For Quick Alerts
  ALLOW NOTIFICATIONS  
  For Daily Alerts

  ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!

  By Harshitha
  |
  ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.! | Filmibeat Kannada

  ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ-5' ಮುಕ್ತಾಯಗೊಂಡಿದೆ. ಬಹುತೇಕ ವೀಕ್ಷಕರ ಇಚ್ಛೆಯಂತೆ ಕನ್ನಡ rapper ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

  'ಬಿಗ್ ಬಾಸ್' ಮನೆಯೊಳಗೆ ತಮ್ಮ ಭಿನ್ನ ವಿಭಿನ್ನ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದ್ದವರು ಚಂದನ್ ಶೆಟ್ಟಿ. ತಮ್ಮ ಪ್ರತಿಭೆಯ ಮೂಲಕ ಅಸಂಖ್ಯಾತ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಚಂದನ್ ಶೆಟ್ಟಿ ಇದೀಗ 'ಬಿಗ್ ಬಾಸ್' ಟ್ರೋಫಿ ಹಿಡಿದು ಗೆಲುವಿನ ನಗೆ ಬೀರಿದ್ದಾರೆ.

  ಟಾಪ್ 5 ಹಂತಕ್ಕೆ ಲಗ್ಗೆ ಇಟ್ಟಿದ್ದ ನಿವೇದಿತಾ ಗೌಡ, ಶ್ರುತಿ ಪ್ರಕಾಶ್, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಅವರನ್ನ ಮಣಿಸಿ 'ಬಿಗ್ ಬಾಸ್' ಗೆಲ್ಲುವಲ್ಲಿ ಚಂದನ್ ಶೆಟ್ಟಿ ಯಶಸ್ವಿ ಆಗಿದ್ದಾರೆ. ಮುಂದೆ ಓದಿರಿ...

  'ಬಿಗ್ ಬಾಸ್ ವಿನ್ನರ್' ಚಂದನ್ ಶೆಟ್ಟಿ

  'ಬಿಗ್ ಬಾಸ್ ವಿನ್ನರ್' ಚಂದನ್ ಶೆಟ್ಟಿ

  ''ಬಿಗ್ ಬಾಸ್ ಕನ್ನಡ-5' ವಿನ್ನರ್ ಚಂದನ್ ಶೆಟ್ಟಿ'' ಎಂದು ಸುದೀಪ್ ಅನೌನ್ಸ್ ಮಾಡ್ತಿದ್ದಂತೆ, ಚಂದನ್ ಶೆಟ್ಟಿ ಸಂಭ್ರಮಿಸಿದರು, ಭಾವುಕರಾದರು. ಚಂದನ್ ಶೆಟ್ಟಿ ತಂದೆ-ತಾಯಿ ಕೂಡ ಆನಂದಭಾಷ್ಪ ಸುರಿಸಿದರು. ತಮ್ಮನ್ನ ಗೆಲ್ಲಿಸಿದ ಕನ್ನಡದ ಕುಲಕೋಟಿಗೆ ಚಂದನ್ ನಮನ ಸಲ್ಲಿಸಿದರು.

  ಅತ್ಯುನ್ನತ ಪದವಿ

  ಅತ್ಯುನ್ನತ ಪದವಿ

  ''ಬಿಗ್ ಬಾಸ್' ಮನೆ ಒಂದು ಗುರುಕುಲ ಇದ್ದ ಹಾಗೆ. ಇಲ್ಲಿ ನಾನು ತುಂಬಾ ಪಾಠ ಕಲಿತಿದ್ದೇನೆ. 'ಬಿಗ್ ಬಾಸ್' ಟ್ರೋಫಿ ನನ್ನ ಜೀವನದ ಅತ್ಯುನ್ನತ ಪದವಿ'' ಎಂದು ಹೇಳಿದ ಚಂದನ್ ಶೆಟ್ಟಿಗೆ ಅರ್ಧ ಕೋಟಿ ಬಹುಮಾನ ಹಣಕ್ಕಿಂತ 'ಬಿಗ್ ಬಾಸ್ ವಿನ್ನರ್' ಎಂಬ ಪಟ್ಟ ಅತ್ಯಮೂಲ್ಯವಾದದ್ದಂತೆ. ಕನ್ನಡ ಭಾಷೆಯನ್ನ ಇಂಟರ್ ನ್ಯಾಷನಲ್ ಲೆವೆಲ್ ಗೆ ತಗೊಂಡು ಹೋಗಬೇಕು ಎಂಬುದು ಚಂದನ್ ಶೆಟ್ಟಿ ಆಸೆ ಅಂತೆ.

  ಕರ್ನಾಟಕದ ಜನತೆಗೆ ಥ್ಯಾಂಕ್ಸ್

  ಕರ್ನಾಟಕದ ಜನತೆಗೆ ಥ್ಯಾಂಕ್ಸ್

  ''ಜನ ನನಗೆ ಇಷ್ಟೊಂದು ಸಪೋರ್ಟ್ ಮಾಡಿರುವುದರಿಂದ ನನ್ನ ಆತ್ಮವಿಶ್ವಾಸ ಜಾಸ್ತಿ ಆಗಿದೆ. ಜನರಿಗೆ ಎಷ್ಟು ಥ್ಯಾಂಕ್ಸ್ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಎಲ್ಲರೂ ನನ್ನ ಕೈಬಿಟ್ಟಿದ್ದಾಗ ನನ್ನ ಕೈ ಹಿಡಿದಿದ್ದು ಕರ್ನಾಟಕದ ಜನತೆ. ಈ ವೇದಿಕೆ ಮೂಲಕ ನಾನು ಕನ್ನಡಿಗರಿಗೆ ನಮನ ಸಲ್ಲಿಸುತ್ತೇನೆ. ನನಗೆ ವೋಟ್ ಮಾಡಿರುವ ಪ್ರತಿಯೊಬ್ಬರಿಗೂ ಸದಾ ಚಿರಋಣಿ'' ಎಂದರು ಚಂದನ್ ಶೆಟ್ಟಿ

  ವಿನ್ನರ್ ಚಂದನ್ ಗೆ ಸಿಕ್ಕಿದ್ದೇನು.?

  ವಿನ್ನರ್ ಚಂದನ್ ಗೆ ಸಿಕ್ಕಿದ್ದೇನು.?

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಆದ ಚಂದನ್ ಶೆಟ್ಟಿಗೆ ಟ್ರೋಫಿಯೊಂದಿಗೆ ಅರ್ಧ ಕೋಟಿ ರೂಪಾಯಿ ಲಭಿಸಿದೆ.

  ತಂದೆಗೆ ಹಣ ಕೊಟ್ಟ ಚಂದನ್

  ತಂದೆಗೆ ಹಣ ಕೊಟ್ಟ ಚಂದನ್

  ತಮಗೆ ಸಿಕ್ಕ ಅರ್ಧ ಕೋಟಿ ರೂಪಾಯಿ ಬಹುಮಾನ ಹಣವನ್ನ ತಮ್ಮ ತಂದೆಗೆ ನೀಡಿದರು ಚಂದನ್ ಶೆಟ್ಟಿ.

  ರನ್ನರ್ ಅಪ್ ಆಗಿದ್ದು ದಿವಾಕರ್

  ರನ್ನರ್ ಅಪ್ ಆಗಿದ್ದು ದಿವಾಕರ್

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ವಿನ್ನರ್ ಆದ್ರೆ ರನ್ನರ್ ಅಪ್ ಸ್ಥಾನ ಅಲಂಕರಿಸಿದ್ದು ಜನಸಾಮಾನ್ಯ ಸ್ಪರ್ಧಿ ಸೇಲ್ಸ್ ಮ್ಯಾನ್ ದಿವಾಕರ್. ಇನ್ನೂ ಮೂರನೇ ಸ್ಥಾನಕ್ಕೆ ಜಯರಾಂ ಕಾರ್ತಿಕ್ ತೃಪ್ತಿ ಪಟ್ಟುಕೊಳ್ಳಬೇಕಾಯ್ತು.

  'ರನ್ನರ್ ಅಪ್' ದಿವಾಕರ್ ಗೆ ಸಿಕ್ಕಿದ್ದೇನು.?

  'ರನ್ನರ್ ಅಪ್' ದಿವಾಕರ್ ಗೆ ಸಿಕ್ಕಿದ್ದೇನು.?

  'ರನ್ನರ್ ಅಪ್' ಆದ ದಿವಾಕರ್ ಗೆ ಟ್ರೋಫಿ ಜೊತೆಗೆ 'ಸೆರಾ' ವತಿಯಿಂದ ಒಂದು ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ.

  ದಿವಾಕರ್ ಏನಂದರು.?

  ದಿವಾಕರ್ ಏನಂದರು.?

  ''ಚಂದನ್ ಶೆಟ್ಟಿ ಗೆದ್ದಿದ್ದಕ್ಕೆ ತುಂಬಾ ಖುಷಿ ಇದೆ. ನಾನು ಈ ಮಟ್ಟಕ್ಕೆ ಬರಲು ಕಾರಣರಾದ ಇಡೀ ಕರ್ನಾಟಕ ಜನತೆ ನಮನ ಸಲ್ಲಿಸುತ್ತೇನೆ'' ಎಂದರು ದಿವಾಕರ್.

  English summary
  Kannada Rapper Chandan Shetty wins Bigg Boss Kannada 5 reality show. Common Man Contestant (Sales Man) Diwakar becomes 1st Runner up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X