twitter
    For Quick Alerts
    ALLOW NOTIFICATIONS  
    For Daily Alerts

    Maayamruga Serial: 'ಮಾಯಾಮೃಗ' ಟೀಂ ನಿಮ್ಮ ಮುಂದೆ ಹಾಜರ್ ಆಗಿದ್ಯಾಕೆ?

    By ಪ್ರಿಯಾ ದೊರೆ
    |

    'ಮಾಯಾಮೃಗ.. ಮಾಯಾಮೃಗ.. ಮಾಯಾಮೃಗವೆಲ್ಲಿ' ಎನ್ನುತ್ತಲೇ ಪ್ರಸಾರವಾಗುತ್ತಿದ್ದ 'ಮಾಯಾಮೃಗ' ಧಾರಾವಾಹಿಯನ್ನು ಇಷ್ಟಪಡದ ಜನರಿಲ್ಲ. 'ಮಾಯಾಮೃಗ' ಧಾರಾವಾಹಿ ಕನ್ನಡದ ಶ್ರೇಷ್ಠ ಧಾರಾವಾಹಿಗಳಲ್ಲಿ ಒಂದು. 1998ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಆ ಕಾಲದಲ್ಲೇ ಮನೆ ಮಂದಿಯನ್ನೆಲ್ಲ ಹಿಡಿದಿಟ್ಟಿತ್ತು.

    2014ರಲ್ಲಿ 'ಮಾಯಾಮೃಗ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವಾಗಿತ್ತು. ಆಗಲೂ 'ಮಾಯಾಮೃಗ' ಧಾರಾವಾಹಿಯನ್ನು ನೋಡಿದ್ದವರು ಮತ್ತೆ ನೋಡಿ ಸಂತಸ ಪಟ್ಟಿದ್ದರು. ಈಗಲೂ 'ಮಾಯಾಮೃಗ' ಧಾರಾವಾಹಿಯನ್ನು ಹಲವರು ಇಷ್ಟಪಡುತ್ತಾರೆ. 'ಮಾಯಾಮೃಗ' ಕ್ಲಾಸಿಕ್ ಧಾರಾವಾಹಿ ಎಂದರೆ ತಪ್ಪಾಗಲಾರದು.

    Gattimela : ಕೊಲೆ ಮಾಡಿ, ಮುಡಿ ಕಟ್ಟಲ್ಲ ಎಂದು ಸುಹಾಸಿನಿ ಹೊಸ ನಾಟಕ!Gattimela : ಕೊಲೆ ಮಾಡಿ, ಮುಡಿ ಕಟ್ಟಲ್ಲ ಎಂದು ಸುಹಾಸಿನಿ ಹೊಸ ನಾಟಕ!

    ಟಿ.ಎನ್. ಸೀತಾರಾಮ್ ನಿರ್ದೇಶನದ ಈ ಸೀರಿಯಲ್‌ಗೆ ಈಗಲೂ ಬೇಡಿಕೆ ಇದೆ. ಪ್ರೇಕ್ಷಕರಿಗಾಗಿ ವೆಬ್ ಸಿರೀಸ್ ರೂಪದಲ್ಲಿ ಭೂಮಿಕಾ ಟಾಕೀಸ್ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈಗಲೂ ಪ್ರೇಕ್ಷಕರು ನಿತ್ಯ 'ಮಾಯಾಮೃಗ' ಧಾರಾವಾಹಿಯನ್ನು ಯುಟ್ಯೂಬ್‌ನಲ್ಲಿ ಮೊದಲಿನಷ್ಟೇ ಕುತೂಹಲದಿಂದ ನೋಡುತ್ತಾರೆ.

    Kannada Serial Mayamruga Samvada On April 16th

    1998ರಲ್ಲಿ 'ಮಾಯಾಮೃಗ' ಧಾರಾವಾಹಿಯನ್ನು ಮೊದಲ ಬಾರಿಗೆ ಪ್ರಸಾರ ಮಾಡಲಾಗಿದ್ದರೂ ಇಂದಿಗೂ ಇದನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕೊಂಚವೂ ಕಡಿಮೆಯಾಗಿಲ್ಲ. ಮಧ್ಯಮ ವರ್ಗದ ಐವರು ಹೆಣ್ಣು ಮಕ್ಕಳ ಜೀವನದ ಸುತ್ತ ನಡೆಯುವ ಈ ಕಥೆ ಇಂದಿಗೂ ಎಂದೆಂದಿಗೂ ನೋಡುವಂತಹ ಧಾರಾವಾಹಿ. ಧಾರಾವಾಹಿಯಲ್ಲಿನ ಭಾಷೆಯ ಬಳಕೆ ಆಗಿರಬಹುದು, ಸಣ್ಣ ಘಟನೆಗಳೂ ಕೂಡ ಎಲ್ಲಾ ಕಾಲಕ್ಕೂ ಹೋಲಿಸಿಕೊಳ್ಳುವಂತಹದ್ದು. ಮಾಳವಿಕಾ ಅವಿನಾಶ್, ಮಂಜು ಭಾಷಿಣಿ, ಎಂ.ಡಿ. ಪಲ್ಲವಿ, ಎಸ್. ಎನ್. ಸೇತುರಾಂ, ಲಕ್ಷ್ಮೀ ಚಂದ್ರಶೇಖರ್, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಅವಿನಾಶ್, ಸುಂದರ್ ರಾಜ್, ರಾಜೇಶ್ ನಟರಂಗ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದರು. ಈ ಧಾರಾವಾಹಿಗೆ ಟಿ.ಎನ್.ಸೀತಾರಾಮ್ ಹಾಗೂ ನಾಗೇಂದ್ರ ಶಾ ನಿರ್ದೇಶನವಿತ್ತು.

    Kannada Serial Mayamruga Samvada On April 16th

    ಪ್ರೇಕ್ಷಕರು ಧಾರಾವಾಹಿ ಬಗ್ಗೆ ತಮಗಿದ್ದ ಕುತೂಹಲ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿ ಎಂಬ ಸಲುವಾಗಿ ಟಿ.ಎನ್ ಸೀತಾರಾಂ ಅವರು ಸಂವಾದ ಕಾರ್ಯಕ್ರಮವನ್ನು ಮೊದಲ ಬಾರಿಗೆ ಪ್ರಾರಂಭಿಸಿದರು. 'ಮಾಯಾಮೃಗ' ಸಂವಾದದಂದು ಹೊಸ ಟ್ರೆಂಡ್ ಅನ್ನೇ ಸೃಷ್ಟಿಸಿದ್ದರು. ಪ್ರೇಕ್ಷಕರ ಪ್ರಶ್ನೆಗಳಿಗೆ ನಟ-ನಟಿಯರು, ನಿರ್ದೇಶಕರು ಉತ್ತರ ನೀಡುತ್ತಿದ್ದರು. ಈಗ ಇದೇ ಸಂವಾದವನ್ನು ಸೀರಿಯಲ್ ಸಂತೆ ಎಂದು ಧಾರಾವಾಹಿ ತಂಡಗಳು ನಡೆಸುತ್ತಿವೆ. ಇದೀಗ ಮತ್ತೆ 'ಮಾಯಾಮೃಗ' ಸಂವಾದ ನಡೆಸಲು ಟಿಎನ್ ಸೀತಾರಾಮ್ ಮುಂದಾಗಿದ್ದಾರೆ.

    'ಮಾಯಾಮೃಗ' ತಂಡ ಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಇದೇ ಏಪ್ರಿಲ್ 16 ರಂದು ಬೆಳಗ್ಗೆ 10 ಗಂಟೆಗೆ 'ಮಾಯಾಮೃಗ' ಸಂವಾದವನ್ನು ಆಯೋಜಿಸಲಾಗಿದೆ. ಎನ್.ಆರ್.ಕಾಲೋನಿಯಲ್ಲಿರುವ ಸಿ.ಅಶ್ವತ್ಥ್ ಕಲಾಭವನದಲ್ಲಿ ಸಂವಾದ ನಡೆಯಲಿದೆ. ಆದರೆ ಸೀಮಿತ ಮಂದಿಗಷ್ಟೇ ಸಂವಾದದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಗೂಗಲ್ ಫಾರಂ ಫಿಲ್ ಮಾಡಿ ನೋಂದಾಯಿಸಿಕೊಳ್ಳಬೇಕು. ಒಂದು ಫಾರಂಗೆ ಇಬ್ಬರಿಗಷ್ಟೇ ಪ್ರವೇಶವಿರುತ್ತದೆ.

    Recommended Video

    KGF 2 ತಂಡದ ಮೇಲೆ ಕನ್ನಡಪರ ಸಂಘಟನೆಗಳ ಅಸಮಾಧಾನ ಯಾಕೆ ಗೊತ್ತಾ? | Yash

    'ಮಾಯಾಮೃಗ' ಒಂದು ಕಾಲದಲ್ಲಿ ಅಪಾರ ಜನಪ್ರಿಯತೆ ಪಡೆದ ಧಾರಾವಾಹಿ. 'ಮಾಯಾಮೃಗ' ಧಾರಾವಾಹಿಯಲ್ಲಿ ನಟಿಸಿದ್ದ ಅನೇಕ ಕಲಾವಿದರಲ್ಲಿ ಈಗ ಕೆಲವರಷ್ಟೇ ನಟನೆಯನ್ನು ಮುಂದುವರೆಸಿದ್ದು, ಉಳಿದೆಷ್ಟೋ ಜನ ವೃತ್ತಿ ಬಿಟ್ಟಿದ್ದಾರೆ. ಇವರನ್ನೆಲ್ಲಾ ಪ್ರೇಕ್ಷಕರು ನೋಡಲು ಈ ಸಂವಾದ ಕಾರ್ಯಕ್ರಮ ಅವಕಾಶ ಮಾಡಿಕೊಡಲಿದೆ. ನೀವು ಗೂಗಲ್ ಫಾರಂ ಫಿಲ್ ಮಾಡಿ ಏಪ್ರಿಲ್ 16 ರಂದು ಶನಿವಾರ ಬೆಳಗ್ಗೆ ಸಂವಾದ ಕಾರ್ಯಕ್ರಮಕ್ಕೆ ಮಿಸ್ ಮಾಡದೇ ಹೋಗಿ. ಮೊದಲು ಬಂದವರಿಗಷ್ಟೇ ಆದ್ಯತೆ.

    English summary
    kannada Serial Mayamruga Samvada Program To Be Held On April 16th Says Director Seetharam
    Tuesday, April 5, 2022, 19:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X