For Quick Alerts
  ALLOW NOTIFICATIONS  
  For Daily Alerts

  ಒಂದು ವರ್ಷ ಪೂರೈಸಿದ 'ಪುಟ್ಟಕ್ಕನ ಮಕ್ಕಳು'

  By ಪ್ರಿಯಾ ದೊರೆ
  |

  ಹೊಸ ಮೈಲುಗಲ್ಲಿ ಸಾಧಿಸಿದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ. ವಿಭಿನ್ನವಾದ ಕಥೆಯೊಂದಿಗೆ ಜೀ ಕನ್ನಡ ವಾಹಿನಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಟಿಆರ್‌ಪಿ ವಿಚಾರದಲ್ಲಿ ಧಾರಾವಾಹಿ ಪ್ರಸಾರ ಶುರುವಾದ ದಿನದಿಂದಲೂ ಅಗ್ರಸ್ಥಾನದಲ್ಲೇ ಇದೆ.

  ಇಲ್ಲಿವರೆಗೂ ಒಂದು ಎಪಿಸೋಡಿನಲ್ಲೂ ಬೋರ್ ಎನಿಸೋ ವಿಚಾರಗಳನ್ನು ಧಾರಾವಾಹಿಯಲ್ಲಿ ಪ್ರಸಾರವಾಗಿಲ್ಲ. ಬಡತನ, ಸಿರಿತನ, ಹಗೆತನ, ಪ್ರೀತಿ-ಪ್ರೇಮದ ಒದ್ದಾಟ, ನ್ಯಾಯ, ಅನ್ಯಾಯ ಈ ಎಲ್ಲಾ ಅಂಶಗಳು ಧಾರಾವಾಹಿಯಲ್ಲಿದ್ದು, ಪ್ರೇಕ್ಷಕರನ್ನು ಹಾಗೇ ಹಿಡಿದಿಟ್ಟುಕೊಂಡಿದೆ.

  ಸಿರಿ ತಂದೆಗಿರುವ ಮರೆವಿನ ಕಾಯಿಲೆ ದತ್ತ ಮುಂದೆ ಬಯಲಾಗುತ್ತಾ?ಸಿರಿ ತಂದೆಗಿರುವ ಮರೆವಿನ ಕಾಯಿಲೆ ದತ್ತ ಮುಂದೆ ಬಯಲಾಗುತ್ತಾ?

  ದಿನ ದಿನಕ್ಕೂ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಧಾರಾವಾಹಿ ಅಂದರೆ ಮೂಗು ಮುರಿಯುತ್ತಿದ್ದವರು ಕೂಡ ಈಗ 'ಪುಟ್ಟಕ್ಕನ ಮಕ್ಕಳು' ಅನ್ನು ಬಿಟ್ಟು ಬಿಡದಂತೆ ನೋಡಲು ಶುರು ಮಾಡಿದ್ದಾರೆ.

  ಕುತೂಹಲ ಹೆಚ್ಚಿಸುತ್ತಿರುವ ಕಥೆ

  ಕುತೂಹಲ ಹೆಚ್ಚಿಸುತ್ತಿರುವ ಕಥೆ

  'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ನಟಿಸಿದ್ದಾರೆ. ಇನ್ನುಳಿದಂತೆ ಸಂಜನಾ ಬುರ್ಲಿ, ಮಂಜು ಭಾಷಿಣಿ, ಧನುಷ್, ಪವನ್ ಕುಮಾರ್, ಚಂದನಾ ಮಹಾಲಿಂಗಯ್ಯ, ಸಾರಿಕಾ ರಾಜೆ ಅರಸ್, ಅಕ್ಷರ, ಹಂಸ ನಾರಾಯಣ್ ಮತ್ತು ಅನೇಕ ಪ್ರಮುಖ ನಟರು ಧಾರಾವಾಹಿಯಲ್ಲಿ ಇದ್ದಾರೆ. ಕಾರ್ಯಕ್ರಮದಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿದೆ. ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಕಥೆ ಇದೆ. ಒಟ್ಟಾರೆ ಧಾರಾವಾಹಿ ಕಥೆಯೂ ಅಷ್ಟೇ ಅಚ್ಚುಕಟ್ಟಾಗಿ ಸಾಗುತ್ತಿದೆ. ಕುತೂಹಲ ಉಳಿಸಿಕೊಂಡು ಕಥೆ ಸಾಗುತ್ತಿದೆ. ಮಂಡ್ಯ ಭಾಷೆಯಲ್ಲಿ ಡೈಲಾಗ್‌ಗಳಿದ್ದು, ಈ ಭಾಷೆಯ ಶೈಲಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಎಪಿಸೋಡ್‌ಗಳನ್ನು ಮಿಸ್ ಮಾಡದೇ ನೋಡಲು ಕಾತುರರಾಗಿರುತ್ತಾರೆ.

  ಪುಟ್ಟಕ್ಕನ ಕಷ್ಟಕ್ಕೆ ಜೊತೆಯಾದ ಊರಿಗರು

  ಪುಟ್ಟಕ್ಕನ ಕಷ್ಟಕ್ಕೆ ಜೊತೆಯಾದ ಊರಿಗರು

  ಧಾರಾವಾಹಿಯ ಕಥೆ ವಿಭಿನ್ನವಾಗಿದ್ದು, ಪುಟ್ಟಕ್ಕನಿಗೆ ಮೂವರು ಹೆಣ್ಣುಮಕ್ಕಳು. ಗಂಡು ಮಗು ಬೇಕೆಂದು ಗೋಪಾಲಯ್ಯ ಹೇಳದೇ ಕೇಳದೇ ಹೋಗಿ ರಾಜೇಶ್ವರಿಯನ್ನು ಮದುವೆಯಾಗುತ್ತಾನೆ. ಗೋಪಾಲಯ್ಯನಿಗೆ ಪುಟ್ಟಕ್ಕನ ಪೋಷಕರು ವರದಕ್ಷಿಣೆಯಾಗಿ ಮನೆಯನ್ನು ಕೊಡುತ್ತಾರೆ. ಆ ಮನೆಯಲ್ಲಿ ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಿರುತ್ತಾಳೆ. ಪಕ್ಕದಲ್ಲೇ ಒಂದು ಮೆಸ್ ತೆರೆದು ಜೀವನ ನಡೆಸುತ್ತಿರುತ್ತಾಳೆ. ಸುತ್ತೂರಲ್ಲಿ ಪುಟ್ಟಕ್ಕನ ಮೆಸ್ ಎಂದರೆ ತುಂಬಾ ಫೇಮಸ್. ಪುಟ್ಟಕ್ಕ ಹಾಗೂ ಅವರ ಮಕ್ಕಳ ಮೇಲೆ ಊರ ಜನ ಗೌರವ ಇಟ್ಟಿರುತ್ತಾರೆ. ಇವರ ಸುತ್ತ ಕಥೆ ಸಾಗಿದೆ.

  ಮಕ್ಕಳಿಗಾಗಿ ಕಷ್ಟ ಪಡುತ್ತಿರಯವ ಪುಟ್ಟಕ್ಕ

  ಮಕ್ಕಳಿಗಾಗಿ ಕಷ್ಟ ಪಡುತ್ತಿರಯವ ಪುಟ್ಟಕ್ಕ

  ಸದ್ಯ ಪುಟ್ಟಕ್ಕನ ಮಗಳು ಸಹನಾ ಮೇಷ್ಟ್ರನ್ನು ಪ್ರೀತಿಸುತ್ತಿರುತ್ತಾಳೆ. ಈ ವಿಚಾರ ತಿಳಿದ ಪುಟ್ಟಕ್ಕ ಮಗಳ ಮದುವೆ ಮಾಡಲು ಮುಂದಾಗಿದ್ದಾಳೆ. ಆದರೆ ಮೇಷ್ಟ್ರ ತಂದೆ-ತಾಯಿ ಪುಟ್ಟಕ್ಕನನ್ನು ಬಾಗಿಲಲ್ಲೇ ನಿಲ್ಲಿಸಿ ಅವಮಾನ ಮಾಡುತ್ತಾರೆ. ಆದರೆ ಪುಟ್ಟಕ್ಕ ಮಗಳಿಗೋಸ್ಕರ ಎಲ್ಲಾ ಅನುಮಾನವನ್ನು ಸಹಿಸಿಕೊಂಡಿರುತ್ತಾಳೆ. ಕಥೆ ಮುಂದೆ ಹೇಗೆ ಸಾಗುತ್ತದೆ. ಮಕ್ಕಳನ್ನು ಗೌರವಿತವಾಗಿ ಓದಿ ಬೆಳೆಸಿದ ಪುಟ್ಟಕ್ಕ, ಮಕ್ಕಳ ಮದುವೆ ಮಾಡಲು ಇನ್ನೆಷ್ಟು ಕಷ್ಟಪಡುತ್ತಾಳೋ ಎಂಬ ಕುತೂಹಲ ಧಾರಾವಾಹಿಯಲ್ಲಿದೆ.

  1 ವರ್ಷ ಪೂರೈಸಿದ ಧಾರಾವಾಹಿ

  1 ವರ್ಷ ಪೂರೈಸಿದ ಧಾರಾವಾಹಿ

  ಇನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾಗಿ ಅದಾಗಲೇ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಡಿಸೆಂಬರ್ 13ರಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾಯ್ತು. ಇಂದಿಗೆ ಈ ಧಾರಾವಾಹಿ ಶುರುವಾಗಿ ವರ್ಷವಾಗಿದೆ. ಇದರ ಬಗ್ಗೆ ನಟಿ ಅಕ್ಷರಾ ಅವರು ತಮ್ಮ ಇನ್ ಸ್ಟಾಗ್ರಾಂಪೇಜ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಧಾರಾವಾಹಿಯ 275ನೇ ಸಂಚಿಕೆ ಪ್ರಸಾರಗೊಡಿದ್ದು, ಕಥೆ ಬಹಳ ಇಂಟರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಅಕ್ಷರ ಅವರ ಪೋಸ್ಟ್‌ಗೆ ಹಲವರು ಶುಭಾಷಯ ತಿಳಿಸಿ ಕಮೆಂಟ್ ಮಾಡಿದ್ದಾರೆ. ಅಕ್ಷರಾ ಅವರಷ್ಟೇ ಅಲ್ಲದೇ ಸಂಜನಾ ಬುರ್ಲಿ ಅವರು ಕೂಡ ಈ ಸಂತಹ ಹಂಚಿಕೊಂಡಿದ್ದಾರೆ.

  English summary
  Kannada serial Puttakkana Makkalu celebrates one year of journey. Fans wish Team on Successful journey.
  Tuesday, December 13, 2022, 21:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X