»   » ಯಶಸ್ಸಿನ ಅಮಲು ಗಣೇಶ್ ನೆತ್ತಿಗೇರಿರಲಿಲ್ಲ: ಬಂದ ದಾರಿ ಮರೆಯಲಿಲ್ಲ.!

ಯಶಸ್ಸಿನ ಅಮಲು ಗಣೇಶ್ ನೆತ್ತಿಗೇರಿರಲಿಲ್ಲ: ಬಂದ ದಾರಿ ಮರೆಯಲಿಲ್ಲ.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಬೇಕು ಎಂದು ಕನಸು ಕಾಣುತ್ತಿದ್ದ ಗಣೇಶ್ ಗೆ ಅದೃಷ್ಟ ಖುಲಾಯಿಸಿದ ಸಿನಿಮಾ 'ಮುಂಗಾರು ಮಳೆ'.

ಎಲ್ಲರಿಗೂ ಗೊತ್ತಿರುವ ಹಾಗೆ, 'ಮುಂಗಾರು ಮಳೆ' ಬ್ಲಾಕ್ ಬಸ್ಟರ್ ಸಿನಿಮಾ. ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ 'ಮುಂಗಾರು ಮಳೆ' ಸಿನಿಮಾದ ಬಳಿಕ ಗಣೇಶ್ ರವರ ಬೇಡಿಕೆ ಗಾಂಧಿನಗರದಲ್ಲಿ ಹೆಚ್ಚಾಯ್ತು.

ಗಣೇಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರು ಕನ್ನಡ ಚಿತ್ರರಂಗದ ನಾಯಕಿಯರು.!

Kannada Producer Ramesh Yadav speaks about Ganesh in Weekend with Ramesh

'ಮಳೆ ಹುಡುಗ' ಗಣೇಶ್ ಗೆ ಕೋಟಿಗಟ್ಟಲೆ ಸಂಭಾವನೆ ಕೊಡಲು ನಿರ್ಮಾಪಕರು ಮುಂದೆ ಬಂದರು. ಆದ್ರೆ, ಯಶಸ್ಸಿನ ಅಮಲನ್ನ ನೆತ್ತಿಗೇರಿಸಿಕೊಳ್ಳದೇ... ನಿರ್ಮಾಪಕರಿಗೆ ಮಾತು ಕೊಟ್ಟ ಹಾಗೆ ಗಣೇಶ್ ನಡೆದುಕೊಂಡರು. ಅದಕ್ಕೆ ಸಾಕ್ಷಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಿರ್ಮಾಪಕ ರಮೇಶ್ ಯಾದವ್ ಆಡಿದ ಮಾತುಗಳು.

'ಕಾಮಿಡಿ ಟೈಮ್' ಗಣೇಶ್ ನ ಹೀರೋ ಮಾಡ್ತಿದ್ದೀರಾ.. ತಲೆ ಕೆಟ್ಟಿದ್ಯಾ ನಿಮಗೆ.?

Kannada Producer Ramesh Yadav speaks about Ganesh in Weekend with Ramesh

ಗಣೇಶ್ ಅಭಿನಯದ 'ಕೃಷ್ಣ' ಚಿತ್ರಕ್ಕೆ ರಮೇಶ್ ಯಾದವ್ ಬಂಡವಾಳ ಹೂಡಿದ್ದರು. ''ಚಿಕ್ಕ ಯಶಸ್ಸಿಗೆ ಚೇಂಜಸ್ ಕಾಣುವ ಈ ಪ್ರಪಂಚದಲ್ಲಿ, ಗಣೇಶ್ ಜೊತೆ ನಾನು ಮಾತನಾಡಿದ ಅಮೌಂಟ್ ಆಗ ಹದಿನೈದು ಲಕ್ಷ. 'ಮುಂಗಾರು ಮಳೆ' ಸಕ್ಸಸ್ ಆದ್ಮೇಲೆ, ಗಣೇಶ್ ಗೆ ಕೋಟಿ ಕೋಟಿ ಕೊಡಲು ಎಷ್ಟೋ ಜನ ರೆಡಿ ಇದ್ದರು. ಆದ್ರೆ, ಒಂದು ಪದ ಕೂಡ ಮಾತನಾಡದೆ, ನಾನು ಎಷ್ಟು ಮಾತನಾಡಿದ್ದೆನೋ... ಅದರಲ್ಲಿಯೇ ಸಿನಿಮಾ ಮಾಡಿಕೊಟ್ಟರು'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಮೇಶ್ ಯಾದವ್ ಹೇಳಿದರು.

ಕಷ್ಟದಲ್ಲಿಯೇ ಬೆಳೆದು ಬಂದ ಗಣೇಶ್ ಗೆ ಅದೃಷ್ಟ ಖುಲಾಯಿಸಿದರೂ, ಅವರು ಮಾತ್ರ ಬಂದ ದಾರಿಯನ್ನು ಮರೆತಿರಲಿಲ್ಲ ಎಂಬುದು ಈ ಮಾತುಗಳಲ್ಲಿಯೇ ಸ್ಪಷ್ಟ.

English summary
Kannada Producer Ramesh Yadav speaks about Ganesh in Zee Kannada Channel's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada