ ರಬ್ಬರ್ ಸಿಂಗ್' ಆಟದಲ್ಲಿ ಆಡಿದ ರೀತಿ ಬೆಸ್ಟ್ ಎಕ್ಸಾಂಪಲ್. ತೋರು ಬೆರಳಲ್ಲಿ ಸಮಸ್ಯೆಯಿದ್ದರೂ ರಬ್ಬರ್ ಬ್ಯಾಂಡ್ ನಿಂದ ಟಿನ್ ಗಳ ಉರುಳುಸೇವೆ ಮಾಡಿ ಟಾಪ್ 2 ಹಂತಕ್ಕೆ ತಲುಪಿದರು 'ಬಿಗ್ ಬುಲೆಟ್ಟಿನ್ ಮಿರ್ಚಿ' ರಾಧಾ.

ಭಾವನ ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ!
ಆರು ಜನ ಪ್ರತಿಸ್ಪರ್ಧಿಗಳನ್ನ ಹಿಂದಿಕ್ಕಿ ಫೈನಲ್ ಹಂತಕ್ಕೆ ಬಂದ ಸುವರ್ಣ ನ್ಯೂಸ್ ವಾಹಿನಿಯ ಭಾವನ, ಒಂದು ಲಕ್ಷದ ಆಟವನ್ನ ಪೂರ್ಣಗೊಳಿಸುವಲ್ಲಿ ವಿಫಲವಾದರು. ಗ್ಲಾಸ್ ನಲ್ಲಿ ಪಿರಮಿಡ್ ಕಟ್ಟಿ, ಕೆಡಹುವ ಆಟದಲ್ಲಿ ಮೂರೂ ಲೈಫ್ ಕಳೆದುಕೊಂಡು ಸೋಲೊಪ್ಪಿಕೊಂಡರು. ಹೀಗಾಗಿ ಬರೀ 50 ಸಾವಿರಕಷ್ಟೇ ಭಾವನ ಖುಷಿ ಪಡಬೇಕಾಯ್ತು.

ಒಟ್ನಲ್ಲಿ ಇಲ್ಲಿವರೆಗೂ ಬರೀ ಸ್ಟುಡಿಯೋ, ಸುದ್ದಿ, ಟೆನ್ಷನ್ ಅಂತಲೇ ಇರ್ತಿದ್ದ ಸುದ್ದಿ ನಿರೂಪಕರಿಗೆ 'ಸೂಪರ್ ಮಿನಿಟ್' ಮೂಲಕ ಮೈಂಡ್ ಗೆ ಒಂದೊಳ್ಳೆ ರಿಲ್ಯಾಕ್ಸೇಷನ್ ಸಿಕ್ತು. ನ್ಯೂಸ್ ಚಾನೆಲ್ ನೋಡಿ ನೋಡಿ ಬೆಸೆತ್ತಿದ್ದವರಿಗೂ, ನಿರೂಪಕರು ಪಡೋ ಪಾಡನ್ನ ನೋಡಿ ಒಳ್ಳೆ ಎಂಟರ್ಟೇನ್ಮೆಂಟ್ ಸಿಕ್ತು.

English summary
Karnataka's Famous News Channel Anchors took part in ETV Kannada's popular Game show Super Minute. The Highlights of the Program are here. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada