Don't Miss!
- Sports
Ind vs NZ 2nd T20I: 2ನೇ ಪಂದ್ಯದ ಸಂಭಾವ್ಯ ಆಡುವ ಬಳಗ, ಸಮಯ, ನೇರಪ್ರಸಾರದ ಮಾಹಿತಿ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಭಿಮಾನಿಗಳ ನೆಚ್ಚಿನ 'ಮರಳಿ ಮನಸಾಗಿದೆ' ಧಾರಾವಾಹಿ ಶೀಘ್ರದಲ್ಲೇ ಅಂತ್ಯ?
'ಮರಳಿ ಮನಸಾಗಿದೆ' ಧಾರಾವಾಹಿ ಕಥೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಯಾರ ಬದುಕು ಎತ್ತ ಸಾಗುತ್ತೆ ಎಂಬ ಕುತೂಹಲ ಇರುವಾಗಲೇ ಧಾರಾವಾಹಿ ಅಂತ್ಯವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿದೆ.
ಜನಪ್ರಿಯ ಧಾರಾವಾಹಿ ಅಂತ್ಯವಾಗುತ್ತಿದೆ ಎನ್ನುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಅಲ್ಲದೇ, ಧಾರಾವಾಹಿಯನ್ನು ಇಷ್ಟು ಬೇಗ ಮುಗಿಸಲು ಕಾರಣವೇನು ಎಂಬ ಪ್ರಶ್ನೆಯೂ ಎದ್ದಿದೆ. ಆದರೆ, ಸತ್ಯ ವಿಚಾರ ಇನ್ನೂ ಬಹಿರಂಗವಾಗಿಲ್ಲ.
ನಟಿ
ಚಂದ್ರಕಲಾ
ಮೋಹನ್
ಅವರ
ಹೊಸ
ಧಾರಾವಾಹಿ:
ಮತ್ತೆ
ಪೌರಾಣಿಕ
ಪಾತ್ರದಲ್ಲಿ
ಅಜ್ಜಮ್ಮ!
ಅದರಲ್ಲೂ 'ಮರಳಿ ಮನಸಾಗಿದೆ' ಧಾರಾವಾಹಿ ಶುರುವಾಗಿ ಕೇವಲ ಒಂದು ವರ್ಷ ಐದು ತಿಂಗಳಾಗಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿ 300 ಎಪಿಸೋಡ್‌ಗಳನ್ನು ಯಶಸ್ವಿಯಾಗಿ ಪೂರೈಸಿ ಸಂಭ್ರಮಿಸಿತ್ತು. ಅದಾಗಲೇ ಧಾರಾವಾಹಿ ಅಂತ್ಯವಾಗುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ವೈಷ್ಣವಿಯನ್ನು ಪ್ರೀತಿಸುತ್ತಿರುವ ನಾಯಕ
ಧಾರಾವಾಹಿಯಲ್ಲಿ ಪೊಲೀಸ್ ಆಫೀಸರ್ ವಿಕ್ರಾಂತ್ ನಾಯಕ್ ಮತ್ತು ವೈಷ್ಣವಿ ಪ್ರೀತಿಸುತ್ತಿರುತ್ತಾರೆ. ಆದರೆ ಕಾರಣಾಂತರಗಳಿಂದ ವಿಕ್ರಾಂತ್ ಇನ್ನೂ ಓದುತ್ತಿದ್ದ ಸ್ಪಂದನಾಳನ್ನು ಮದುವೆಯಾಗಿ ಮನೆಗೆ ಕರೆ ತರುತ್ತಾನೆ. ಸ್ಪಂದನಾಳನ್ನು ಮದುವೆಯಾದರೂ ವಿಕ್ರಾಂತ್ ಮನಸಲ್ಲಿ ವೈಷ್ಣವಿ ಮೇಲಿನ ಪ್ರೀತಿ ಹಾಗೆ ಇರುತ್ತದೆ. ಈ ನಡುವೆ ವಿಕ್ರಾಂತ್ ತಮ್ಮ ಶಮಂತ್ ವೈಷ್ಣವಿಯನ್ನು ಮದುವೆಯಾಗುತ್ತಾನೆ. ಆದರೆ ವೈಷ್ಣವಿ ಮತ್ತು ಸ್ಪಂದನಾ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ಬಿಡುವುದಿಲ್ಲ. ಸ್ಪಂದನಾಗೆ ವಿಕ್ರಾಂತ್, ವೈಷ್ಣವಿಯನ್ನು ಪ್ರೀತಿಸುವುದು ಇಷ್ಟವಿರುವುದಿಲ್ಲ. ಇನ್ನು ಮನೆಯಿಂದ ಕೆಲ ಕಾಲ ನಾಪತ್ತೆಯಾಗಿದ್ದ ಶಮಂತ್ ವಾಪಸ್ ಬಂದಿದ್ದಾನೆ. ವೈಷ್ಣವಿ ಇಷ್ಟವಿಲ್ಲದಿದ್ದರೂ ಶಮಂತ್ ಹೆಂಡತಿಯಂತೆಯೇ ನ ಟಿಸುತ್ತಿರುತ್ತಾಳೆ. ಸ್ಪಂದನಾ ವಿಕ್ರಾಮತ್ ಬೇರೆಯವರನ್ನು ಪ್ರೀತಿಸುತ್ತಿರುವುದಕ್ಕೆ ಪದೇ ಪದೇ ಜಗಳ ಆಡುತ್ತಿರುತ್ತಾನೆ. ಇದೀಗ ಸ್ಪಂದನಾಳಿಗೆ ಬೇಸರವಾಗಿ ಮನೆ ಬಿಟ್ಟು ಹೋಗಲು ಮುಂದಾಗಿದ್ದಾಳೆ.

ಸತೀಶ್ ಕೃಷ್ಣ ನಿರ್ದೇಶನ
ಧಾರಾವಾಹಿ ಇಷ್ಟು ಚೆನ್ನಾಗಿ ನಡೆಯುತ್ತಿರುವಾಗಲೇ ಮುಗಿಯುತ್ತಿದೆ. ಈ ಧಾರಾವಾಹಿಯಲ್ಲಿ ನಟ ಚಂದನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ರಾಂತ್ ನಾಯಕನಿಗೆ ಜೋಡಿಯಾಗಿ ನಟಿ ದಿವ್ಯಾ ನಾಯಕಿ ಸ್ಪಂದನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಬಣ್ಣ ಹಚ್ಚಿದ್ದು, ಸತೀಶ್ ಕೃಷ್ಣ ನಿರ್ದೇಶಿಸಿದ್ದಾರೆ. ಇನ್ನು ವಿನಯ್ ಗೌಡ, ನಂದಿನಿ ಗೌಡ, ಮರೀನಾ ತಾರಾ, ಶ್ರೀನಾಥ್ ವಸಿಷ್ಠ, ಅರವಿಂದ್ ರಾವ್ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

ಧಾರಾವಾಹಿ ಅಂತ್ಯವಾಗೋದು ಖಚಿತ
ನಟ ಚಂದನ್ ಕುಮಾರ್ ಬಹಳ ದೊಡ್ಡ ಗ್ಯಾಪ್ ಪಡೆದ ಮೇಲೆ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅಭಿಮಾನಿಗಳು ಚಂದನ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂತಸಗೊಂಡಿದ್ದರು. ಇದೀಗ ಮರಳಿ ಮನಸಾಗಿದೆ ಧಾರಾವಾಹಿ ಮುಗಿದ ಮೇಲೆ, ಮುಂದಿನ ಪ್ರಾಜೆಕ್ಟ್ ಯಾವುದು ಎಂಬು ಯಾರಿಗೂ ತಿಳಿದಿಲ್ಲ. ಚಂದನ್ ನನ್ನು ಮಿಸ್ ಮಾಡಿಕೊಳ್ಳಲು ಬಯಸದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 'ಮರಳಿ ಮನಸಾಗಿದೆ' ಧಾರಾವಾಹಿಯ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿರುವ ಚಂದನ್ ಕುಮಾರ್, "ಶುಭಂ" ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ಧಾರಾವಾಹಿ ಅಂತ್ಯವಾಗುತ್ತಿರುವುದು ಪಕ್ಕಾ ಆಗಿದೆ

ರೇಣುಕಾ ಯಲ್ಲಮ್ಮನ ಪವಾಡ
ಇದಕ್ಕೆ ಕಾರಣವೇನೆಂದರೆ, ಸ್ಟಾರ್ ಸುವರ್ಣದಲ್ಲಿ ಮೂಡಿ ಬರಲಿರುವ ಹೊಸ ಧಾರಾವಾಹಿ ಎಂದು ಹೇಳಲಾಗಿದೆ. 'ಉಧೋ ಉಧೋ ರೇಣುಕಾ ಯಲ್ಲಮ್ಮ' ಧಾರಾವಾಹಿ ಜನವರಿ 23ರಿಂದ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ನಟಿ ಚಂದ್ರಕಲಾ ಮೋಹನ್ ಮಂಜಮ್ಮ ಎಂಬ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯ ನಿರ್ದೇಶಕ ತ್ರಿಶೂಲ್ ಹಾಗೂ ನಿರ್ಮಾಪಕ ಶ್ರೀನಿವಾಸ್. ಈ ಬಗ್ಗೆ ಸ್ಟಾರ್ ಸುವರ್ಣ ವಾಹಿನಿ ಅದಾಗಲೇ ಪ್ರೋಮೋಗಳನ್ನು ಕೂಡ ರಿಲೀಸ್ ಮಾಡಿದೆ. ಇನ್ನು ಈ ಧಾರಾವಾಹಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮನ ಪವಾಡಗಳನ್ನು ತೋರಿಸಲಾಗಿದೆ.